Neer Dose Karnataka
Take a fresh look at your lifestyle.

ಬೇಡಿಕೆಯ ಪೋಷಕ ನಟಿಯಾಗಿ ಮಿಂಚುತ್ತಿರುವ ಕನ್ನಡದ ನಟಿ ಪವಿತ್ರ ಲೋಕೇಶ್ ಅವರ ಗಂಡ ಯಾರು ಗೊತ್ತಾ? ಫೋಟೋ ನೋಡಿ.

220

ನಮಸ್ಕಾರ ಸ್ನೇಹಿತರೇ ಚಿತ್ರರಂಗದಲ್ಲಿ ನಾಯಕ ನಾಯಕಿ ಹಾಗೂ ಖಳನಾಯಕರ ಪಾತ್ರ ಎಷ್ಟು ಮುಖ್ಯವೋ ಅಷ್ಟೇ ಪ್ರಾಮುಖ್ಯತೆಯನ್ನು ಪೋಷಕ ಪಾತ್ರಗಳು ಕೂಡ ಪಡೆದುಕೊಂಡಿವೆ. ಇನ್ನೂ ಇಂತಹ ಪೋಷಕ ಪಾತ್ರಗಳಲ್ಲಿ ನಾವು ಸಾಕಷ್ಟು ಖ್ಯಾತ ಕಲಾವಿದರನ್ನು ಹೆಸರಿಸಬಹುದು. ಅಂತಹ ಖ್ಯಾತ ಕಲಾವಿದರಲ್ಲಿ ಕನ್ನಡದ ಪವಿತ್ರ ಲೋಕೇಶ್ ಕೂಡ ಒಬ್ಬರು. ಹೌದು ಕನ್ನಡ ಹಾಗೂ ತೆಲುಗು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಳ್ಳುವ ಪವಿತ್ರ ಲೋಕೇಶ್ ಅವರು ಇದೀಗ ಚಿತ್ರರಂಗದ ಬಹು ಬೇಡಿಕೆಯ ಪೋಷಕ ನಟಿ.

ಇನ್ನು ಇವರು 1979 ರಲ್ಲಿ ಮೈಸೂರಿನಲ್ಲಿ ಜನಿಸಿದ್ದು, ಇವರ ತಂದೆ ಕೂಡ ಖ್ಯಾತ ರಂಗಭೂಮಿ ಕಲಾವಿದರು. ಸುಮಾರು 16 ನೇ ವಯಸ್ಸಿನಲ್ಲಿ ನಟಿ ಪವಿತ್ರ ಲೋಕೇಶ್ ಅವರು ಬಣ್ಣದ ಲೋಕಕ್ಕೆ ಬಂದವರು. ಇನ್ನು ಚಿಕ್ಕ ವಯಸ್ಸಿನಲ್ಲಿ ಬಂದ ಇವರು ಇದೀಗ ಚಿತ್ರರಂಗದ ಖ್ಯಾತ ಪೋಷಕ ನಟಿಯಾಗಿ ಯಶಸ್ಸನ್ನು ಪಡೆದಿದ್ದಾರೆ. ಇನ್ನು ಅವರ ಕುಟುಂಬ ಹೇಗಿದೆ? ಅವರ ಪತಿ ಯಾರು? ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನಾವು ಇಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ.

ಹೌದು ನಟಿ ಪವಿತ್ರ ಲೋಕೇಶ್ ಅವರು ಕನ್ನಡ ಹಾಗೂ ತೆಲುಗು ಸಿನಿಮಾ ರಂಗದಲ್ಲಿ ಸುಮಾರು 150ಕ್ಕೂ ಹೆಚ್ಚು ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನೂ ಹಲವಾರು ಸಿನಿಮಾಗಳಲ್ಲಿ ಅಕ್ಕನ ಪಾತ್ರ, ತಾಯಿ ಪಾತ್ರ, ಅತ್ತಿಗೆ ಪಾತ್ರ ಹೀಗೆ ವಿವಿಧ ಪಾತ್ರಗಳಲ್ಲಿ ಜೀವ ತುಂಬುತ್ತ ಅವರು ನಟಿಸುತ್ತಿದ್ದರು. ಇನ್ನು ಇವರ ನಟನೆ ಸಾಕಷ್ಟು ಜನರಿಗೆ ತುಂಬಾ ಇಷ್ಟವಾಗಿದ್ದು ಇದೀಗ ಅವರು ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಬಹುಬೇಡಿಕೆಯ ಪೋಷಕ ನಟಿಯಾಗಿ ಹೊರಹೊಮ್ಮಿದ್ದಾರೆ.

ಇನ್ನು ಇವರು ಪ್ರತಿಯೊಂದು ಸಿನಿಮಾಗಳಲ್ಲಿ ಕೂಡ ಕಾಣಿಸಿಕೊಳ್ಳುತ್ತಾರೆ. ಅನೇಕ ಸ್ಟಾರ್ ನಟರ ಅಕ್ಕ ಹಾಗೂ ಅತ್ತಿಗೆ ಪಾತ್ರದಲ್ಲಿ ಅಭಿನಯಿಸಿರುವ ಇವರ ನಟನೆ ನಿಜಕ್ಕೂ ಮೆಚ್ಚುವಂತದ್ದು. ಇನ್ನು ಪವಿತ್ರ ಲೋಕೇಶ್ ಅವರು ಮಿಸ್ಟರ್ ಅಭಿಷೇಕ್ ಎಂಬ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು. ನಂತರ ಅವರು ಬಂಗಾರದ ಕಳಸ ಸಿನಿಮಾದಲ್ಲಿ ಕಾಣಿಸಿಕೊಂಡರು. ಆದರೆ ಈ ಸಿನಿಮಾಗಳು ಅವರಿಗೆ ಯಶಸ್ಸನ್ನು ತಂದುಕೊಡಲಿಲ್ಲ. ನಂತರ ಅವರು ಜನುಮದ ಜೋಡಿ ಎಂಬ ಸಿನಿಮಾದಲ್ಲಿ ನಟಿಸಿ ಮೆಚ್ಚುಗೆ ಪಡೆದರು.

ಇನ್ನು ಅವರು ಎತ್ತರವಾಗಿದ್ದ ಕಾರಣ ಅವರಿಗೆ ನಾಯಕಿಯಾಗಿ ನಟಿಸುವ ಅವಕಾಶಗಳು ಸಿಗಲಿಲ್ಲ. ಹೀಗಾಗಿ ಅವರು ಪೋಷಕ ಪಾತ್ರಗಳಲ್ಲಿ ಮುಂದುವರೆದರು. ಇನ್ನು ಇವರು ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಕಿರುತೆರೆಯಲ್ಲಿಯೂ ಕೂಡ ಸಾಕಷ್ಟು ಧಾರವಾಹಿಗಳಲ್ಲಿ ಅಭಿನಯಿಸಿದ್ದಾರೆ. ಜೀವನ್ಮುಖಿ, ಗುಪ್ತಗಾಮಿನಿ, ಗೆಳತಿ, ನೀತಿ ಚಕ್ರ, ಧರಿತ್ರಿ, ಪುನರ್ಜನ್ಮ ಹೀಗೆ ಅನೇಕ ಧಾರವಾಹಿಗಳಲ್ಲಿ ಅವರು ನಟಿಸಿದ್ದಾರೆ. ಪವಿತ್ರ ಲೋಕೇಶ್ ಅವರು 2007ರಲ್ಲಿ ಸುಚೇಂದ್ರ ಪ್ರಸಾದ್ ಎಂಬುವವರನ್ನು ಮದುವೆಯಾದರು. ಇನ್ನು ಸುಚೇಂದ್ರ ಪ್ರಸಾದ್ ಅವರು ಕೂಡ ರಂಗಭೂಮಿ, ಚಿತ್ರರಂಗ ಹಾಗೂ ಕಿರುತೆರೆಯ ಕಲಾವಿದರು.

ಇವರು ಕೂಡ ಸಾಕಷ್ಟು ಸಿನಿಮಾಗಳಲ್ಲಿ, ನಾಟಕಗಳಲ್ಲಿ ಹಾಗೂ ಕಿರುತೆರೆಯ ಧಾರವಾಹಿಗಳಲ್ಲಿ ಕೂಡ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಸುಚಂದ್ರ ಅವರು ಪವಿತ್ರ ಲೋಕೇಶ್ ಅವರನ್ನು ಎರಡನೇ ಮದುವೆಯಾಗಿದ್ದಾರೆ. ಹೌದು ಪವಿತ್ರ ಅವರು ಸುಚೇಂದ್ರ ಅವರಿಗೆ ಎರಡನೇ ಪತ್ನಿ. ಮೊದಲ ಪತ್ನಿಗೆ 2006ರಲ್ಲಿ ಸುಚೇಂದ್ರ ಅವರು ವಿ-ಚ್ಛೇ-ದನ ನೀಡಿದರು. ಅದೇ ರೀತಿ ಪವಿತ್ರ ಅವರಿಗೂ ಕೂಡ ಸುಚಂದ್ರ ಅವರು ಎರಡನೇ ಪತಿ. ಮೊದಲ ಪತಿ ಹೈದರಾಬಾದ್ ನಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಆದರೆ ನಂತರದ ದಿನಗಳಲ್ಲಿ ಈ ಜೋಡಿ ಬೇರೆಯಾಯಿತು. ಇನ್ನು ಪವಿತ್ರ ಹಾಗೂ ಸುಚಂದ್ರ ಅವರಿಗೆ ವಿಸ್ಕೃತ ಎಂಬ ಮಗಳಿದ್ದಾಳೆ. ಇನ್ನು ಅವರ ಕುಟುಂಬದ ಫೋಟೋವನ್ನು ನೀವು ಇಲ್ಲಿ ವೀಕ್ಷಿಸಬಹುದು.

Leave A Reply

Your email address will not be published.