Neer Dose Karnataka
Take a fresh look at your lifestyle.

ಲಾಕ್ ಡೌನ್ ಸಮಯದಲ್ಲಿ ಉಬರ್ ಇಲ್ಲದ ಕಾರಣ ಡ್ರೈವರ್ ಆಗಿದ್ದ ಶಂಕರ್ ಅಶ್ವಥ್ ಇದೀಗ ಏನು ಮಾಡುತ್ತಿದ್ದಾರೆ ಗೊತ್ತಾ??

3

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರಗಳ ಹಿರಿಯ ನಟ ಕೆ. ಎಸ್. ಅಶ್ವಥ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹೌದು ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ಸಿನಿಮಾಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡ ನಟ ಅಶ್ವಥ್ ಅವರು ಇಂದಿಗೂ ಕೂಡ ಜನರ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿದಿದ್ದಾರೆ. ತಮ್ಮ ಅಮೋಘವಾದ ನಟನೆಯ ಮೂಲಕ ಸಾಕಷ್ಟು ಸ್ಟಾರ್ ನಟರೊಂದಿಗೆ ಸಿನಿ ಪರದೆಯನ್ನು ಹಂಚಿಕೊಂಡಿದ್ದಾರೆ. ಇನ್ನು ಅವರ ಮಗ ಶಂಕರ್ ಅಶ್ವಥ್ ಅವರು ಕೂಡ ಕನ್ನಡ ಚಿತ್ರರಂಗದಲ್ಲಿ ಬೆರಳಣಿಕೆಯಷ್ಟು ಸಿನಿಮಾ ಮಾಡಿದ್ದರು ಕೂಡ ಇಂದಿಗೂ ಕೂಡ ಅವರು ಜನರಿಗೆ ಚಿರಪರಿಚಿತರು.

ಹೌದು ಪ್ರಾರಂಭದಲ್ಲಿ ಕೆಲವು ಸಿನಿಮಾಗಳಲ್ಲಿ ನಟಿಸಿದ ಶಂಕರ್ ಅಶ್ವತ್ಥ್ ಅವರು ನಂತರದಲ್ಲಿ ಅವಕಾಶಗಳಿಲ್ಲದೆ ಸಿನಿಮಾರಂಗದಿಂದ ದೂರ ಉಳಿದರು. ಇನ್ನು ಇತ್ತೀಚಿಗಷ್ಟೇ ಕನ್ನಡದ ಬಿಗ್ ಬಾಸ್ ಸೀಸನ್ 8 ರಲ್ಲಿ ಕಾಣಿಸಿಕೊಳ್ಳುವ ಮೂಲಕ ಮತ್ತೆ ಜನರೆದುರಿಗೆ ಬಂದಿದ್ದರು. ಈಗ ಬಿಗ್ ಬಾಸ್ ಮಧ್ಯದಲ್ಲಿ ನಿಂತು ಹೋಗಿದ್ದು ಎಲ್ಲ ಸ್ಪರ್ಧಿಗಳು ತಮ್ಮ ತಮ್ಮ ಮನೆಗೆ ತೆರಳಿದ್ದಾರೆ. ಇದೇ ರೀತಿಯ ಶಂಕರ್ ಅಶ್ವತ್ ಅವರು ಕೂಡ ತಮ್ಮ ಮನೆಗೆ ಬಂದಿದ್ದು, ಲಾಕ್ ಡೌನ್ ಸಮಯದಲ್ಲಿ ಏನು ಮಾಡುತ್ತಿದ್ದಾರೆ ಗೊತ್ತಾ? ಹಾಗಿದ್ದರೆ ಈ ಸುದ್ದಿಯನ್ನು ಸಂಪೂರ್ಣವಾಗಿ ಓದಿ.

ಇನ್ನು ಇದೀಗ ದೇಶದಲ್ಲಿದೆ ಕರುನಾ ಎರಡನೇ ಅಲೆ ಬಹಳ ವೇಗವಾಗಿ ಹರಡುತ್ತಿದ್ದು, ಈಗಾಗಲೇ ಸಾಕಷ್ಟು ಜನರು ಪ್ರಾ-ಣವನ್ನು ಕ-ಳೆದುಕೊಂಡಿದ್ದಾರೆ. ಇನ್ನೂ ಸಾಕಷ್ಟು ಜನರು ಪ್ರತಿನಿತ್ಯದ ಹೊಟ್ಟೆಪಾಡಿಗಾಗಿ ಪರದಾಡುವಂತಾಗಿದೆ. ಅಷ್ಟೇ ಅಲ್ಲದೆ ಹಲವಾರು ಸೆಲೆಬ್ರಿಟಿಗಳು ಇದೀಗಾಗಲೇ ಕರುನಾಗೆ ತುತ್ತಾಗಿದ್ದು, ಸಾಕಷ್ಟು ಸೆಲೆಬ್ರಿಟಿಗಳು ಪ್ರಾ-ಣವನ್ನು ಕ-ಳೆದುಕೊಂಡಿದ್ದಾರೆ. ಇನ್ನು ಇಂತಹ ಪರಿಸ್ಥಿತಿಯಲ್ಲಿ ಸರ್ಕಾರವು ಹಲವಾರು ಸೇವೆಗಳನ್ನು ಬಂದ್ ಮಾಡಲು ಮುಂದಾಗಿದೆ. ಇನ್ನು ಇದರಲ್ಲೇ ಊಬರ್ ಸೇವೆ ಕೂಡ ಬಂದ್ ಮಾಡಲಾಗಿದೆ.

ಇನ್ನೂ ಉಬರ್ ಸೇವೆಯಲ್ಲಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಸಾಕಷ್ಟು ಜನರಿಗೆ ಇದೀಗ ಕೆಲಸ ಇಲ್ಲದಂತಾಗಿದೆ. ಇನ್ನು ಇಂತಹ ವ್ಯಕ್ತಿಗಳಲ್ಲಿ ಶಂಕರ್ ಅಶ್ವಥ್ ಕೂಡ ಒಬ್ಬರಾಗಿದ್ದಾರೆ. ಹೌದು ಸಿನಿಮಾಗಳ ಅವಕಾಶವಿಲ್ಲದೆ ಶಂಕರ್ ಅಶ್ವತ್ಥ್ ಅವರು ಚಿತ್ರರಂಗದಿಂದ ದೂರವಾಗ ತಮ್ಮ ದಿನನಿತ್ಯದ ಜೀವನ ನಡೆಸಲು ಉಬರ್ ನಲ್ಲಿ ಡ್ರೈವರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಉಬರ್ ಸೇವೆ ಸ್ಥಗಿತಗೊಳಿಸಲಾಗಿದ್ದು, ಇದರಿಂದ ಶಂಕರ್ ಅಶ್ವತ್ ಅವರಿಗೂ ಕೂಡ ಕೆಲಸ ಇಲ್ಲದಂತಾಗಿದೆ. ಇನ್ನೂ ತಮ್ಮ ಆರ್ಥಿಕ ಮೂಲವಾಗಿದ್ದ ಈ ಕೆಲಸ ಕೂಡ ಸ್ಥಗಿತಗೊಂಡಿದ್ದರಿಂದ ಶಂಕರ್ ಅಶ್ವಥ್ ಅವರು ತಮ್ಮ ದುಡಿಮೆಗಾಗಿ ಹೊಸ ಕೆಲಸಕ್ಕೆ ಕೈ ಹಾಕಿದ್ದಾರೆ.

ಹೌದು ಶಂಕರ್ ಅಶ್ವತ್ ಅವರ ಪತ್ನಿ ಕೇಟರಿಂಗ್ ಕೆಲಸ ಮಾಡುತ್ತಿದ್ದು, ಲಾಕ್ ಡೌನ್ ಸಮಯದಲ್ಲಿ ಶಂಕರ್ ಅಶ್ವತ್ಥ್ ಅವರ ಕೆಲಸ ನಿಂತು ಹೋಗಿದ್ದರು ಕೂಡ ಅವರ ಪತ್ನಿಯ ಕೆಲಸ ಮಾತ್ರ ನಿಂತಿಲ್ಲ. ಇನ್ನು ಇದೀಗ ಶಂಕರ್ ಅಶ್ವತ್ ಅವರು ಸುಮ್ಮನೆ ಕಾಲಹರಣ ಮಾಡುವುದರಿಂದ ಪ್ರಯೋಜನವಿಲ್ಲ ಎಂದು ತಮ್ಮ ಪತ್ನಿಗೆ ಸಹಾಯ ಮಾಡಲು ಮುಂದಾಗಿದ್ದಾರೆ. ಹೌದು ಇದೀಗ ಶಂಕರ್ ಅಶ್ವತ್ಥ್ ಅವರು ಮನೆಮನೆಗೆ ತೆರಳಿ ಊಟ ಕೊಟ್ಟು ಬರುತ್ತಾರೆ.

ಇನ್ನು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಶಂಕರ್ ಅಶ್ವತ್ಥ್ ಅವರು ಬಡಿದು ತಿನ್ನುವುದಕ್ಕಿಂತ ದುಡಿದು ಮೇಲು ಎಂದು ಹೇಳಿದ್ದಾರೆ. ಇನ್ನು ಸುಮ್ಮನೆ ಕೊಡುವುದಕ್ಕಿಂತ ಮನೆಮನೆಗೆ ಹೋಗಿ ಕ್ಯಾರಿಯರ್ ಕೊಡುತ್ತಾ 4 ಕಾಸಾದರೂ ಸಂಪಾದನೆ ಮಾಡಿ ಆ ದಿನ ನೆಮ್ಮದಿಯಾಗಿ ಮಲಗಬಹುದು ಎಂದು ಅವರು ಹೇಳಿದ್ದಾರೆ. ಇನ್ನು ಅವರ ಈ ಮಾತಿಗೆ ಸಾಕಷ್ಟು ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಅವರ ಮುಂದಿನ ಜೀವನ ಇನ್ನಷ್ಟು ಉನ್ನತಿಯನ್ನು ಹೊಂದಲಿ ಎಂದು ನಾವು ಈ ಮೂಲಕ ಹಾರೈಸೋಣ.

Leave A Reply

Your email address will not be published.