Neer Dose Karnataka
Take a fresh look at your lifestyle.

ಕನ್ನಡದ ಹಿರಿಯ ನಟಿ ಗೀತಾ ಇದೀಗ ಎಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಗೊತ್ತಾ??ಮತ್ತೆ ಮರಳಿ ಬರುತ್ತಾರಾ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದ ಖ್ಯಾತ ನಟಿಯರಲ್ಲಿ ಗೀತಾ ಕೂಡ ಒಬ್ಬರು. ಹೌದು ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯ ಸಿನಿಮಾಗಳಲ್ಲಿ ಕೂಡ ಅವರ ಅಭಿನಯಿಸಿ ಜನಪ್ರಿಯತೆ ಪಡೆದಿದ್ದಾರೆ. ಹೀಗೆ ಪಂಚಭಾಷಾ ತಾರೆ ಎನಿಸಿಕೊಂಡ ನಟಿ ಗೀತಾ ಅವರು ಚಿತ್ರರಂಗ ಕಂಡ ಅತ್ಯಂತ ಹೆಮ್ಮೆಯ ನಟಿ ಎಂದು ಹೇಳಬಹುದು. ಇನ್ನು ಇವರು ‘ಭೈರವಿ’ ಎಂಬ ತಮಿಳು ಸಿನಿಮಾದ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಿದರು.

ಈ ಚಿತ್ರದಲ್ಲಿ ಅವರು ತಮಿಳು ಖ್ಯಾತ ನಟ ರಜನಿಕಾಂತ್ ಅವರ ತಂಗಿ ಪಾತ್ರದಲ್ಲಿ ಅಭಿನಯಿಸಿದ್ದರು. ನಂತರ ಅವರು ಸುಮಾರು 200 ಕ್ಕೂ ಹೆಚ್ಚಿನ ದಕ್ಷಿಣ ಭಾರತದ ಸಿನಿಮಾಗಳಲ್ಲಿ ಹಾಗೂ ಕೆಲವು ಹಿಂದಿ ಸಿನಿಮಾಗಳಲ್ಲಿ ಕೂಡ ಅಭಿನಯಿಸಿದ್ದಾರೆ. ಇನ್ನು ಸಿನಿಮಾಗಳಷ್ಟೆ ಅಲ್ಲದೆ ದಕ್ಷಿಣ ಭಾರತದ ಕಿರುತೆರೆಯಲ್ಲಿ ಕೂಡ ಅವರು ಕಾಣಿಸಿಕೊಂಡಿದ್ದಾರೆ. ನಟಿ ಗೀತಾ ಅವರು ಸಾಕಷ್ಟು ಸಿನಿಮಾಗಳಲ್ಲಿ ವಿವಿಧ ರೀತಿಯ ಪಾತ್ರಗಳಲ್ಲಿ ಅಭಿನಯಿಸಿ ಅನೇಕ ಪ್ರಶಸ್ತಿಗಳನ್ನು ಕೂಡ ಪಡೆದುಕೊಂಡಿದ್ದಾರೆ.

ಇನ್ನು ಇಷ್ಟೆಲ್ಲ ಖ್ಯಾತಿ ಪಡೆದಿರುವ ನಟಿ ಗೀತಾ ಅವರು ಇದೀಗ ಎಲ್ಲಿದ್ದಾರೆ? ಹೇಗಿದ್ದಾರೆ? ಏನು ಮಾಡುತ್ತಿದ್ದಾರೆ ಎಂಬುದರ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ. ಹೌದು ನಟಿ ಗೀತಾ ಅವರು ಕನ್ನಡ ಚಿತ್ರರಂಗದಲ್ಲಿ ಮೇರು ನಟರಾದ ರಾಜಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಂಕರನಾಗ್, ಅನಂತನಾಗ್ ಹೀಗೆ ಸಾಕಷ್ಟು ಖ್ಯಾತನಟರೊಂದಿಗೆ ಸಿನಿ ಪರದೆಯನ್ನು ಹಂಚಿಕೊಂಡಿದ್ದಾರೆ. ಇವರು ಶೃತಿ ಸೇರಿದಾಗ, ಆಕಸ್ಮಿಕ, ಧ್ರುವತಾರೆ, ದೇವತಾ ಮನುಷ್ಯ, ಎರಡು ರೇಖೆಗಳು, ಗರುಡ ರೇಖೆ ಹೀಗೆ ಸುಮಾರು 200 ಕ್ಕೂ ಹೆಚ್ಚಿನ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಹೀಗೆ ಎಂಬತ್ತರ ದಶಕದಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಗೀತಾ ಕೂಡ ಒಬ್ಬರಾಗಿದ್ದರು. ಇವರು ನಟಿಸಿದ ಅನೇಕ ಸಿನಿಮಾಗಳು ಕೂಡ ಸೂಪರ್ ಹಿಟ್ ಆಗಿವೆ. ಇದೀಗ ಚಿತ್ರರಂಗದಿಂದ ದೂರ ಉಳಿದಿರುವ ನಟಿ ಗೀತಾ ಅವರು ತಮ್ಮ ದಾಂಪತ್ಯ ಜೀವನದಲ್ಲಿ ಸುಖವಾಗಿದ್ದಾರೆ. ಹೌದು ನಟಿ ಗೀತಾ ಅವರು ವಾಸನ್ ಎಂಬುವರನ್ನು 1997 ರಲ್ಲಿ ಮದುವೆಯಾದರು. ಇನ್ನು ವಾಸನ್ ಅವರು ವೃತ್ತಿಯಿಂದ ಚಾರ್ಟರ್ಡ್ ಅಕೌಂಟೆಂಟ್. ಇನ್ನು ಮದುವೆಯಾದ ನಂತರ ದಾಂಪತ್ಯ ಜೀವನದಲ್ಲಿ ಸಕ್ರಿಯರಾದ ನಟಿ ಗೀತಾ ಅವರು ತಮ್ಮ ಪತಿಯೊಂದಿಗೆ ನ್ಯೂಜೆರ್ಸಿಯಲ್ಲಿ ನೆಲೆಸಿದರು.

ಈ ಸಮಯದಲ್ಲಿ ಅವರು ಚಿತ್ರರಂಗದಿಂದ ದೂರ ಉಳಿದು ಕೊಂಚಕಾಲ ವಿರಾಮ ಪಡೆದರು. ಈ ದಂಪತಿಗೆ ಒಬ್ಬ ಮಗನಿದ್ದಾನೆ. ಇನ್ನೂ ಹಲವಾರು ವರ್ಷಗಳ ಕಾಲ ನಂತರ ಮತ್ತೆ ಗೀತಾ ಅವರು ಕೆಲವು ತಮಿಳು ಧಾರಾವಾಹಿಗಳ ಮೂಲಕ ಬಂದರು. ಹೀಗೆ ಸಿನಿಮಾರಂಗದಲ್ಲಿ ನಟಿಸಿ ಅನುಭವ ಪಡೆದಿದ್ದ ನಟಿ ಗೀತಾ ಅವರು ಕಿರುತೆರೆಗೆ ಪಾದಾರ್ಪಣೆ ಮಾಡಿದರು. ಹೀಗೆ ಕಿರುತೆರೆಯಲ್ಲಿ ಕೂಡ ಅನೇಕ ಧಾರವಾಹಿಗಳಲ್ಲಿ ಕಾಣಿಸಿಕೊಂಡರು. ಮದುವೆಯಾದ ನಂತರ ಕನ್ನಡ ಚಿತ್ರರಂಗದಿಂದ ದೂರವಾಗಿದ್ದರು ನಟಿ ಗೀತಾ ಅವರು ಇತ್ತೀಚಿಗಷ್ಟೇ ‘ಹಳ್ಳಿ ಪಂಚಾಯಿತಿ’ ಎಂಬ ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಮರಳಿದ್ದರು. ಇನ್ನು ಬಹುವರ್ಷಗಳ ಕಾಲ ಕನ್ನಡ ಚಿತ್ರರಂಗಕ್ಕೆ ಏಕೆ ಬರಲಿಲ್ಲ ಎಂದು ಪ್ರಶ್ನಿಸಿದಾಗ ಅವರು ಕೊಡುವ ಉತ್ತರ,

ತಮಿಳು ಚಿತ್ರರಂಗದಲ್ಲಿ ಸಿಕ್ಕ ಒಳ್ಳೆ ಅವಕಾಶಗಳು ಕನ್ನಡ ಚಿತ್ರರಂಗದಲ್ಲಿ ಸಿಗಲಿಲ್ಲ ಎಂದು ಅವರು ಹೇಳುತ್ತಾರೆ. ಅಷ್ಟೇ ಅಲ್ಲದೆ ಒಳ್ಳೆಯ ಪಾತ್ರ ಸಿಕ್ಕರೆ ಖಂಡಿತವಾಗಿಯೂ ಕೂಡ ನಟಿಸುತ್ತೇನೆ ಎಂಬ ಭರವಸೆಯನ್ನು ನೀಡಿದ್ದಾರೆ. ಹೀಗೆ ನಟಿ ಗೀತಾ ಅವರು ನ್ಯೂಜೆರ್ಸಿಯಲ್ಲಿ ಪತಿಯೊಂದಿಗೆ ಹಾಗೂ ಮಗನೊಂದಿಗೆ ನೆಲೆಸಿದ್ದು ಆಗಾಗ ಭಾರತಕ್ಕೆ ಬಂದು ಕಿರುತೆರೆಯಲ್ಲಿ ಕಾಣಿಸಿಕೊಳ್ಳುತ್ತಾರೆ. ಇನ್ನು ಇವರ ದಾಂಪತ್ಯ ಜೀವನ ಸುಖವಾಗಿರಲಿ ಹಾಗೂ ಇವರು ಮತ್ತೆ ಕನ್ನಡ ಚಿತ್ರರಂಗಕ್ಕೆ ಮರಳಲಿ ಎಂದು ನಾವು ಈ ಮೂಲಕ ಹಾರೈಸೋಣ.

Comments are closed.