Neer Dose Karnataka
Take a fresh look at your lifestyle.

ನಟಿ ರಮ್ಯಾ ಹಂಚಿಕೊಂಡ ಪೋಸ್ಟ್ ನೋಡಿ ಅಭಿಮಾನಿಗಳಿಗೆ ಫುಲ್ ಕನ್ಫೂಷನ್, ಕಕ್ಕಾಬಿಕ್ಕಿ ಆಗಿದ್ದು ಯಾಕೆ ಗೊತ್ತೇ?? ಏನಿದೆ ಆ ಪೋಸ್ಟ್ ನಲ್ಲಿ ಗೊತ್ತಾ??

8

ನಮಸ್ಕಾರ ಸ್ನೇಹಿತರೇ ಸ್ಯಾಂಡಲ್ ವುಡ್ ಪದ್ಮಾವತಿ ಸಿನಿರಂಗದಿಂದ ದೂರ ಉಳಿದು ಕೆಲವು ವರ್ಷಗಳೇ ಕಳೆದಿವೆ. ಕರ್ನಾಟಕದಲ್ಲಿ ಬಹುದೊಡ್ಡ ಅಭಿಮಾನಿ ಬಳಗವನ್ನು ಹೊಂದಿದ್ದ ನಟಿ ರಮ್ಯಾ ಏಕಾಏಕಿ ಸಿನಿಮಾದಲ್ಲಿ ನಟಿಸುವುದನ್ನೇ ನಿಲ್ಲಿಸಿದ್ದು ಹಲವರಿಗೆ ಹಾರ್ಟ್ ಬ್ರೇಕಿಂಗ್ ವಿಷಯ. ಇನ್ನು ರಾಜಕೀಯಕ್ಕೆ ಇಳಿದು ಅಲ್ಲಲ್ಲಿ, ಆಗಾಗ ಅಷ್ಟೋ ಇಷ್ಟೋ ಕಾಣಿಸಿಕೊಳ್ಳುತ್ತಿದ್ದ ಇವರು ಇತ್ತೀಚಿಗೆ ಆ ಕ್ಷೇತ್ರದಿಂದಲೂ ದೂರವುಳಿದಂತೆ ಕಾಣಿಸುತ್ತಿದೆ. ಆದರೆ ಅಭಿಮಾನಿಗಳಿಗೆ ಬೇಸರವಾದ್ರೆ ಯಾವ ಕಲಾವಿದ ತಾನೇ ಸುಮ್ಮನಿರ್ತಾನೆ! ಹಾಗಾಗಿ ನಟಿ ರಮ್ಯಾ ಸಾಮಾಜಿಕ ಜಾಲತಾಣಗಳ ಮೂಲಕ ಜನರೊಂದಿಗೆ ನಿರಂತರ ಸಂಪರ್ಕದಲ್ಲಿರುವ ಪ್ರಯತ್ನ ಮಾಡುತ್ತಿದ್ದಾರೆ.

ಲಾಕ್ ಡೌನ್ ಸಮಯದಲ್ಲೂ ಹಲವು ಪೋಸ್ಟ್ ಗಳನ್ನು ತಮ್ಮ ಖಾಸಗಿ ಖಾತೆಯಲ್ಲಿ ಹಂಚಿಕೊಳ್ಳುವ ರಮ್ಯಾ ಇತ್ತಿಚಿಗೆ ಹಾಕಿದ ಒಂದು ಪೋಸ್ಟ್ ಮಾತ್ರ ಜನ ಅರ್ಥವಾಗದೇ ತಲೆ ಕೆಡಿಸಿಕೊಳ್ಳುವಂತೆ ಮಾಡಿದ್ದು ಸುಳ್ಳಲ್ಲ. ಹೌದು, ನಟಿ ರಮ್ಯಾ ನಮ್ಮ ಇನ್ಸ್ಟಾ ಖಾತೆಯಲ್ಲಿ ಕಪ್ಪು ಬಣ್ಣದ ಮೇಲೆ ಬಿಳೆಯ ರೇಳೆಗಳನ್ನು ಎಳೆದಂಥ ಚಿತ್ರವೊಂದನ್ನು ಪೋಸ್ಟ್ ಮಾಡಿದ್ದರು. ಇನ್ನು ಪೋಸ್ಟ್ ನ್ನು ಪೂರ್ತಿಯಾಗಿ ಓದದೆ ಬರಿಯ ಫೋಟೋ ನೋಡಿದವರು ಇದೇನಪ್ಪಾ ಇದು ಎಂದು ಮತ್ತೆ ಮತ್ತೆ ನೋಡಿದ್ದಾರೆ. ಆದರೆ ಈ ಬಗ್ಗೆ ವಿವರಣೆ ನೀಡಿದ್ದಾರೆ ರಮ್ಯಾ.

ಸೂರ್ಯ ನಮಸ್ಕಾರಕ್ಕೆ ಸಂಬಂಧಿಸಿದ ಚಿತ್ರ ಇದಾಗಿದ್ದು, ಈ ರೀತಿ ಬರೆದುಕೊಂಡಿದ್ದಾರೆ. “ಇದು ಏನೆಂದು ನೀವು ಆಶ್ಚರ್ಯ ಪಡುತ್ತಿದೀರ? ಇದು ಸೂರ್ಯ ನಮಸ್ಕಾರದ ದ್ರಷ್ಟಾಂತ, ಬೆಳಗ್ಗೆ ಸೂರ್ಯ ನಮಸ್ಕಾರ ಮಾಡುವಾಗ ಇದು ಜೀವನಕ್ಕೆ ಎಷ್ಟು ಹತ್ತಿರ ಎನಿಸಿತ್ತು, ಆಸನದಂತೆ ಜೀವನವು ಏರು ಇಳಿತದಿಂದ ಹಾಗು ಸ್ಥಿರತೆ ಯಿಂದ ಕೂಡಿದೆ. ನಾನು ಯೊಗಾಭ್ಯಾಸ ಪ್ರಾರಂಬಿಸಿ ಕೆಲವು ದಿನಗಳು ಕಳೆದಿವೆ, ಯೊಗದಿಂದ ನೀವೇನಾದರು ಜೀವನ ಪಾಠಗಳನ್ನು ಕಲಿತ್ತಿದಲ್ಲಿ ದಯಮಾಡಿ ಹಂಚಿಕೊಳ್ಳಿ”. ಇನ್ನು ಈ ಪೋಸ್ಟ್ ನೋಡಿದ ಹಲವರು ತಮ್ಮ ಯೋಗಾಸನದ ಅನುಭವಗಳನ್ನು ಹಂಚಿಕೊಂಡಿದ್ದಾರೆ.

Leave A Reply

Your email address will not be published.