Neer Dose Karnataka
Take a fresh look at your lifestyle.

ಈ ರಾಶಿಯವರು ಪ್ರೀತಿಸಿದರೇ, ಪಕ್ಕ ಮನೆಯವರನ್ನು ಒಪ್ಪಿಸಿ ಮದುವೆ ಯಾಗುತ್ತಾರೆ, ಆ 3 ರಾಶಿಗಳು ಯಾವ್ಯಾವು ಗೊತ್ತೇ??

14

ನಮಸ್ಕಾರ ಸ್ನೇಹಿತರೇ ಪ್ರತಿಯೊಬ್ಬರ ಜೀವನದಲ್ಲೂ ಮದುವೆಯನ್ನು ಅದು ಜೀವನದ ಪ್ರಮುಖ ಘಟ್ಟ. ತಮ್ಮ ನೆಚ್ಚಿನ ಜೀವನ ಸಂಗಾತಿಯನ್ನು ಮದುವೆಯಾಗಿ ಜೀವನಾದ್ಯಂತ ಸುಖ ಶಾಂತಿಯಿಂದ ಜೀವನ ಕಳೆಯೋಕೆ ಇಷ್ಟ ಪಡುತ್ತಾರೆ. ಪ್ರತಿಯೊಂದು ಶುಭಕಾರ್ಯಗಳಲ್ಲಿ ಶಾಸ್ತ್ರ ಪಂಚಾಂಗಗಳು ಉಪಯೋಗಕ್ಕೆ ಬರುತ್ತೆ ಹಾಗೂ ಇದು ಪುರಾತನ ಕಾಲದಿಂದಲೂ ನಡೆದು ಬಂದ ಆಚರಣೆ ಹಾಗೂ ಸಂಪ್ರದಾಯ. ಕೆಲವರು ಲವ್ ಮಾಡಿ ಮನೆಯವರ ಒಪ್ಪಿಗೆ ಮೇರೆಗೆ ಎಲ್ಲರ ಪ್ರೀತಿಯಿಂದ ಮದುವೆ ಆದರೆ ಇನ್ನು ಕೆಲವರು ಪ್ರೀತಿಸಿ ಮನೆಯವರ ವಿರೋಧ ಕಟ್ಟಿಕೊಂಡು ಮದುವೆ ಆಗುತ್ತಾರೆ.

ಇನ್ನು ಕೆಲವರು ಮನೆಯವರು ತೋರಿಸಿದ ಹುಡುಗ ಹುಡುಗಿಯನ್ನು ಮದುವೆಯಾಗಿ ಒಪ್ಪಿಗೆ ಇಲ್ಲದಿದ್ದರೂ ಸಂತೋಷ ಇಲ್ಲದಿದ್ದರೂ ಜೀವನಪೂರ್ತಿ ಕೊರಗುತ್ತಿರುತ್ತಾರೆ. ಹಾಗಾಗಿ ಸರಿಯಾದ ಜೋಡಿ ನೋಡಿ ಮದುವೆಯಾಗುವುದು ಜೀವನದ ಉಳಿದ ಭಾಗ ಸಂತೋಷದಿಂದ ನೆಮ್ಮದಿಯಿಂದ ಜೀವನ ಕಳೆಯೊದು ಪ್ರಮುಖವಾಗಿರುತ್ತದೆ. ಇಂದು ಕೂಡ ನಾವು ಇದೇ ವಿಚಾರದಲ್ಲಿ ಮಾತನಾಡಲು ಹೊರಟಿದ್ದೇವೆ. ಪಂಚಾಂಗದ ಪ್ರಕಾರ ಈ ಕೆಲವು ರಾಶಿಗಳ ಜನರಿಗೆ ಲವ್ ಮ್ಯಾರೇಜ್ ಆಗುವ ಅವಕಾಶ ನೂರಕ್ಕೆ ನೂರಿದೆ. ಈ ಮೂರು ರಾಶಿಯವರಿಗೆ ಅವರಂದುಕೊಂಡಂತೆ ನಿಜವಾದ ಪ್ರೀತಿ ಅವರ ಜೀವನಕ್ಕೆ ಸಿಕ್ಕೇ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಆ 3 ರಾಶಿಗಳು ಯಾರು ಅವರಿಗೆ ನಿಜವಾದ ಪ್ರೀತಿ ಸಿಗಲು ಕಾರಣವೇನೆಂದು ತಿಳಿಯೋಣ ಬನ್ನಿ.

ಮೊದಲಿಗೆ ತುಲಾ ರಾಶಿ ಈ ತುಲಾ ರಾಶಿಯ ಜನರು ತಮ್ಮ ಜೀವನದ ನಿರ್ಧಾರಗಳನ್ನು ಶಾಂತಚಿತ್ತರಾಗಿ ಸರಿಯಾದ ಕ್ರಮಗಳನ್ನು ಕೈಗೊಂಡು ಸರಿಯಾದ ಆಯ್ಕೆಯನ್ನೇ ಮಾಡುತ್ತಾರೆ ಎಂಬ ನಂಬಿಕೆ ಶಾಸ್ತ್ರ ಪಂಚಾಂಗ ಗಳಲ್ಲಿವೆ. ಹಾಗಾಗಿ ಇವರ ಆಯ್ಕೆಗಳ ಕುರಿತಂತೆ ಉಳಿದವರಿಗೆ ಸಂಪೂರ್ಣ ಭರವಸೆ ಇರುತ್ತದೆ. ಅಂದರೆ ಇವರು ಯಾವ ಹುಡುಗ ಅಥವಾ ಹುಡುಗಿ ಯನ್ನು ಆಯ್ಕೆ ಮಾಡಿದರೆ ಅವರ ಆಯ್ಕೆಯನ್ನು ಮನೆಯವರು ಸಂಪೂರ್ಣ ಭರವಸೆಯಿಂದ ಒಪ್ಪಿಕೊಳ್ಳುತ್ತಾರೆಂಬ ನಂಬಿಕೆ ಇದೆ. ಜೀವನದಲ್ಲಿ ಯಾವ ಕಷ್ಟಗಳು ಬಂದರೂ ಸಹ ಸರಿಯಾದ ಆಯ್ಕೆಗಳೊಂದಿಗೆ ಆ ಕಷ್ಟಗಳನ್ನು ಉತ್ತಮ ಮಾರ್ಗದಲ್ಲಿ ಹೋಗಿ ಪರಿಹರಿಸಿಕೊಳ್ಳುತ್ತಾರೆ ಎಂಬ ಪೂರ್ಣ ನಂಬಿಕೆಯಿದೆ. ಹಾಗಾಗಿ ಈ ರಾಶಿಯ ಹುಡುಗ ಹುಡುಗಿಗೆ ಅವರ ಜೀವನದಲ್ಲಿ ನಿಜವಾದ ಪ್ರೀತಿ ಸಿಕ್ಕೇ ಸಿಗುತ್ತದೆ.

ಇನ್ನು ಎರಡನೆಯದಾಗಿ ಮಕರ ರಾಶಿ ಮಕರ ರಾಶಿಯವರ ಜೀವನದಲ್ಲಿ ಅದೃಷ್ಟಲಕ್ಷ್ಮಿ ತುಂಬಿ ತುಳುಕಾಡಿರುತ್ತಾಳೆ. ಇವರ ಜೀವನದಲ್ಲಿ ಬರುವ ಹುಡುಗಿ ಕೂಡ ಇವರಿಗೆ ಅದೃಷ್ಟವನ್ನು ತುಂಬಿ ತರುತ್ತಾರೆ. ಇವರು ತಮ್ಮ ಸುತ್ತಮುತ್ತಲಿನ ಪರಿಸರವನ್ನು ತಮ್ಮ ಸ್ವಭಾವದಿಂದ ಗೆದ್ದಿರುತ್ತಾರೆ ಹಾಗೂ ಎಲ್ಲರೂ ಇವರನ್ನು ಇಷ್ಟಪಡುತ್ತಾರೆ. ಹಾಗಾಗಿಯೇ ಅವರಿಗೆ ಯಾರು ಕೂಡ ಮೋಸ ಮಾಡಲು ಇಷ್ಟಪಡುವುದಿಲ್ಲ. ಅಲ್ಲದೆ ಇವರು ಯಾರಿಗಾದರೂ ಒಮ್ಮೆ ಮನಸ್ಸು ಕೊಟ್ಟರೆ ಅವರಿಗೆ ಮೋಸ ಮಾಡುವ ಚಿಂತೆಯೂ ಕೂಡ ಮಾಡುವುದಿಲ್ಲ. ಹಾಗಾಗಿ ಶಾಸ್ತ್ರ ಪಂಚಾಂಗದ ಪ್ರಕಾರ ಇವರ ಜೀವನದಲ್ಲಿ ಬರುವ ಹುಡುಗಿ ಕೂಡ ಉತ್ತಮ ಮನಸ್ಸಿನವರಾಗಿ ಇರುತ್ತಾರೆ. ಇದು ಮಕರ ರಾಶಿಯವರಿಗೆ ಇರುವ ಅದೃಷ್ಟ ಎಂದು ಹೇಳಬಹುದು.

ಇನ್ನು ಮೂರನೆಯದಾಗಿ ಕನ್ಯಾ ರಾಶಿ ಈ ಕನ್ಯಾ ರಾಶಿಯ ಹುಡುಗಿಯರಿಗೂ ಸಹ ಅದೃಷ್ಟದಲ್ಲಿ ಸಿಂಹ ಪಾಲಿದೆ. ಇವರು ಸುಂದರವಾಗಿದ್ದು ಮಾತನಾಡೋದು ಸ್ವಲ್ಪ ಕಡಿಮೆ. ಸೌಮ್ಯ ಸ್ವಭಾವದವರು. ಹಾಗಾಗಿ ಇವರಿಗೆ ಪ್ರೀತಿ ಸಿಗುವುದು ಕಡಿಮೆ ಆದರೆ ಸಿಕ್ಕ ಪ್ರೀತಿ ಅವರನ್ನು ಜೀವನದ ಕೊನೆಯ ತನಕ ಉಳಿಸಿಕೊಂಡಿರುತ್ತದೆ. ನಿಜವಾದ ಪ್ರೀತಿ ಹಾಗೆ ತಾನೆ ಒಮ್ಮೆ ಸಿಗೋದೇ ಕಷ್ಟ ಸಿಕ್ಕಮೇಲೆ ಜೀವನಪರ್ಯಂತ ನಮ್ಮನ್ನು ಕಾಪಾಡುತ್ತದೆ ಅಲ್ಲವೇ. ಹಾಗೆ ಕನ್ಯಾರಾಶಿಯವರಿಗೆ ಸಹ ಹಾಗೆ. ಇವರು ತಮ್ಮ ಪ್ರೀತಿ ಸಂಬಂಧದಲ್ಲಿ ಅತಿಯಾದ ನಂಬಿಕೆ ಹಾಗು ವಿಶ್ವಾಸವನ್ನು ಇಟ್ಟುಕೊಂಡಿರುವುದರಿಂದ ಇವರ ಪ್ರೀತಿಸಂಬಂಧ ಕೊನೆಯ ತನಕ ಉಳಿದಿರುತ್ತದೆ.

ನೋಡಿದ್ರಲ್ಲ ಯಾವ ಮೂರು ರಾಶಿಯವರಿಗೆ ಜೀವನದಲ್ಲಿ ನಿಜವಾದ ಪ್ರೀತಿ ಸಿಗುತ್ತದೆ ಎಂದು. ಕೆಲವರು ಜ್ಯೋತಿಷ್ಯಶಾಸ್ತ್ರ ಪಂಚಾಂಗವನ್ನು ನಾನು ನಂಬಲ್ಲ ಎಂದು ಹೇಳಬಹುದು. ಆದರೆ ಈ ಆಚಾರ-ವಿಚಾರಗಳು ಪುರಾತನ ಕಾಲ ಅಂದರೆ ಸನಾತನ ಕಾಲದಿಂದಲೂ ನಡೆದುಕೊಂಡು ಬಂದಂತಹ ರೀತಿ-ರಿವಾಜು. ನಮ್ಮ ಪೂರ್ವಜರು ಈ ಆಚರಣೆಗಳನ್ನು ಕಾರಣವಿಲ್ಲದೆ ಮಾಡಿರುವುದಿಲ್ಲ. ಹಾಗಾಗಿ ಇದನ್ನು ನಂಬುವುದರಿಂದ ಯಾರಿಗೂ ನಷ್ಟ ಆಗಿಲ್ಲ ಅಲ್ಲದೆ ಇದನ್ನು ನಂಬಿರುವವರು ಇಂದಿಗೂ ಉದ್ಧಾರ ವಾಗಿರುವುದನ್ನು ನೋಡಿರಬಹುದು.

ಹಾಗಾಗಿ ನೀವು ಈ ರಾಶಿಯವರಾಗಿದ್ದರೆ ಆಮೇಲೆ ನಾವು ತಿಳಿದಿರುವಂತಹ ಅಂಶಗಳು ನಿಮ್ಮ ಜೀವನದಲ್ಲಿ ಖಂಡಿತ ನಡೆಯುವ ಸಾಧ್ಯತೆ ಇದೆ. ಹಾಗಾಗಿ ಇನ್ನು ನೀವು ನನಗೆ ನಿಜವಾದ ಪ್ರೀತಿ ದೊರೆತಿಲ್ಲ ಎಂದು ದುಃಖದಿಂದ ಇದ್ದರೆ ಯೋಚನೆ ಮಾಡುವಂತಹ ಯಾವ ಅವಶ್ಯಕತೆಯಿಲ್ಲ ಖಂಡಿತವಾಗಿ ನಿಮ್ಮ ಜೀವನದಲ್ಲೂ ಸಹ ಒಳ್ಳೆಯ ಹಾಗೂ ನಿಜವಾದ ಪ್ರೀತಿ ಬಂದೇ ಬರುತ್ತದೆ ತಾಳ್ಮೆ ಇರಬೇಕಷ್ಟೆ. ಹಿಂದಿನ ಈ ವಿಚಾರವನ್ನು ನೋಡಿ ನಿಮಗೆ ಏನು ಅನಿಸಿತು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಿಮ್ಮ ಅಭಿಪ್ರಾಯ ವಿಚಾರಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.