Neer Dose Karnataka
Take a fresh look at your lifestyle.

ಕೋಟಿಗೊಬ್ಬ 3 ರಿಲೀಸ್ ರದ್ದಾಗುವುದರ ಹಿಂದೆ ಇರುವ ಕಾಣದ ಕೈ ಕುರಿತು ಕೊನೆಗೂ ಮಾತನಾಡಿದ ಸುದೀಪ್, ರಿಲೀಸ್ ಮಾಡಬಾರದು ಎಂದು ಕರೆ ಮಾಡಿದವರ ಕುರಿತು ಹೇಳಿದ್ದೇನು ಗೊತ್ತೇ??

3

ನಮಸ್ಕಾರ ಸ್ನೇಹಿತರೇ ನ್ನಡ ಚಿತ್ರರಂಗದಲ್ಲಿ ಕಾಣದ ರಾಜಕೀಯ ಇದೆ ಎಂಬುದು ಕೋಟಿಗೊಬ್ಬ3 ಚಿತ್ರದ ಪ್ರದರ್ಶನ ರದ್ದಾಗುವ ಸಂದರ್ಭದಲ್ಲಿ ಎಲ್ಲವೂ ಕೂಡ ಬೆಳಕಿಗೆ ಬಂದಿದೆ ಎಂದು ಹೇಳಬಹುದಾಗಿದೆ. ಹೌದು ಸ್ನೇಹಿತರೆ ಎಲ್ಲ ಅಂದುಕೊಂಡಂತೆ ಆಗಿದ್ದರೆ ಅಕ್ಟೋಬರ್ 14ಕ್ಕೆ ಕೋಟಿಗೊಬ್ಬ 3 ಚಿತ್ರ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಬೇಕಾಗಿತ್ತು. ಆದರೆ ಹಲವಾರು ಜನರು ಮಾಡಿರುವ ಮೋಸದಿಂದ ಆಗಿ ಚಿತ್ರ ಒಂದು ದಿನ ತಡವಾಗಿ ರಾಜ್ಯಾದ್ಯಂತ ಬಿಡುಗಡೆಯಾಗಿತ್ತು.

ಇನ್ನು ಈ ಸಂದರ್ಭದಲ್ಲಿ ಸೂರಪ್ಪಬಾಬು ಕೂಡ ಚಿತ್ರದ ಬಿಡುಗಡೆಗೆ ತಡವಾಗಲು ಕಾರಣ ವಾಗಿರುವ ವಿತರಕರ ವಿರುದ್ಧ ಕಾನೂನು ರೀತಿಯ ಹೋರಾಟವನ್ನು ಮಾಡುವುದಾಗಿ ಹೇಳಿಕೊಂಡಿದ್ದರು. ಯಾಕೆಂದರೆ ಚಿತ್ರ ಬಿಡುಗಡೆಯಾಗಲು ಒಂದು ದಿನ ತಡವಾಗಿದ್ದಕ್ಕೆ ಎಂಟರಿಂದ 10 ಕೋಟಿ ನಷ್ಟವನ್ನು ಅನುಭವಿಸಿದೆ ಎಂಬುದಾಗಿ ಅಭಿಪ್ರಾಯಪಟ್ಟಿದ್ದಾರೆ. ಇನ್ನು ಈ ಕುರಿತಂತೆ ಕಿಚ್ಚ ಸುದೀಪ್ ರವರು ಕೂಡ ಎಕ್ಸ್ಕ್ಲೂಸಿವ್ ಆಗಿ ಮಾತನಾಡಿದ್ದಾರೆ.

ಹೌದು ಸಂದರ್ಶನವೊಂದರಲ್ಲಿ ಕಿಚ್ಚ ಸುದೀಪ್ ರವರು ಮಾತನಾಡುವಾಗ ಕೆಲವೊಬ್ಬ ವ್ಯಕ್ತಿಗಳು ಭೂಮಿಕ ಚಿತ್ರಮಂದಿರಕ್ಕೆ ಕರೆಮಾಡಿ ಕೋಟಿಗೊಬ್ಬ3 ಚಿತ್ರವನ್ನು ಬಿಡುಗಡೆ ಮಾಡಬೇಡಿ ಎಂಬುದಾಗಿ ಹೇಳಿಕೊಂಡಿದ್ದಾರೆ ಎಂಬ ಮಾತನ್ನು ಕೂಡ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಅವರ ಆಡಿಯೋವನ್ನು ಕೂಡ ಬಿಡುಗಡೆ ಮಾಡುವ ಮೂಲಕ ಈ ಕುರಿತಂತೆ ಮಾತನಾಡಲಿದ್ದೇವೆ ಎಂಬ ಮಾತನ್ನು ಕೂಡ ಹೇಳಿದ್ದಾರೆ. ಇನ್ನು ಈ ಕುರಿತಂತೆ ಸೂರಪ್ಪ ಬಾಬು ರವರು ಕಾನೂನಾತ್ಮಕ ಹೋರಾಟವನ್ನು ಮಾಡುವುದಾದರೆ ಮಾಡಲಿ ಎಂಬುದಾಗಿ ಕೂಡ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡರು. ಒಟ್ಟಾರೆಯಾಗಿ ಕೋಟಿಗೊಬ್ಬ3 ಹಾಗೂ ಕಿಚ್ಚ ಸುದೀಪ್ ರವರನ್ನು ತಡೆಯುವ ಪ್ರಯತ್ನಗಳು ಗಾಂಧಿನಗರದಲ್ಲಿ ನಡೆದಿದ್ದು ಮುಂದಿನ ದಿನಗಳಲ್ಲಿ ವಿಷಯಗಳು ಒಂದೊಂದಾಗಿ ಹೊರ ಬರಲಿದೆ ಎಂಬ ಲಕ್ಷಣಗಳು ದಟ್ಟವಾಗಿ ಎದ್ದು ಕಾಣುತ್ತಿವೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ನಮ್ಮೊಂದಿಗೆ ಹಂಚಿಕೊಳ್ಳಿ.

Leave A Reply

Your email address will not be published.