Neer Dose Karnataka
Take a fresh look at your lifestyle.

ಬಿಗ್ ಬಾಸ್ ಗೆದ್ದ ನಂತರ ಸುದೀಪ್ ರವರ ಮನೆಗೆ ಹೋದ ಮಂಜುಗೆ ಸಿಕ್ಕ ಕೋಟಿ ಕೊಟ್ಟರು ಸಿಗದ ಸಿಗದ ಉಡುಗೊರೆ ಏನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಗ್ ಬಾಸ್ ಕನ್ನಡ ಸೀಸನ್ 8 ಈಗಾಗಲೇ ಮುಕ್ತಾಯಗೊಂಡಿದ್ದು ಮಂಜು ಪಾವಗಡ ರವರು ವಿಜೇತರಾಗಿ ರಾಜ್ಯಾದ್ಯಂತ ಕನ್ನಡ ಕಿರುತೆರೆಯ ಪ್ರೇಕ್ಷಕರ ಮನಸ್ಸಿನಲ್ಲಿ ನೆಚ್ಚಿನ ಅಭ್ಯರ್ಥಿಯಾಗಿ ಉಳಿದುಕೊಂಡಿದ್ದಾರೆ. ಇದಕ್ಕೆ ಇನ್ನೊಂದು ಕಾರಣ ಏನು ಗೊತ್ತಾ ಸ್ನೇಹಿತರೆ, ಮಂಜು ಪಾವಗಡ ರವರು ಬಿಗ್ ಬಾಸ್ ಕನ್ನಡದ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಅಂದರೆ ಬರೋಬ್ಬರಿ 45 ಲಕ್ಷಕ್ಕೂ ಹೆಚ್ಚಿನ ವೋಟುಗಳನ್ನು ಪಡೆದುಕೊಂಡಿದ್ದಾರೆ.

ಇದು ಈಗಾಗಲೇ ಅವರ ಜನಪ್ರಿಯತೆಯನ್ನು ರಾಜ್ಯಾದ್ಯಂತ ಹರಡಿಸಿದೆ. ಮಜಾ ಭಾರತ ಕಾರ್ಯಕ್ರಮದ ಮೂಲಕ ಕನ್ನಡಿಗರಿಗೆ ಪರಿಚಿತರಾಗಿದ್ದಂತಹ ಮಂಜು ಪಾವಗಡ ರವರು ಇದೀಗ ಬಿಗ್ ಬಾಸ್ ಖ್ಯಾತಿಯ ಮಂಜು ಪಾವಗಡರಾಗಿ ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ. ಇನ್ನು ಈಗಾಗಲೇ ಕಲರ್ಸ್ ಕನ್ನಡ ವಾಹಿನಿಯ ಪರವಾಗಿ 53 ಲಕ್ಷ ರೂಪಾಯಿ ನಗದು ಬಹುಮಾನ ಹಾಗೂ ಸಂಭಾವನೆಗಳನ್ನು ಸೇರಿಸಿ ಸರಿಸುಮಾರು 60 ಲಕ್ಷ ರೂಪಾಯಿಯನ್ನು ಗೆದ್ದಿದ್ದಾರೆ. ಎಲ್ಲಾ ಸೆಲೆಬ್ರಿಟಿಗಳಿಂದ ಶುಭಾಶಯಗಳನ್ನು ಕೂಡ ಪಡೆದುಕೊಂಡಿದ್ದಾರೆ. ಆದರೆ ಈಗ ನಾವು ಹೇಳಹೊರಟಿರುವ ವಿಷಯವೆಂದರೆ ಬಿಗ್ ಬಾಸ್ ನ ನಿರೂಪಕ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಕೂಡ ಮಂಜು ಪಾವಗಡ ರವರಿಗೆ ವಿಶೇಷವಾದ ಗಿಫ್ಟ್ ಒಂದನ್ನು ನೀಡಿದ್ದಾರೆ.

ಹೌದು ಸ್ನೇಹಿತರೇ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ರವರು ಬಿಗ್ ಬಾಸ್ ನ ವಿಜೇತ ಮಂಜು ಪಾವಗಡ ರವರಿಗೆ ನೀಡಿರುವ ಗಿಫ್ಟು ಬೇರೇನೂ ಅಲ್ಲ. ಅವರು ಗೆದ್ದ ದಿವಸವೇ ತಮ್ಮ ಮನೆಗೆ ಕರೆದುಕೊಂಡು ಹೋಗಿ ತನ್ನೊಂದಿಗೆ ಕೂರಿಸಿಕೊಂಡು ಔತಣಕೂಟವನ್ನು ಏರ್ಪಡಿಸಿದ್ದರು ಒಟ್ಟಿಗೆ ಕೂತು ಊಟವನ್ನು ಕೂಡ ಮಾಡಿದ್ದಾರೆ. ಮಾತ್ರವಲ್ಲದೆ ಇದೇ ಸಮಯದಲ್ಲಿ ಮಂಜು ಪಾವಗಡ ರವರು ಕಿಚ್ಚ ಸುದೀಪ್ ರವರ ತಂದೆ-ತಾಯಿಗಳ ಆಶೀರ್ವಾದವನ್ನು ಕೂಡ ಪಡೆದುಕೊಂಡಿದ್ದಾರೆ. ಇದಕ್ಕಿಂತ ದೊಡ್ಡದಾದಂತಹ ಗಿಫ್ಟ್ ಮಂಜು ಪಾವಗಡ ರವರಿಗೆ ಸಿಗಲು ಸಾಧ್ಯವೇ ಇಲ್ಲ ಎಂದು ಹೇಳಬಹುದು. ಮಂಜು ಪಾವಗಡ ರವರ ಮುಂದಿನ ಜೀವನ ಸುಖಕರವಾಗಿರಲಿ ಎಂದು ನಾವು ಹಾರೈಸೋಣ.

Comments are closed.