Neer Dose Karnataka
Take a fresh look at your lifestyle.

ನೀವೆಂದು ಕೇಳಿರದ ಹಾಗೂ ತಿಳಿಯದ ಟಾಪ್ ನಟಿ ಮಾಲಾಶ್ರೀ ರವರ ಜನ್ಮ ರಹಸ್ಯವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ನಮ್ಮ ಭಾರತದಲ್ಲಿ ಅತ್ಯಂತ ಹೆಚ್ಚಾಗಿ ಚಾಲ್ತಿಯಲ್ಲಿರುವುದು ಕ್ರೀಡೆ ಬಿಟ್ಟರೆ ಸಿನಿಮಾ. ಈ ಸಿನಿ ದುನಿಯಾ ಕೂಡ ಬಹಳಷ್ಟು ರಂಗುರಂಗಿನ ಕೂಡಿರುವ ಪ್ರಪಂಚವಾಗಿದೆ. ಈ ಸಿನಿ ದುನಿಯಾದಲ್ಲಿ ಗೆಲ್ಲೋದು ಪ್ರತಿಭಾನ್ವಿತರ ಹೊರತು ಉಳಿದವರಿಗೆ ಇಲ್ಲಿ ನೆಲೆಯೂರಲು ಕೂಡ ಸಾಧ್ಯವಿಲ್ಲ. ಆದರೆ ನಾವು ಎಂದು ಹೇಳಲು ಹೊರಟಿರುವ ನಟಿ ಹೀರೋ ಗಳಿಗಿಂತ ಹೆಚ್ಚಾಗಿ ಚಿತ್ರರಂಗದಲ್ಲಿ ಸಂಭಾವನೆ ಹಾಗೂ ಜನರ ಪ್ರೀತಿಯನ್ನು ಸಂಪಾದಿಸುವ ಮೂಲಕ ಲೇಡೀಸ್ ಸೂಪರ್ ಸ್ಟಾರ್ ಎಂಬ ಪಟ್ಟವನ್ನು ಕೂಡ ಕಟ್ಟಿಕೊಂಡಿದ್ದರು.

ಹೌದು ಸ್ನೇಹಿತರೆ ನಾವು ಎಂದು ಹೇಳಲು ಹೊರಟಿರುವುದು ಕನ್ನಡ ಚಿತ್ರರಂಗದ ಲೇಡಿ ಸೂಪರ್ ಸ್ಟಾರ್ ಎಂದೇ ಖ್ಯಾತರಾಗಿದ್ದ ಅಂತಹ ಪ್ರತಿಭಾನ್ವಿತ ನಟಿ ಮಾಲಾಶ್ರೀ ಅವರ ಕುರಿತಂತೆ. ಹೌದು ಸ್ನೇಹಿತರೆ ಮಾಲಾಶ್ರೀ ಅವರು ಒಂದು ಕಾಲದಲ್ಲಿ ವರ್ಷಕ್ಕೆ 20 ಚಿತ್ರಗಳಲ್ಲಿ ನಟಿಸಿದ ದಾಖಲೆಯನ್ನು ಮಾಡಿದ್ದರು. ಒಂದು ವರ್ಷಕ್ಕೆ 20 ಚಿತ್ರಗಳಲ್ಲಿ ನಟಿಸುವುದು ಯಾವ ನಟನೆಗೂ ಯಾವ ನಟಿಗೂ ಆಗದಂತ ಕೆಲಸ ಆದರೂ ಕೂಡ ಇದನ್ನು ಮಾಡಿ ತೋರಿಸಿದವರು ನಮ್ಮ ಮಾಲಾಶ್ರೀ.

ಅಂದಿನ ಕಾಲಕ್ಕೆ ಕನ್ನಡ ಚಿತ್ರರಂಗದಲ್ಲಿ ಮಾಲಾಶ್ರೀ ಅವರೊಂದಿಗೆ ನಟಿಸಿದ ಯಾವುದೇ ಹೀರೋ ಯಾವುದೇ ಹೊಸ ನಟ ಸೈಡ್ ಆಕ್ಟರ್ ಎಲ್ಲರೂ ಕೂಡ ಹೆಸರನ್ನು ಸಂಪಾದಿಸುತ್ತಿದ್ದರು. ಕಾರಣ ಮಾಲಾಶ್ರೀಯವರಿಗೆ ಇದ್ದಂತಹ ಜನಪ್ರಿಯತೆ. ಆಗಿನ ಕಾಲದ ಎಲ್ಲಾ ಸೂಪರ್ಸ್ಟಾರ್ ಗಳೊಂದಿಗೆ ನಟಿಸಿದ ಅನುಭವ ಮಾಲಾಶ್ರೀ ಅವರಿಗಿತ್ತು. ಮಾಲಾಶ್ರೀ ಅವರೊಂದಿಗೆ ನಟಿಸಲು ನಟರು ಕ್ಯೂ ನಲ್ಲಿ ನಿಲ್ಲುತ್ತಿದ್ದರಂತೆ. ಹೌದು ಸ್ನೇಹಿತರೆ ಅದೆಷ್ಟು ದೊಡ್ಡ ದೊಡ್ಡ ನಟರಿಗಿಂತ ಹೆಚ್ಚಿನ ಸಂಭಾವನೆಯನ್ನು ಪಡೆಯುತ್ತಿದ್ದ ಅಂತಹ ಜನಪ್ರಿಯತೆ ಮಾಲಾಶ್ರೀಯವರಿಗೆ ಆ ಕಾಲದಲ್ಲೇ ಇತ್ತು.

ಮಾಲಾಶ್ರೀ ಚಿತ್ರದಲ್ಲಿ ನಟಿಸುತ್ತಿದ್ದಾರೆ ಎಂದರೆ ಖಂಡಿತವಾಗಿಯೂ ಚಿತ್ರ ನೂರು ದಿನಗಳ ಕಾಲ ಯಶಸ್ವಿಯಾಗಿ ಪ್ರದರ್ಶನ ಕಾಣುವುದು ಖಂಡಿತ ಎಂಬ ನಂಬಿಕೆ ಆ ಕಾಲದಲ್ಲಿ ಸ್ಯಾಂಡಲ್ವುಡ್ನಲ್ಲಿ ಇತ್ತು. ಇನ್ನು ಮಾಲಾಶ್ರೀ ಅವರು ಬಾಲ್ಯದಿಂದಲೂ ಸಹ ಚಿತ್ರರಂಗದ ಒಳಮರ್ಮವನ್ನು ಅರಿತವರು. ಏಕೆಂದರೆ ಅವರು ಬಾಲನಟಿಯಾಗಿ ಚಿತ್ರರಂಗಕ್ಕೆ ಕಾಲಿಟ್ಟವರು. ತಮಿಳು ಚಿತ್ರರಂಗದಲ್ಲಿ ಬಾಲನಟಿಯಾಗಿ 34 ಚಿತ್ರಗಳಿಗೂ ಅಧಿಕ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.

ಇನ್ನು ಈ ಚಿತ್ರಗಳಲ್ಲಿ ಗಂಡುಮಗುವಿನ ಪಾತ್ರ ಮಾಡುವ ಮೂಲಕ ಅವರು ಯಶಸ್ವಿಯಾಗಿದ್ದರು. ಹೆಣ್ಣ್ ಆಗಿದ್ದರೂ ಸಹ ಗಂಡುಮಗುವಿನ ಪಾತ್ರವನ್ನು ಚಿಕ್ಕವಯಸ್ಸಿನಲ್ಲಿ ಸುಲಲಿತವಾಗಿ ಮಾಡಬಲ್ಲ ಪ್ರಾವೀಣ್ಯತೆ ಅವರಿಗಿತ್ತು. ಆದರೆ ಇಂದು ನಾವು ಹೇಳಹೊರಟಿರುವ ವಿಷಯ ಏನೆಂದರೆ ನಿಮಗ್ಯಾರಿಗೂ ತಿಳಿಯದಂತಹ ಮಾಲಾಶ್ರಿಯವರ ಜನ್ಮರಹಸ್ಯದ ಕುರಿತಂತೆ ನಾವು ಇಂದು ಮಾತನಾಡಲು ಹೊರಟಿದ್ದೇವೆ.

ಹೌದು ಸ್ನೇಹಿತರೆ ಮಾಲಾಶ್ರೀ ಅವರು ಎಷ್ಟು ವರ್ಷಗಳ ಕಾಲ ತಮ್ಮ ತಾಯಿಯನ್ನು ಚಿಕ್ಕಮ್ಮ ಎಂದುಕೊಂಡಿದ್ದರಂತೆ. ಹೌದು ಸ್ನೇಹಿತರೆ ಚಿಕ್ಕವಯಸ್ಸಿನಲ್ಲೇ ಇರಬೇಕಾದರೆ ಅವರ ತಂದೆ-ತಾಯಿ ದೂರವಾದರು. ಇದರಿಂದಾಗಿ ಮಾಲಾಶ್ರೀ ಅವರ ತಾಯಿ ತನ್ನ ಮಗಳನ್ನು ಸ್ವಾವಲಂಬಿಯಾಗಿ ಬೆಳೆಸಬೇಕೆಂಬ ಆಲೋಚನೆಯಿಂದ ತಮ್ಮ ಅಕ್ಕ ಎಂದರೆ ಮಾಲಾಶ್ರೀ ಅವರ ದೊಡ್ಡಮ್ಮನ ಬಳಿ ಅವರನ್ನು ಸಾಕಲು ಬಿಟ್ಟರು. ನಂತರ ಮಾಲಾಶ್ರೀಯವರ ತಾಯಿ ಸಿನಿರಂಗದ ಪರಿಚಯ ಇದ್ದುದರಿಂದ ಮಾಲಾಶ್ರೀ ಅವರು ಬಾಲ ನಟಿಯಾಗಲು ಸಾಧ್ಯವಾಯಿತು.

ಇನ್ನು ಮಾಲಾಶ್ರೀ ಅವರಿಗೆ ತಮ್ಮ ತಾಯಿ ಚಿಕ್ಕಮ್ಮ ಅಲ್ಲ ತನ್ನ ತಾಯಿ ಎಂಬುದು ಗೊತ್ತಾಯ್ತು ಎಂಬುದು ನಿಮಗೆ ಹೇಳುತ್ತೇನೆ. ಹೌದು ಸ್ನೇಹಿತರೆ ತನ್ನ ದೊಡ್ಡಮ್ಮನನ್ನೇ ನನ್ನ ತಾಯಿ ಎಂದುಕೊಂಡಿದ್ದ ಅಂತಹ ಮಾಲಾಶ್ರೀಯವರಿಗೆ ತಮ್ಮ ತಾಯಿಯ ರಹಸ್ಯ ಗೊತ್ತಾಗಿದ್ದು ಹೇಗೆ ಗೊತ್ತಾ. ಹೌದು ಸ್ನೇಹಿತರೆ ಒಮ್ಮೆ ಮಾಲಾಶ್ರೀಯವರ ದೊಡ್ಡಮ್ಮ ಅಪ’ಘಾತದಲ್ಲಿ ಇಹಲೋಕ ತ್ಯಜಿಸಿದ ನಂತರ ಮಾಲಾಶ್ರೀ ಅವರಿಗೆ ತಮ್ಮ ಚಿಕ್ಕಮ್ಮ ತಮ್ಮ ತಾಯಿಯ ಎಂಬುದು ತಿಳಿಯಿತು. ಆದರೂ ಮಾಲಾಶ್ರೀ ಅವರು ಇಂದಿಗೂ ಹೇಳುವುದೇನೆಂದರೆ ತನಗೆ ತಾಯಿ ಹಾಗೂ ದೊಡ್ಡಮ್ಮ ನಲ್ಲಿ ಯಾವುದೇ ವ್ಯತ್ಯಾಸವಿರಲಿಲ್ಲ ನನ್ನ ದೊಡ್ಡಮ್ಮನ ಕೂಡ ನನ್ನ ತಾಯಿಯಂತೆ ನನ್ನನ್ನು ಸಾಕಿ ಬೆಳೆಸಿದ್ದಾರೆ ಎಂಬುದು. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೇ ಹಂಚಿಕೊಳ್ಳಿ.

Comments are closed.