Neer Dose Karnataka
Take a fresh look at your lifestyle.

ಟಾಪ್ ನಟರ ಜೊತೆ ನಟನೆ ಮಾಡಿರುವ ಪ್ರೇಮ ರವರು ಮಹಾನ್ ನಟನೊಂದಿಗೆ ಮಾತ್ರ ಅವಕಾಶ ಪಡೆಯಲೇ ಇಲ್ಲ ಯಾಕೆ ಗೊತ್ತೇ??

2

ನಮಸ್ಕಾರ ಸ್ನೇಹಿತರೇ ಕೊಡಗಿನ ಕುವರಿ ಎಂದೇ ಖ್ಯಾತರಾಗಿರುವ ನಟಿ ಪ್ರೇಮಾ ಅವರು ಕನ್ನಡ ಚಿತ್ರರಂಗದ ಹಲವಾರು ನಟರೊಂದಿಗೆ ತೆರೆಯನ್ನು ಹಂಚಿಕೊಂಡು ಕನ್ನಡ ಪ್ರೇಕ್ಷಕರ ಮನಸ್ಸನ್ನು ಗೆದ್ದಂತವರು. ಹೌದು ಸ್ನೇಹಿತರೆ ಕನ್ನಡ ಚಿತ್ರರಂಗದಲ್ಲಿ ಕರುನಾಡ ಚಕ್ರವರ್ತಿ ಶಿವಣ್ಣ ನಟನೆಯ ಓಂ ಚಿತ್ರದಿಂದ ತಮ್ಮ ನಟನಾ ವೃತ್ತಿಯನ್ನು ಪ್ರಾರಂಭಿಸಿ ನಂತರ ಸಾಹಸಸಿಂಹ ವಿಷ್ಣುವರ್ಧನ್ ರವರೊಂದಿಗೆ ಆಪ್ತಮಿತ್ರ ಯಜಮಾನ ಹೀಗೆ ಹಲವಾರು ಚಿತ್ರಗಳಲ್ಲಿ ಕೂಡ ನಟಿಸಿದ್ದರು. ಇನ್ನು ಪ್ರೇಮಾರವರ ಕಾಂಬಿನೇಷನ್ ಹೆಚ್ಚಾಗಿ ಸದ್ದು ಮಾಡಿದ್ದು ಎವರ್ಗ್ರೀನ್ ಸ್ಟಾರ್ ರಮೇಶ್ ಅರವಿಂದ್ ರವರ ಜೊತೆಗೆ.

ಹೌದು ಸ್ನೇಹಿತರೆ ಪ್ರೇಮ ಹಾಗೂ ರಮೇಶ್ ಅರವಿಂದ್ ಕಾಂಬಿನೇಷನ್ ಕನ್ನಡ ಪ್ರೇಕ್ಷಕರ ಸಾಕಷ್ಟು ಮನಗೆದ್ದಿತ್ತು. 2000 ಇಸವಿಯ ಸಂದರ್ಭದಲ್ಲಿ ಪ್ರೇಮ್ ಅವರು ಕನ್ನಡ ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದರು. ಯಾವುದೇ ಪಾತ್ರವನ್ನು ಕೂಡ ಸುಲಲಿತವಾಗಿ ನಿರ್ವಹಿಸಬಲ್ಲಂತಹ ಅಗಮ್ಯ ಪ್ರತಿಭೆಯುಳ್ಳಂತಹ ಕಲಾವಿದೆ ಎಂದರೆ ಪ್ರೇಮ ಎಂದು ಹೇಳಬಹುದು. ಎಲ್ಲಾ ಜನರೇಷನ್ ನಟರೊಂದಿಗೆ ನಟಿಸಿ ಶಹಬಾಸ್ ಗಿರಿಯನ್ನು ಪಡೆದುಕೊಂಡಾಕೆ ಪ್ರೇಮ. ಅಂದಿನ ದಿನಗಳಲ್ಲಿ ಪ್ರೇಮ ರವರು ಚಿತ್ರದಲ್ಲಿ ಇದ್ದರು ಎಂದರೆ ಚಿತ್ರಮಂದಿರಗಳು ಹೌಸ್ ಫುಲ್ ಪ್ರದರ್ಶನವನ್ನು ಕಾಣುತ್ತಿದ್ದವು.

ಇನ್ನು ಪ್ರೇಮ ಅವರು ಕನ್ನಡ ಚಿತ್ರರಂಗದಲ್ಲಿ ಎಲ್ಲಾ ನಟರೊಂದಿಗೆ ನಟಿಸಿದರು ಆದರೆ ಮಹಾನ್ ನಟನೊಂದಿಗೆ ನಟಿಸಲು ಸಾಧ್ಯವಾಗಲಿಲ್ಲ. ಹೌದು ಸ್ನೇಹಿತರೆ ನಟಿ ಪ್ರೇಮಾ ರವರು ರಾಜಕುಮಾರ್ ಅವರ ಬ್ಯಾನರ್ ನಿಂದಲೇ ಹೊರಬಂದವರು ಆದರೆ ರಾಜಕುಮಾರ್ ಅವರೊಂದಿಗೆ ನಟಿಸುವ ಭಾಗ್ಯ ಅವರಿಗೆ ಸಿಗಲಿಲ್ಲ. ರಾಜಕುಮಾರ್ ರವರ ಇಬ್ಬರು ಮಕ್ಕಳಾದ ಶಿವರಾಜ್ ಕುಮಾರ್ ಹಾಗೂ ರಾಘವೇಂದ್ರ ರಾಜಕುಮಾರ್ ಇಬ್ಬರೊಂದಿಗೆ ಕೂಡ ಈಕ ನಟಿಸಿದ್ದರು. ಮಾತ್ರವಲ್ಲದೇ ರಾಜಕುಮಾರ್ ಅವರಿಂದಲೂ ಕೂಡ ಶಹಬಾಸ್ ಗಿರಿಯನ್ನು ಈಕೆ ಪಡೆದುಕೊಂಡಿದ್ದರು ಆದರೆ ನಟಿಸಲು ಮಾತ್ರ ಸಾಧ್ಯವಾಗಲಿಲ್ಲ. ನಟಿ ಪ್ರೇಮಾರವರ ನಟನೆಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.