Neer Dose Karnataka
Take a fresh look at your lifestyle.

ಟಾಪ್ ನಟರಾದ ಅಭಿಷೇಕ್ ಹಾಗೂ ನಿಖಿಲ್ ರವರಲ್ಲಿ ಯಾರು ಇಷ್ಟ ಎಂದು ಕೇಳಿದರೇ, ಷಾಕಿಂಗ್ ಉತ್ತರ ನೀಡಿದ ರಚಿತಾ ರಾಮ್. ಹೇಳಿದ್ದೇನು ಗೊತ್ತಾ??

5

ನಮಸ್ಕಾರ ಸ್ನೇಹಿತರೇ ಮೊದಲಿಗೆ ಧಾರವಾಹಿಗಳಲ್ಲಿ ಅಭಿನಯಿಸಿ ನಂತರದ ದಿನಗಳಲ್ಲಿ ಚಿತ್ರರಂಗಕ್ಕೆ ಬಂದು ನಟಿಸಿದವರು ಎಷ್ಟೋ ಜನ ಇರಬಹುದು ಆದರೆ ಇವರಷ್ಟು ಯಶಸ್ಸನ್ನು ಪಡೆದವರು ಯಾರೂ ಇಲ್ಲ. ಇವರ ಮುಖದ ಕಳೆ ಹಾಗೂ ಮಾಡೋ ನಟನೆ ಇವರನ್ನು ಇಂದಿಗೆ ಸ್ಯಾಂಡಲ್ ವುಡ್ ನ ಟಾಪ್ ನಟಿಯನ್ನಾಗಿ ಮಾಡಿದೆ. ಹೌದು ನಾವು ಮಾತನಾಡ್ತಿರೋದು ಗುಳಿಕೆನ್ನೆಯ ಚೆಲುವೆ ರಚಿತಾ ರಾಮ್ ರವರ ಬಗ್ಗೆ.

ಬಿಂದಿಯಾ ರಾಮ್ ಆಗಿದ್ದವರು ರಚಿತಾ ರಾಮ್ ಆದಮೇಲೆ ಅವರ ಲಕ್ ಚೇಂಜ್ ಆಗಿದ್ದು ಸುಳ್ಳಲ್ಲ. 200 ಜನ ಯುವನಟಿಯರ ಪೈಕಿ ಆಡಿಷನ್ ನಲ್ಲಿ ಸೆಲೆಕ್ಟ್ ಆಗಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರ ಬುಲ್ ಬುಲ್ ಚಿತ್ರದ ನಾಯಕಿಯಾದ ಮೇಲೆ ಅವರು ಮತ್ತೆಂದೂ ಇಂದಿಗೂ ಹಿಂದಿರುಗಿ ನೋಡೇ ಇಲ್ಲ. ಚಿತ್ರರಂಗದಲ್ಲಿ ಬಹುತೇಕ ಎಲ್ಲಾ ಸ್ಟಾರ್ ನಟರೊಂದಿಗೆ ರಚಿತಾ ರಾಮ್ ತೆರೆ ಹಂಚಿಕೊಂಡಿದ್ದಾರೆ.

ಈಗಾಗಲೇ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೋಲ್ಡನ್ ಸ್ಟಾರ್ ಗಣೇಶ್ ರೋರಿಂಗ್ ಸ್ಟಾರ್ ಶ್ರೀಮುರಳಿ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸೂಪರ್ ಸ್ಟಾರ್ ಉಪೇಂದ್ರ ಹೀಗೆ ಚಂದನವನದ ಟಾಪ್ ಮೋಸ್ಟ್ ಸ್ಟಾರ್ ಗಳ ಚಿತ್ರಗಳಲ್ಲಿ ಈಗಾಗಲೇ ಸೂಪರ್ ನಾಯಕಿಯಾಗಿ ಮಿಂಚಿದ್ದಾರೆ ಕೂಡ. ಈಗಲೂ ಕೂಡ ಹೊಸ ಪ್ರತಿಭೆಗಳಿಗಾಗಲೀ ಯಾವುದೇ ನಟರಿಗಾಗಲೀ ನಟಿಯಾಗಿ ಮೊದಲ ಆಯ್ಕೆ ನಮ್ಮ ಡಿಂಪಲ್ ಕ್ವೀನ್ ರಚಿತಾ ರಾಮ್.

ರಚಿತಾ ರಾಮ್ ನಿಮ್ಮ ಫೇವರಿಟ್ ನಟ ಯಾರೆಂದು ಕೇಳಿದಾಗಲೂ ಅಷ್ಟೇ ಅವರ ತೋರಿಸುವ ಜಾಣ್ಮೆಯಘ ಸೂಚಿಸುತ್ತದೆ ಯಾಕೆ ಅವರು ಇನ್ನೂ ಯಶಸ್ವಿಯಾಗಿದ್ದಾರೆಂದು. ನೆಚ್ಚಿನ ನಟನ ಕುರಿತಂತೆ ಕೇಳಿದಾಗ ” ದರ್ಶನ್ ರವರು ನನಗೆ ಈ ಚಿತ್ರರಂಗದ ಪರಿಚಯ ಮಾಡಿಸಿದವರು, ಕಿಚ್ಚ ಸುದೀಪ್ ರವರು ಈ ಚಿತ್ರರಂಗದಲ್ಲಿ ಹೇಗೆ ಇರಬೇಕೆಂಬುದನ್ನು ತೋರಿಸಿ ಕೊಟ್ಟವರು ” ಹಾಗಾಗಿ ಇಬ್ಬರೂ ಇಷ್ಟ ಎಂದು ಹೇಳುತ್ತಾರೆ. ಆದರೆ ಇವರು ಈಗ ಸುದ್ದಿಯಾಗಿರೋದು ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಕೊಟ್ಟ ಉತ್ತರದಿಂದ.

ಹೌದು ಕನ್ನಡ ಚಿತ್ರರಂಗದ ಖ್ಯಾತ ನಿರೂಪಕಿ ಹಾಗೂ ನಟಿ ಅನುಶ್ರೀ ಯವರ ಪರಿಚಯ ಎಲ್ಲರಿಗೂ ಗೊತ್ತೇ ಇದೆ. ಕನ್ನಡ ಚಿತ್ರರಂಗದಲ್ಲಾಗಲಿ ಕಿರುತೆರೆಯಲ್ಲಿ ನಡೆಯುವ ಕಾರ್ಯಕ್ರಮಗಳೇ ಆಗಲಿ ನಿರೂಪಕಿಯಾಗಿ ಕಾರ್ಯಕ್ರಮ ವನ್ನು ನಡೆಸಿಕೊಡುವ ನಂ1 ಆಂಕರ್ ಅಂದರೆ ಅದು ಅನುಶ್ರೀ. ಈಗ ಅನುಶ್ರೀ ರವರು ತಮ್ಮ ಸ್ವಂತ ಯೂಟ್ಯೂಬ್ ಚಾನಲ್ ನ ಕಾರ್ಯಕ್ರಮದ ಮೂಲಕ ಸೆಲಬ್ರೆಟಿ ಸಂದರ್ಶನ ಮಾಡುತ್ತಿರುತ್ತಾರೆ.

ಹಾಗೆಯೇ ರಚಿತಾ ರಾಮ್ ರವರನ್ನು ಸಂದರ್ಶನ ಮಾಡುತ್ತಿದ್ದಾಗ ನಿಮಗೆ ನಿಖಿಲ್ ಕುಮಾರ್ ಹಾಗೂ ಅಭಿಷೇಕ್ ಅಂಬರೀಶ್ ಇಬ್ಬರಲ್ಲಿ ಯಾರು ಇಷ್ಟ ಎಂದು ಕೇಳಿದಾಗ ರಚಿತಾ ರಾಮ್ ಇಲ್ಲೂ ಕೂಡ ಜಾಣ್ಮೆಯಿಂದ ನನಗೆ ಇಬ್ಬರೂ ಇಷ್ಟ ಎಂದು ಉತ್ತರಿಸಿದ್ದಾರೆ. ನಿಖಿಲ್ ಹಾಗೂ ಅಭಿಷೇಕ್ ಇಬ್ಬರು ಉತ್ತಮ ಸ್ನೇಹಿತರು. ರಚಿತಾ ರಾಮ್ ನಿಖಿಲ್ ಕುಮಾರ್ ರವರ ಸೀತರಾಮ ಕಲ್ಯಾಣ ಚಿತ್ರದಲ್ಲಿ ನಾಯಕಿಯಾಗಿ ನಟಿಸಇದ್ದರೆ, ಅತ್ತ ಅಭಿಷೇಕ್ ಅಂಬರೀಶ್ ನಟನೆಯ ಚೊಚ್ಚಲ ಚಿತ್ರ ಅಮರ್ ನಲ್ಲಿ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ರಚಿತಾ ರಾಮ್ ರವರಲ್ಲಿ ನಿಮಗಿಷ್ಟವಾಗುವ ಗುಣಗಳು ಯಾವುವು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ತಿಳಿಸಿ.

Leave A Reply

Your email address will not be published.