Neer Dose Karnataka
Take a fresh look at your lifestyle.

Zaheer Khan: ಝಹೀರ್ ಖಾನ್ ರವರಿಗೆ ಕೊಹ್ಲಿ ಅಂದು ಮಾಡಿದ್ದೇನು ಗೊತ್ತೇ? ಅವರ ಕ್ರಿಕೆಟ್ ಅಂತ್ಯವಾಗಲು ಕೊಹ್ಲಿ ಕಾರಣನ??

Zaheer Khan: ಭಾರತ ದೇಶದ ಖ್ಯಾತ ಬ್ಯಾಟ್ಸ್ಮನ್ ವಿರಾಟ್ ಕೊಹ್ಲಿ (Virat Kohli) ಅವರು ಈ ಲೆಜೆಂಡ್ ಕ್ರಿಕೆಟ್ ಆಟಗಾರ ಎಂದು ನಮಗೆಲ್ಲ ಗೊತ್ತಿದೆ. ವಿರಾಟ್ ಅವರು ಎಂಥ ಆಟಗಾರ, ನಮ್ಮ ತಂಡದ ಇನ್ನಿತರ ಆಟಗಾರರಿಗೆ ಹೇಗೆ ಸಪೋರ್ಟ್ ಮಾಡುತ್ತಾರೆ ಎಂದು ನಮಗೆಲ್ಲ ಗೊತ್ತಿದೆ., ಹಲವು ಉದಾಹರಣೆಗಳು ಈಗಾಗಲೇ ಸಿಕ್ಕಿವೆ. ಆದರೆ ಇದೀಗ ಟೀಮ್ ಇಂಡಿಯಾದ ಮತ್ತೊಬ್ಬ ಮಾಜಿ ಆಟಗಾರ ಇಶಾಂತ್ ಶರ್ಮಾ (Ishant Sharma) ಅವರು ವಿರಾಟ್ ಕೊಹ್ಲಿ ಅವರ ಮೇಲೆ ಒಂದು ಅಪವಾದ ಮಾಡಿದ್ದಾರೆ.

ಟೀಮ್ ಇಂಡಿಯಾದ ಖ್ಯಾತ ಬೌಲರ್ ಜಹೀರ್ ಖಾನ್ (Zaheer Khan) ಅವರ ಕೆರಿಯರ್ ಕೊನೆಯಾಗೋದಕ್ಕೆ ವಿರಾಟ್ ಕೊಹ್ಲಿ ಅವರೇ ಕಾರಣ ಎಂದು ಹೇಳಿದ್ದಾರೆ. ಜಹೀರ್ ಖಾನ್ (Zaheer Khan) ಅವರು ಭಾರತಕ್ಕಾಗಿ ಕೊನೆಯ ಪಂದ್ಯ ಆಡಿದ್ದು 2014ರಲ್ಲಿ ಇಂಡಿಯಾ ವರ್ಸಸ್ ನ್ಯೂಜಿಲೆಂಡ್ ಪಂದ್ಯದಲ್ಲಿ, ಈ ಪಂದ್ಯ ವೆಲ್ಲಿಂಗ್ಟನ್ ನಲ್ಲಿ ನಡೆದಿತ್ತು. ಅಂದು ಜಹೀರ್ ಖಾನ್ (Zaheer Khan) ಅವರು ಮಾಡಿದ ಬೌಲಿಂಗ್ ನಲ್ಲಿ ನ್ಯೂಜಿಲೆಂಡ್ ಆಟಗಾರ ಬ್ರೆಂಡನ್ ಮೆಕಲಮ್ ಅವರ ಕ್ಯಾಚ್ ಹಿಡಿಯಬಹುದಿತ್ತು, ಆದರೆ ವಿರಾಟ್ ಕೊಹ್ಲಿ ಅವರು ಅಂದು ಕ್ಯಾಚ್ ಬಿಟ್ಟರು. ಇದನ್ನು ಓದಿ..Hardhik Pandya: ಹಾರ್ಧಿಕ್ ಪಾಂಡ್ಯ ಗೆ ಬಿಗ್ ಶಾಕ್- ಮೆರೆಯುತ್ತಿದ್ದ ಪಾಂಡ್ಯಗೆ ನಾಯಕತ್ವ ಕೊಡಲ್ಲ. ಬಿಸಿಸಿಐ ಗಟ್ಟಿ ನಿರ್ಧಾರ.

ಆ ಮ್ಯಾಚ್ ನಲ್ಲಿ ಮೆಕಲಮ್ ಅವರು 302 ಸ್ಕೋರ್ ಮಾಡಿ, ಮ್ಯಾಚ್ ಡ್ರಾ ಆಗುವ ಹಾಗೆ ಮಾಡಿದರು. ಈ ಘಟನೆ ಬಗ್ಗೆ ಇಶಾಂತ್ ಶರ್ಮ ಅವರು ಮಾತನಾಡಿದ್ದು, “ಆ ದಿನ ಪಂದ್ಯ ನ್ಯೂಜಿಲೆಂಡ್ ನಲ್ಲಿ ನಡೆಯುತ್ತಿತ್ತು, ವಿರಾಟ್ ಕೊಹ್ಲಿ ಕ್ಯಾಚ್ ಬಿಟ್ಟ ನಂತರ ಮೆಕಲಮ್ 300 ರನ್ಸ್ ಭಾರಿಸಿದರು. ಆ ದಿನ ಊಟ ಮಾಡುವಾಗ ಜಹೀರ್ ಖಾನ್ (Zaheer Khan) ಹತ್ತಿರ ಬಂದ ವಿರಾಟ್, ನನ್ನನ್ನು ಕ್ಷಮಿಸಿ ಎಂದು ಕ್ಷಮೆ ಕೇಳಿದರು. ಆಗ ಜಹೀರ್ ಖಾನ್, ಪರವಾಗಿಲ್ಲ ನಾವು ಅವರನ್ನು ಔಟ್ ಮಾಡುತ್ತೇವೆ..ಎಂದು ಹೇಳಿದರು.

ಟೀ ವೇಳೆ ಮತ್ತೆ ಜಹೀರ್ ಖಾನ್ (Zaheer Khan) ಹತ್ತಿರ ಬಂದ ವಿರಾಟ್ ಕ್ಷಮೆ ಕೇಳಿದರು, ಆಗ ಜಹೀರ್ ಪರವಾಗಿಲ್ಲ ಎಂದರು..ಮೂರನೇ ದಿನ ಟೀ ಸಮಯದಲ್ಲಿ ವಿರಾಟ್ ಅವರು ಮತ್ತೆ ಬಂದು ಕ್ಷಮೆ ಕೇಳಿದರು. ಆಗ ಜಹೀರ್ ಖಾನ್ (Zaheer Khan) ಅವರು, ನನ್ನ ಕೆರಿಯರ್ ನಿಮ್ಮಿಂದ ಮುಗಿದು ಹೋಯಿತು..ಎಂದು ನೋವಿನಲ್ಲಿ ಹೇಳಿದರು.” ಎಂದು ಅಂದು ನಡೆದ ಘಟನೆಯ ಬಗ್ಗೆ ಮಾತನಾಡಿದ್ದಾರೆ ಇಶಾಂತ್ ಶರ್ಮ. ಅಂದು ನಡೆದ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್ ನಲ್ಲಿ ಟೀಮ್ ಇಂಡಿಯಾ ಬೌಲರ್ ಗಳು ನ್ಯೂಜಿಲೆಂಡ್ ತಂಡವನ್ನು 192 ರನ್ಸ್ ಗೆ ಕಟ್ಟಿ ಹಾಕಿದರು. ಇದನ್ನು ಓದಿ..Mobile Charging Tips: ನೀವು ನಿಜಕ್ಕೂ ರಾತ್ರಿ ಎಲ್ಲಾ ಚಾರ್ಜ್ ಮಾಡಿದರೆ ಏನಾಗುತ್ತದೆ? ಇದು ಎಷ್ಟು ಸರಿ ಎಷ್ಟು ತಪ್ಪು.

ಎರಡನೇ ಇನ್ನಿಂಗ್ಸ್ ನಲ್ಲಿ ಭಾರತ 438 ರನ್ಸ್ ಗಳಿಸಿತು. ನ್ಯೂಜಿಲೆಂಡ್ ಎರಡನೇ ಇನ್ನಿಂಗ್ಸ್ ನಲ್ಲಿ ಭಾರತದ ಬೌಲರ್ ಗಳು 94 ರನ್ಸ್ ಗೆ 5 ವಿಕೆಟ್ಸ್ ತೆಗೆದಿದ್ದರು. ಅಂದು ವಿರಾಟ್ ಕೊಹ್ಲಿ ಅವರು ಮೆಕಲಮ್ ಅವರು ಕೇವಲ 9 ರನ್ ಗಳಿಸಿದ್ದಾಗ ಅವರ ಕ್ಯಾಚ್ ಬಿಟ್ಟರು. ಕೊನೆಗೆ ಮೆಕಲಂ ಅವರು 300 ರನ್ಸ್ ಸಿಡಿಸಿ, ಐತಿಹಾಸಿಕ ಇನ್ನಿಂಗ್ಸ್ ಕಲೆಹಾಕಿದರು..ಈ ಪಂದ್ಯ ಡ್ರಾ ಆಯಿತು. ಇದನ್ನು ಓದಿ..HDFC vs SBI Home Loan: ಹೋಮ್ ಲೋನ್ ತೆಗೆದುಕೊಳ್ಳುವಾದ SBI ಅಥವಾ HDFC ಇವೆರಡರಲ್ಲಿ ಬೆಸ್ಟ್ ಯಾವುದು ಗೊತ್ತೇ? ಸಂಪೂರ್ಣ ಡೀಟೇಲ್ಸ್.

Comments are closed.