Neer Dose Karnataka
Take a fresh look at your lifestyle.

ಅದು ಇದು ಯಾವುದು ಬೇಡವೇ ಬೇಡ, ಜಸ್ಟ್ ಈರುಳ್ಳಿಯನ್ನು ಹೀಗೆ ಮಾಡಿದರೆ ಮದುಮೇಹ ಫುಲ್ ಕಂಟ್ರೋಲ್ ಹೇಗೆ ಗೊತ್ತೇ??

ನಮಸ್ಕಾರ ಸ್ನೇಹಿತರೇ, ಈರುಳ್ಳಿ ಇಲ್ಲದೆ ಇಂದಿನ ಯಾವುದೇ ಅಡುಗೆಯು ಅಪೂರ್ಣವಾಗಿಯೇ ಉಳಿದಿರುತ್ತದೆ ಎಂಬುದುವರಲ್ಲಿ ಎರಡು ಮಾತಿಲ್ಲ. ಪ್ರತಿಯೊಂದು ಅಡುಗೆ ಮನೆಯಲ್ಲಿ ಈರುಳ್ಳಿ ಬಹಳ ಪ್ರಮುಖ ಪಾತ್ರವನ್ನು ವಹಿಸುತ್ತದೆ, ಮುಂಜಾನೆ ತಿಂಡಿಯಿಂದ ಹಿಡಿದು ಸಂಜೆಯ ಪಕೋಡ ಸೇರಿದಂತೆ ರಾತ್ರಿಯ ಅಡಿಗೆಯ ವರೆಗೂ ಕೂಡ ಈರುಳ್ಳಿ ಬಹಳ ಪ್ರಮುಖವಾಗಿರುತ್ತದೆ. ಆದರೆ ಹೀಗೆ ಪ್ರತಿ ದಿನವೂ ಪ್ರತಿ ಸಮಯದಲ್ಲಿ ಈರುಳ್ಳಿ ಬಳಸುವ ನಾವು, ಈರುಳ್ಳಿಯ ಅದೆಷ್ಟೋ ಪ್ರಯೋಜನಗಳನ್ನು ತಿಳಿದು ಕೊಂಡಿಲ್ಲ ಎಂದರೆ ನೀವು ನಂಬಲೇ ಬೇಕು.

ಹೌದು ಸ್ನೇಹಿತರೇ, ಅಡುಗೆ ಮನೆಯಲ್ಲಿ ಬಳಸುವ ಹಲವಾರು ವಸ್ತುಗಳಿಂದ ನಮಗೆ ಸಾಕಷ್ಟು ಆರೋಗ್ಯ ಪ್ರಾಯೋಜನಗಳು ಸಿಗುತ್ತವೆ, ಆದರೆ ಅವೆಲ್ಲವನ್ನು ಮರೆತು ನಾವು ಪ್ರತಿ ಚಿಕ್ಕ ವಿಷಯಗಳಿಗೂ ಕೂಡ ಮಾತ್ರೆಗಳ ಮೊರೆ ಹೋಗುತ್ತೇವೆ. ಆದರೆ ಈ ಎಲ್ಲ ಪದಾರ್ಥಗಳ ಪ್ರಯೋಜನ ತಿಳಿದರೆ ನಾವು ಶೇಕಡಾ 90 ಕ್ಕೂ ಹೆಚ್ಚು ಸಮಯದಲ್ಲಿ ಅಡುಗೆ ಮನೆಯ ಮದ್ದುಗಳನ್ನು ಬಳಸಬಹುದಾಗಿದೆ. ಇಂದು ನಾವು ಈರುಳ್ಳಿಯ ಬಗ್ಗೆ ಅದರಲ್ಲಿಯೂ ಮಧುಮೇಹ ಹೊಂದಿರುವವರಿಗೆ ಇದು ಹೇಗೆ ಸಹಾಯಕವಾಗಲಿದೆ ಎಂಬುದನ್ನು ತಿಳಿಸುತ್ತೇವೆ ಕೇಳಿ.

ಸ್ನೇಹಿತರೇ ವಿಜ್ಞಾನಿಗಳು ನಡೆಸಿದ ಅಧ್ಯಯನಗಳ ಪ್ರಕಾರ ಪ್ರತಿದಿನ ಈರುಳ್ಳಿ ತಿನ್ನುವುದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ತೋರಿಸಿದೆ. 100 ಗ್ರಾಂ ಕೆಂಪು ಈರುಳ್ಳಿ ತಿನ್ನುವುದರಿಂದ ಕೇವಲ 4 ಗಂಟೆಗಳಲ್ಲಿ ಸಕ್ಕರೆ ಕಡಿಮೆ ಯಾಗುತ್ತದೆ ಎಂಬುದು ತಿಳಿದು ಬಂದಿದೆ. ನಿರ್ದಿಷ್ಟವಾಗಿ ಹೇಳುವುದಾದರೆ, ಈರುಳ್ಳಿ ತಿನ್ನುವುದರಿಂದ ಟೈಪ್ 2 ಡಯಾಬಿಟಿಸ್ ಇರುವವರು ಇನ್ಸುಲಿನ್ ಪ್ರತಿ ರೋಧವನ್ನು ಕಡಿಮೆ ಮಾಡಿಕೊಳ್ಳಬಹದುದು, ಇದು ಮಧುಮೇಹವನ್ನು ನಿಯಂತ್ರಿಸಲು ಸಹ ಸಹಾಯ ಮಾಡುತ್ತದೆ. ಆದ್ದರಿಂದ, ಟೈಪ್ 2 ಡಯಾಬಿಟಿಸ್ ಇರುವವರು ಪ್ರತಿದಿನ ಹಸಿರು ಈರುಳ್ಳಿ ತಿನ್ನಬೇಕು ಎಂದು ವಿಜ್ಞಾನಿಗಳು ಸೂಚಿಸುತ್ತಾರೆ. (ಪ್ರತಿದಿನ 100 ಗ್ರಾಂ ಬೇಡ, ಸಾಧ್ಯವಾದಷ್ಟು ಆಗಾಗ್ಗೆ ತಿನ್ನಬಹುದು).

Comments are closed.