Neer Dose Karnataka
Take a fresh look at your lifestyle.

ಕ್ವಾರಂಟೈನ್ ನಲ್ಲಿ ಹೊಸ ಅತಿಥಿ, ಒಂದು ದಿನದ ಮಟ್ಟಿಗೆ ಬಿಗ್ ಬಾಸ್ಗೆ ಹೋಗುತ್ತಾರಂತೆ ಖ್ಯಾತ ನಟಿ, ಯಾರು ಗೊತ್ತಾ??

2

ನಮಸ್ಕಾರ ಸ್ನೇಹಿತರೇ ಕನ್ನಡ ಬಿಗ್ ಬಾಸ್ ಕಾರ್ಯಕ್ರಮ ಆರಂಭವಾದ ಕೆಲವು ದಿನಗಳಲ್ಲಿ ಪ್ರೇಕ್ಷಕರು ಹೆಚ್ಚಿನ ಆಸಕ್ತಿಯನ್ನು ತೋರಿಸಿರಲಿಲ್ಲ. ಯಾಕೆಂದರೆ ಬಹುತೇಕ ಸ್ಪರ್ಧಿಗಳು ಬಹಳ ಸೇಫ್ ಆಟಕ್ಕೆ ಮೊರೆ ಹೋಗಿದ್ದ ಕಾರಣ ಬಿಗ್ ಬಾಸ್ ಕಾರ್ಯಕ್ರಮ ಅಷ್ಟಾಗಿ ಇಂಟರೆಸ್ಟಿಂಗ್ ಎನಿಸುತ್ತಿರಲಿಲ್ಲ. ಅದರ ನಡುವೆ ಪ್ರಮುಖ ಧಾರವಾಹಿಗಳು ಅದೇ ಸಮಯದಲ್ಲಿ ಪ್ರಸಾರವಾಗುತ್ತಿದ್ದ ಕಾರಣ ಮನೆಯ ಮಂದಿ ಬಿಗ್ ಬಾಸ್ ಹಾಗೂ ಕೆಲವು ಧಾರವಾಹಿಗಳ ನಡುವೆ ಆಯ್ಕೆ ಮಾಡಬೇಕಾಗಿತ್ತು.

ಆದರೆ ಕ್ರಮೇಣ ಬಿಗ್ ಬಾಸ್ ಕಾರ್ಯಕ್ರಮ ತನ್ನ ಹಿಂದಿನ ನಾಗಾಲೋಟವನ್ನು ಮುಂದುವರಿಸುತ್ತಿದ್ದು, ಇತ್ತೀಚಿನ ದಿನಗಳಲ್ಲಿ ಕಾರ್ಯಕ್ರಮ ಹೆಚ್ಚು ಚರ್ಚೆಗೆ ಗುರಿಯಾಗುತ್ತಿದೆ ಹಾಗೂ ದಿನೇ ದಿನೇ ಪ್ರೇಕ್ಷಕರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಸ್ಪರ್ಧಿಗಳ ಪರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ಸೃಷ್ಟಿಯಾಗುತ್ತಿದೆ. ಇಂತಹ ಸಮಯದಲ್ಲಿ ಸಾಮಾನ್ಯವಾಗಿ ಬಿಗ್ ಬಾಸ್ ಕಾರ್ಯಕ್ರಮ ಮತ್ತಷ್ಟು ಪ್ರೇಕ್ಷಕರನ್ನು ಸೆಳೆಯಲು ಹೊಸ ತಂತ್ರದ ಕುರಿತು ಆಲೋಚನೆ ನಡೆಸುತ್ತಿದೆ.

ಹೌದು ಸ್ನೇಹಿತರೆ ಕಳೆದ ಕೆಲವು ದಿನಗಳ ಟಾಪ್ ನಟಿಯೊಬ್ಬರು ಬಿಗ್ ಬಾಸ್ ಮನೆಗೆ ತೆರಳುತ್ತಾರೆ ಎಂಬ ಮಾತು ಕೇಳಿ ಬಂದಿತ್ತು ಆದರೆ ಕಾರಣಾಂತರಗಳಿಂದ ಅದು ಯಾಕೋ ಮುಂದೆ ಹೋಗಲಿಲ್ಲ. ಆದರೆ ಇದೀಗ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಒಂದು ದಿನದ ಅತಿಥಿಯಾಗಿ ಟಾಪ್ ನಟಿಯರೋಬಾರು ಹೋಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿದ್ದು, ಆ ನಟಿ ಮತ್ತ್ಯಾರು ಅಲ್ಲ ಅವರೇ ರಾಧಿಕಾ. ಒಂದು ಕಾಲದಲ್ಲಿ ಕನ್ನಡದ ಟಾಪ್ ನಟಿಯಾಗಿದ್ದ ರಾಧಿಕಾ ರವರು ಒಂದು ದಿನದ ಅತಿಥಿಯಾಗಿ ಮನೆಗೆ ಒಳಗಡೆ ಹೋಗಲಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

Leave A Reply

Your email address will not be published.