World cup 2023: ಭಾರತದ ಪರ ಕೊನೆ ವಿಶ್ವಕಪ್ ಆಡುತ್ತಿರುವ ಟಾಪ್ ಆರಗಾರರು ಯಾರು ಗೊತ್ತೇ? ಲಿಸ್ಟ್ ನಲ್ಲಿ ಪ್ರಮುಖರು.
World cup 2023 Kannada News: ನಮಸ್ಕಾರ ಸ್ನೇಹಿತರೇ ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ನಿನ್ನೆಯಿಂದ ಅಂದ್ರೆ ಅಕ್ಟೋಬರ್ 5 ನೇ ತಾರೀಖಿನಿಂದ ಭಾರತದಲ್ಲಿ ಏಕದಿನ ವಿಶ್ವಕಪ್(ODI world Cup) ಪ್ರಾರಂಭವಾಗಿದ್ದು ಮೊದಲ ಪಂದ್ಯದಲ್ಲಿ ಇಂಗ್ಲೆಂಡ್ ತಂಡವನ್ನು ಅಂದರೆ ಹಾಲಿ ಚಾಂಪಿಯನ್ ತಂಡವನ್ನು ಸೋಲಿಸಿ, ನ್ಯೂಜಿಲೆಂಡ್ ತಂಡ ಶುಭಾರಂಭವನ್ನು ಮಾಡಿದೆ. ಇನ್ನು ಈ ಬಾರಿ ನಡೆಯುತ್ತಿರುವಂತಹ ಏಕದಿನ ವಿಶ್ವಕಪ್ ನಮ್ಮ ಭಾರತದ ಕ್ರಿಕೆಟಿಗರಲ್ಲಿ ಅದರಲ್ಲೂ ವಿಶೇಷವಾಗಿ ಈ 5 ಪ್ರಮುಖ ಕ್ರಿಕೆಟಿಗರಿಗೆ ಕೊನೆಯ ವಿಶ್ವಕಪ್ ಆಗಿರಲಿದೆ ಎಂಬುದಾಗಿ ತಿಳಿದು ಬಂದಿದ್ದು ಬನ್ನಿ ಆ ಐವರು ಕ್ರಿಕೆಟಿಗರು ಯಾರೆಲ್ಲ ಎಂಬುದನ್ನು ತಿಳಿದುಕೊಳ್ಳೋಣ.
World cup 2023: This Might be the last world cup for these Indian players.
ರೋಹಿತ್ ಶರ್ಮಾ(Rohit Sharma) ಭಾರತೀಯ ಕ್ರಿಕೆಟ್ ತಂಡದ ಕಪ್ತಾನನಾಗಿ ಇತ್ತೀಚಿನ ದಿನಗಳಲ್ಲಿ ಅಂದರೆ ಏಷ್ಯಾ ಕಪ್ ನಿಂದ ಉತ್ತಮ ಪ್ರದರ್ಶನವನ್ನು ನೀಡುತ್ತಿರುವಂತಹ ರೋಹಿತ್ ಶರ್ಮ ಅವರಿಗೂ ಕೂಡ ಇದು ಕೊನೆಯ ವಿಶ್ವಕಪ್ ಆಗಿರಲಿದೆ ಮುಂದಿನ ಬಾರಿಯ ವಿಶ್ವಕಪ್ ಸಂದರ್ಭದಲ್ಲಿ ರೋಹಿತ್ ಶರ್ಮ 40 ವರ್ಷ ವಯಸ್ಸಿನವರಾಗಿರುತ್ತಾರೆ ಹೀಗಾಗಿ ಅವರು ಭಾರತೀಯ ಕ್ರಿಕೆಟ್ ತಂಡದಲ್ಲಿ ಇರುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ. ಪ್ರತಿಯೊಬ್ಬರೂ ಕೂಡ ಈ ಬಾರಿ ರೋಹಿತ್ ಶರ್ಮ ಅವರ ನಾಯಕತ್ವದಲ್ಲಿ ಭಾರತೀಯ ಕ್ರಿಕೆಟ್ ತಂಡ ವಿಶ್ವಕಪ್ ಗೆಲ್ಲಲಿ ಎಂಬುದಾಗಿ ಹಾರೈಸುತ್ತಿದ್ದಾರೆ.
ಮೊಹಮ್ಮದ್ ಶಮಿ( Mohammed Shami) ಸ್ನೇಹಿತರೇ ಸಾಮಾನ್ಯವಾಗಿ ನಿಮಗೆಲ್ಲರಿಗೂ ತಿಳಿದಿರಬಹುದು ಬ್ಯಾಟ್ಸ್ಮನ್ಗಳಿಗೆ ಹೋಲಿಸಿದರೆ ಬೌಲರ್ ಗಳು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ ಹೀಗಾಗಿ ಅವರು ಬೇಗನೆ ಕ್ರಿಕೆಟ್ ತಂಡದಿಂದ ನಿವೃತ್ತಿಯನ್ನು ಪಡೆದುಕೊಳ್ಳುತ್ತಾರೆ. ಅದರಲ್ಲೂ ವಿಶೇಷವಾಗಿ ಈ ಬಾರಿ ಸಾಕಷ್ಟು ಕಾಂಪಿಟೇಶನ್ ನಡುವೆ ಕೂಡ ಭಾರತದ ವಿಶ್ವಕಪ್ ತಂಡದ ಸ್ಥಾನವನ್ನು ಪಡೆದುಕೊಳ್ಳಲು ಶಮಿ ಯಶಸ್ವಿಯಾಗಿದ್ದಾರೆ ಹೀಗಾಗಿ ಇದು ಶಮಿ ಅವರ ಪಾಲಿಗೆ ನಡೆಯಲಿರುವಂತಹ ಕೊನೆಯ ವಿಶ್ವಕಪ್ ಆಗಿದೆ ಎಂದರು ಕೂಡ ತಪ್ಪಾಗಲಾರದು. ಯಾಕೆಂದರೆ ಈಗಾಗಲೇ ಅವರ ಬದಲಿ ಜಾಗವನ್ನು ತುಂಬುವುದಕ್ಕೆ ಸಾಕಷ್ಟು ವೇಗಿಗಳು ಕಾಯುತ್ತಿದ್ದಾರೆ.
ರವಿಚಂದ್ರನ್ ಅಶ್ವಿನ್( Ravichandran Ashwin) ಸ್ಪಿನ್ ಬೌಲಿಂಗ್ ಬ್ಯಾಟಿಂಗ್ ಆಲ್ರೌಂಡರ್ ಆಗಿರುವಂತಹ ರವಿಚಂದ್ರನ್ ಅಶ್ವಿನ್ ರವರು ಸರಿಯಾಗಿ ಹೇಳಬೇಕು ಅಂದ್ರೆ ಈ ಬಾರಿ ವಿಶ್ವಕಪ್ ತಂಡದಲ್ಲಿ ಆಯ್ಕೆ ಆಗಿರಲಿಲ್ಲ ಆದರೆ ಅಕ್ಷರ್ ಪಟೇಲ್ ಅವರ ಬದಲಿ ಆಟಗಾರನಾಗಿ ವಿಶ್ವ ಕಪ್ ತಂಡಕ್ಕೆ ಆಯ್ಕೆಯಾಗಿರುತ್ತಾರೆ. ಈಗಾಗಲೇ 36ನೇ ವಯಸ್ಸಿನವರು ಆಗಿರುವಂತಹ ರವಿಚಂದ್ರನ್ ಅಶ್ವಿನ್ ಅವರು ಮುಂದಿನ ವಿಶ್ವಕಪ್ ತಂಡದಲ್ಲಿ 40ನೇ ವಯಸ್ಸಿನಲ್ಲಿ ಫಿಟ್ನೆಸ್ ಕಾಪಾಡಿಕೊಳ್ಳುವುದು ಅನುಮಾನವೇ ಸರಿ ಎಂದು ಹೇಳಬಹುದಾಗಿದೆ.
ರವೀಂದ್ರ ಜಡೇಜಾ(Ravindra Jadeja) ಭಾರತೀಯ ಕ್ರಿಕೆಟ್ ತಂಡದ ಆಲ್ ರೌಂಡರ್ಗಳಲ್ಲಿ ಒಬ್ಬರಾಗಿರುವಂತಹ ರವೀಂದ್ರ ಜಡೇಜಾ ಇತ್ತೀಚಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಭಾರತೀಯ ಕ್ರಿಕೆಟ್ ತಂಡದ ಪರವಾಗಿ ಸ್ವಲ್ಪಮಟ್ಟಿಗೆ ಮಂಕಿನ ಪ್ರದರ್ಶನ ನೀಡುತ್ತಿದ್ದಾರೆ. ಹೀಗಾಗಿ ಮುಂದಿನ ವರ್ಲ್ಡ್ ಕಪ್ ಬರೋ ಸಮಯಕ್ಕಿಂತ ಮುಂಚೆ ಅವರಿಗೆ 38 ವರ್ಷ ಆಗಿರುತ್ತೆ. ಹೀಗಾಗಿ ರವೀಂದ್ರ ಜಡೇಜಾ ಕೂಡ ಮುಂದಿನ ವಿಶ್ವಕಪ್ ನಲ್ಲಿ ನಿವೃತ್ತಿಯನ್ನು ಹೊಂದಬಹುದು ಎಂಬುದಾಗಿ ಅನುಮಾನಿಸಲಾಗಿದೆ. ಭುವನೇಶ್ವರ್ ಕುಮಾರ್(Bhuvneshwar Kumar) ಭಾರತೀಯ ಕ್ರಿಕೆಟ್ ತಂಡದ ಸ್ವಿಂಗ್ ಕಿಂಗ್ ಎಂದು ಜನಪ್ರಿಯ ರಾಗಿರುವಂತಹ ಭುವನೇಶ್ವರ್ ಕುಮಾರ್ ಅವರನ್ನು ಈ ಬಾರಿಯ ವಿಶ್ವಕಪ್ ನಿಂದ ತಂಡದಿಂದ ಹೊರಹಾಕಲಾಗಿದ್ದು ಬಹುತೇಕ ಅವರ ಕ್ರಿಕೆಟ್ ಜರ್ನಿ ಮುಗಿದಿದೆ ಎಂಬುದಾಗಿ ಕ್ರಿಕೆಟ್ ಪಂಡಿತರು ಮಾತನಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಇವರು ಕೂಡ ಈ ಉಳಿದ ನಾಲ್ಕು ಜನರ ಹಾಗೆ ಮುಂದಿನ ಬಾರಿಯ ವಿಶ್ವಕಪ್ ತಂಡದಲ್ಲಿ ಆಯ್ಕೆ ಆಗುವುದು ಅನುಮಾನವೇ ಸರಿ.
Comments are closed.