Neer Dose Karnataka
Take a fresh look at your lifestyle.

ಆರ್ಸಿಬಿ ತಂಡದಿಂದ ಮತ್ತೊಬ್ಬ ಬೌಲರ್ ಟಿ 20 ವಿಶ್ವಕಪ್ ತಂಡಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತ, ಕಾರಣವೇನು ಗೊತ್ತೇ??

ನಮಸ್ಕಾರ ಸ್ನೇಹಿತರೇ ಬಿಸಿಸಿಐ ವಿಶ್ವಕಪ್ ಟಿ 20 ತಂಡಕ್ಕೆ ತಂಡವನ್ನು ಪ್ರಕಟಿಸಿದಾಗ ಹಲವಾರು ಅಚ್ಚರಿಗೆ ಕಾರಣವಾಗಿತ್ತು. ಹಲವು ಪ್ರಮುಖರಿಗೆ ತಂಡದಿಂದ ಕೋಕ್ ನೀಡಲಾಗಿತ್ತು. ಅದರಲ್ಲೂ ವಿಶೇಷವಾಗಿ ಭಾರತ ಟಿ 20 ತಂಡದ ಖಾಯಂ ಸದಸ್ಯರಾಗಿದ್ದ ಯುಜವೇಂದ್ರ ಚಾಹಲ್ ಗೆ ತಂಡದಲ್ಲಿ ಕೋಕ್ ನೀಡಿದ್ದು ಎಲ್ಲರಿಗೂ ಬಹಳಷ್ಟು ಆಶ್ಚರ್ಯವಾಗಿತ್ತು. ಇದಕ್ಕೆ ಕಾರಣ ನೀಡಿದ ಬಿಸಿಸಿಐ, ದುಬೈ,ಶಾರ್ಜಾ ನಂತಹ ಪಿಚ್ ಗಳಲ್ಲಿ ವೇಗವಾಗಿ ಬಾಲ್ ನ್ನು ಸ್ಪಿನ್ ಮಾಡುವ ಕೌಶಲ ಇರಬೇಕು. ಹಾಗಾಗಿ ಯುಜವೇಂದ್ರ ಚಾಹಲ್ ಬದಲು ರಾಹುಲ್ ಚಾಹರ್ ರವರ ಆಯ್ಕೆಯನ್ನ ಬಿಸಿಸಿಐ ಸಮರ್ಥಿಸಿಕೊಂಡಿತ್ತು.

ಆದರೇ ಅದೇ ಪಿಚ್ ಗಳಲ್ಲಿ ಶುರುವಾದ ಐಪಿಎಲ್ ನ ಎರಡನೇ ಚರಣದಲ್ಲಿ ಬಿಸಿಸಿಐ ಲೆಕ್ಕಾಚಾರ ಸಂಪೂರ್ಣ ತಲೆಕೆಳಗಾಗುವಂತೆ ತಂಡದಿಂದ ಕೈ ಬಿಟ್ಟ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಿದ್ದರೇ, ಇತ್ತ ತಂಡಕ್ಕೆ ಆಯ್ಕೆಯಾದ ಆಟಗಾರರು ಫಾರ್ಮ್ ಸಮಸ್ಯೆ ಎದುರಿಸುತ್ತಿದ್ದಾರೆ. ಅದರಲ್ಲೂ ವಿಶೇಷವಾಗಿ ಯುಜವೇಂದ್ರ ಚಾಹಲ್ ತಮ್ಮ ಅದ್ಭುತ ಸ್ಪಿನ್ ಬೌಲಿಂಗ್ ಕೌಶಲ್ಯದಿಂದ ಆಯ್ಕೆಗಾರರಿಗೆ ಮುಟ್ಟಿ ನೋಡಿಕೊಳ್ಳುವಂತಹ ಉತ್ತರ ನೀಡುತ್ತಿದ್ದಾರೆ. ಮುಂಬೈ ತಂಡದ ವಿರುದ್ದ ಯುಜಿ ಮಾಡಿದ ಸ್ಪಿನ್ ಮೋಡಿ ಕಾಕತಾಳೀಯವೆನಿಸಿದರೂ, ಕಿಂಗ್ ಇಲೆವೆನ್ ಪಂಜಾಬ್ ತಂಡದ ವಿರುದ್ದ ಮಾಡಿದ ಬೌಲಿಂಗ್ ಈಗ ವಿಶ್ವದ ಎಲ್ಲಾ ಕ್ರಿಕೇಟ್ ಪ್ರಿಯರ ಗಮನಸೆಳೆಯುತ್ತಿದೆ.

ಒಂದು ಹಂತದಲ್ಲಿ ಕೇವಲ ಒಂದು ವಿಕೇಟ್ ಕಳೆದುಕೊಂಡು ಗೆಲುವಿನತ್ತ ಸಾಗುತ್ತಿದ್ದ ಪಂಜಾಬ್ ತಂಡದ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ ಶಕ್ತಿಯನ್ನ ಮುರಿದು ಹಾಕಿದರು. ಒಂದೇ ಓವರ್ ನಲ್ಲಿ ನಿಕೋಲಸ್ ಪೂರನ್ ಹಾಗೂ ಉತ್ತಮ ಬ್ಯಾಟಿಂಗ್ ಮಾಡಿ ಅರ್ಧಶತಕಗಳಿಸಿದ್ದ ಮಯಾಂಕ್ ಅಗರ್ವಾಲ್ ರನ್ನ ಪೆವಿಲಿಯನ್ ಗೆ ಕಳುಹಿಸುವಲ್ಲಿ ಯಶಸ್ವಿಯಾದರು. ನಂತರ ಸರ್ಫರಾಜ್ ಖಾನ್ ಗೆ ಮಾಡಿದ ಎಸೆತವನ್ನ ವಿಶ್ವದ ಎಲ್ಲಾ ಕ್ರಿಕೇಟ್ ದಿಗ್ಗಜರು ಆ ಎಸೆತವನ್ನ ಶತಮಾನದ ಎಸೆತ ಎಂದು ಬಣ್ಣಿಸುತ್ತಿದ್ದಾರೆ. ಅಷ್ಟೇನೂ ಸಹಾಯಕಾರಿಯಲ್ಲದ ಪಿಚ್ ನಲ್ಲಿ, ಚಾಹಲ್ ಲೆಗ್ ಸ್ಟಂಪ್ ಮೇಲೆ ಎಸೆದ ಬಾಲ್, ಆಫ್ ಸ್ಟಂಪ್ ನತ್ತ ತಿರುಗಿ ಬೇಲ್ಸ್ ಎಗರಿಸಿತ್ತು. ಸರ್ಫರಾಜ್ ಖಾನ್ ಗೆ ಎನು ನಡೆಯುತ್ತದೆ ಎಂಬುದು ತಿಳಿಯುವದೊರಳಗೆ ಅವರ ವಿಕೇಟ್ ಹೋಗಿತ್ತು.

ಕೇವಲ ನಾಲ್ಕು ಓವರ್ ಗಳಲ್ಲಿ 27 ರನ್ ನೀಡಿ, ತಂಡದ ಪ್ರಮುಖ ಮೂರು ವಿಕೇಟ್ ನ್ನ ತೆಗೆದು, ಸೋಲುತ್ತಿದ್ದ ಆರ್ಸಿಬಿ ತಂಡಕ್ಕೆ ಮರುಜೀವ ನೀಡಿದ್ದು ಯುಜವೇಂದ್ರ ಚಾಹಲ್. ಇನ್ನು ಈ ಮೂಲಕ ವಿಶೇಷವಾದ ದಾಖಲೆಯೊಂದನ್ನ ನಿರ್ಮಿಸಿದ ಚಾಹಲ್, ಯು.ಎ.ಇ ಯಲ್ಲಿ ಅತಿ ಹೆಚ್ಚು ವಿಕೇಟ್ ಪಡೆದ ಭಾರತದ ಬೌಲರ್ ಎನಿಸಿಕೊಂಡರು. 38 ವಿಕೇಟ್ ಪಡೆಯುವ ಮೂಲಕ ಜಸಪ್ರಿತ್ ಬುಮ್ರಾ ಜೊತೆ ಮೊದಲ ಸ್ಥಾನ ಹಂಚಿಕೊಂಡಿದ್ದಾರೆ. ಈ ಮೂಲಕ ಯು.ಎ.ಇ ಪಿಚ್ ಗಳಲ್ಲಿ ತಾವೆಷ್ಟು ಪ್ರಬಲ ಎಂದು ಸಾಬೀತುಪಡಿಸಿದ್ದಾರೆ. ಹೀಗಾಗಿ ಚಾಹಲ್ ಗೆ ಟಿ 20 ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆಯುತ್ತಾರೆಂದು ಹೇಳಲಾಗಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.