Neer Dose Karnataka
Take a fresh look at your lifestyle.

ಕೊನೆಗೂ ಬಯಲಾಯಿತು ದರ್ಶನ್ ರವರು ಸಿನಿಮಾಗಾಗಿ ಪಡೆದು ಕೊಂಡಿರುವ ಸಂಭಾವನೆ ಎಷ್ಟು ಗೊತ್ತಾ?

6

ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಕನ್ನಡ ಚಿತ್ರರಂಗದಲ್ಲಿ ನೂರು ಕೋಟಿ ಕಲೆಕ್ಷನ್ ಮಾಡುವ ಮೂಲಕ ಇತಿಹಾಸವನ್ನು ಸೃಷ್ಟಿಸಿರುವ ರಾಬರ್ಟ್ ಸಿನಿಮಾ ಕೆಜಿಎಫ್ ಸಿನಿಮಾ ದಾಖಲೆಗಳನ್ನು ಕುಟ್ಟಿ ಕುಟ್ಟಿ ಪುಡಿ ಮಾಡುವಲ್ಲಿ ಯಶಸ್ವಿಯಾಗಿದೆ. ಎಲ್ಲಿ ನೋಡಿದರೂ ರಾಬರ್ಟ್ ಸಿನಿಮಾ ಭರ್ಜರಿಯಾಗಿ ಸದ್ದು ಮಾಡುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನವೇ ಬಹುತೇಕ ಸಿನಿಮಾ ಮಂದಿರಗಳಲ್ಲಿ ಆರು ದಿನಗಳ ಕಾಲ ಯಾವುದೇ ಟಿಕೆಟ್ಗಳು ದೊರಕಿರಲಿಲ್ಲ, ಬಹುತೇಕ ಮುಂಗಡ ಬುಕ್ಕಿಂಗ್ ಆಗಿದ್ದವು.

ಇದನ್ನು ನೋಡಿದರೆ ಖಂಡಿತ ರಾಬರ್ಟ್ ಸಿನಿಮಾದ ಹವಾ ಎಷ್ಟು ಇತ್ತು ಎಂಬುದನ್ನು ನೀವು ಊಹಿಸಬಹುದು. ಇನ್ನು ರಾಬರ್ಟ್ ಸಿನಿಮಾವನ್ನು ಫ್ಯಾಮಿಲಿ ಒಟ್ಟಾಗಿ ಕುಳಿತು ಕೊಂಡು ನೋಡ ಬಹುದಾದ ಸಿನಿಮಾ ಆದ ಕಾರಣ ಮಲ್ಟಿಪ್ಲೆಕ್ಸ್ ಗಳಲ್ಲಿ ಎಲ್ಲರೂ ಕೂಡ ಕುಟುಂಬದ ಸಮೇತ ಜನರು ಹರಿದು ಬಂದಿದ್ದರೂ, ಅದಕ್ಕೆ ತಕ್ಕಂತೆ ರಾಬರ್ಟ್ ಸಿನಿಮಾ ಬಾಕ್ಸಾಫೀಸ್ ನಲ್ಲಿ ಬರೋಬ್ಬರಿ 105 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡುವಲ್ಲಿ ಯಶಸ್ವಿಯಾಗಿದೆ.

ಇಷ್ಟೆಲ್ಲಾ ಸದ್ದು ಮಾಡಿ ದಾಖಲೆಗಳನ್ನು ಸೃಷ್ಟಿಸಿರುವ ರಾಬರ್ಟ ಸಿನಿಮಾಗೆ, ದರ್ಶನ್ ರವರು ಎಷ್ಟು ಸಂಭಾವನೆ ಪಡೆದು ಕೊಂಡಿದ್ದರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಇದೀಗ ಗಾಂಧಿ ನಗರದಿಂದ ಅಧಿಕೃತ ಮಾಹಿತಿಯೊಂದು ಕೇಳಿ ಬಂದಿದ್ದು ರಾಬರ್ಟ್ ಸಿನಿಮಾಗೆ ದರ್ಶನ್ ರವರು ಬರೋಬ್ಬರಿ 15 ಕೋಟಿ ಗೂ ಹೆಚ್ಚು ಸಂಭಾವನೆ ಪಡೆದು ಕೊಂಡಿದ್ದಾರೆ ಎಂಬುದು ತಿಳಿದು ಬಂದಿದೆ. ಈ ಮೂಲಕ ಕನ್ನಡ ಚಿತ್ರರಂಗದಲ್ಲಿ ಹೊಸದೊಂದು ದಾಖಲೆಯನ್ನು ಕೂಡ ದರ್ಶನ್ ರವರು ತಮ್ಮ ಹೆಸರಿಗೆ ಬರೆಸಿ ಕೊಂಡಿದ್ದಾರೆ.

Leave A Reply

Your email address will not be published.