ಬಿಗ್ ಬಾಸ್ ನಲ್ಲಿ ಅತಿ ಹೆಚ್ಚು ವೋಟ್ ಪಡೆದುಕೊಂಡ ಸ್ಪರ್ಧಿ ಯಾರು ಗೊತ್ತಾ?? ಯಾರ್ಯಾರಿಗೆ ಎಷ್ಟನೇ ಸ್ಥಾನ ಗೊತ್ತಾ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಇದೀಗ ಬಿಗ್ ಬಾಸ್ ಮನೆಯಲ್ಲಿ ಕಳೆದ ಬಾರಿ ಕ್ಯಾಪ್ಟನ್ ರವರನ್ನು ಹೊರತು ಪಡಿಸಿ ಉಳಿದ ಎಲ್ಲಾ ಸ್ಪರ್ಧಿಗಳನ್ನು ನಾಮಿನೇಟ್ ಮಾಡಲಾಗಿತ್ತು. ಮನೆಯಲ್ಲಿ ಆತ ಬಿಗಿ ಆಗುತ್ತಿರುವ ಸಂದರ್ಭದಲ್ಲಿ ಮನೆಯಲ್ಲಿ ಉಳಿಯಬೇಕು ಎಂದರೆ ಪ್ರತಿಯೊಬ್ಬ ಸದಸ್ಯರು ಉತ್ತಮ ಆಟ ಆಡಬೇಕು ಎಂಬ ಕಾರಣ ನೀಡಿ ಎಲ್ಲರನ್ನು ಕೂಡ ನಮಿನೆಟ್ ಮಾಡಿದ ಬಿಗ್ ಬಾಸ್ ಈ ವಾರ ಮತ್ತೊಂದು ಅಚ್ಚರಿಯನ್ನು ನೀಡಿದ್ದಾರೆ.
ಹೌದು ಸ್ನೇಹಿತರೇ ಈ ಸೀಸನ್ ನಲ್ಲಿ ಇದೇ ಮೊಟ್ಟ ಮೊದಲ ಬಾರಿಗೆ ಬಹಿರಂಗವಾಗಿ ಕಿಚ್ಚ ಸುದೀಪ್ ರವರು ಸ್ಪರ್ಧಿಗಳನ್ನು ಸೇಫ್ ಮಾಡುತ್ತಿರುವ ಸಂದರ್ಭದಲ್ಲಿ ಬಂದಿರುವ ವೋಟ್ ಗಳ ಆಧಾರಗಳ ಮೇಲೆ ಸ್ಪರ್ಧಿಗಳನ್ನು ಸೇಫ್ ಮಾಡಿ ಯಾರು ಅತಿ ಹೆಚ್ಚು ಮತ ಪಡೆದಿದ್ದಾರೆ ಎಂಬುದನ್ನು ಬಹಿರಂಗವಾಗಿ ಘೋಷಿಸಿದ್ದಾರೆ.
ಹೌದು ಈ ವಾರ ಯಾವ್ಯಾವ ಸ್ಪರ್ಧಿಗಳು ಹೆಚ್ಚಿನ ಮತಗಳನ್ನು ಪಡೆದಿದ್ದಾರೆ ಎಂಬುದರ ಆಧಾರದ ಮೇರೆಗೆ ಸೇಫ್ ಮಾಡಿದ ಕಾರಣ ಈ ಲಿಸ್ಟಿನಲ್ಲಿ ಮೊದಲು ಮಂಜು ಪಾವಗಡ ರವರ ಹೆಸರು ಕೇಳಿ ಬರುತ್ತದೆ, ನಂತರ ದಿವ್ಯ ಉರುಡುಗ, ಶುಭ ಪೂಂಜಾ, ನಿಧಿ ಸುಬ್ಬಯ್ಯ, ವೈಷ್ಣವಿ, ರಘು, ರಾಜೀವ್ ಹಾಗೂ ದಿವ್ಯ ಸುರೇಶ್ ಅವರ ಹೆಸರು ಕೇಳಿ ಬರುತ್ತಿದೆ. ಒಟ್ಟಿನಲ್ಲಿ ಈ ಮೂಲಕ ಮಂಜು ಪಾವಗಡ ರವರು ಹೆಚ್ಚಿನ ಜನರ ಮನಗೆಲ್ಲುವುದರಲ್ಲಿ ಯಶಸ್ವಿಯಾಗಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಕುರಿತು ನಿಮ್ಮ ಅಭಿಪ್ರಾಯಗಳನ್ನು ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸುವುದನ್ನು ಮರೆಯ ಬೇಡಿ.
Comments are closed.