Neer Dose Karnataka
Take a fresh look at your lifestyle.

ಶ್ರೀಲೀಲಾ ನನ್ನ ಮಗಳಲ್ಲ ಎಂದ ಈತ ನಿಜಕ್ಕೂ ಯಾರು ಗೊತ್ತಾ.?? ಶ್ರೀಲೀಲಾ ತಾಯಿಯ ಅಸಲಿ ಕತೆ ನಿಜಕ್ಕೂ ಮನಕಲಕುತ್ತದೆ. ಏನಾಗಿದೆ ನೋಡಿ.

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಕಡಿಮೆ ವಯಸ್ಸಿನಲ್ಲಿ ನಾಯಕಿಯಾಗಿ ಸಾಕಷ್ಟು ಜನಪ್ರಿಯತೆ ಪಡೆದುಕೊಂಡಿರುವ ನಟಿಯರು ಸಾಕಷ್ಟು ವಿರಳ ಎಂದೇ ಹೇಳಬಹುದಾಗಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಆ ಕೊರತೆಯನ್ನು ಪೂರೈಸುವುದಕ್ಕಾಗಿ ನಟಿಸಿಲ್ಲ ಶ್ರೀಲೀಲಾ ರವರು ಕನ್ನಡ ಚಿತ್ರರಂಗಕ್ಕೆ ಆಗಮಿಸಿದ್ದಾರೆ ಎಂದು ಹೇಳಬಹುದಾಗಿದೆ. ಅತಿ ಕಡಿಮೆ ವಯಸ್ಸಿನಲ್ಲಿ ಅತ್ಯಂತ ಹೆಚ್ಚು ಜನಪ್ರಿಯತೆಯನ್ನು ಪಡೆದುಕೊಂಡಿರುವ ನಟಿಯಾಗಿದ್ದಾರೆ ನಟಿ ಶ್ರೀಲೀಲಾ ರವರು‌. ಈಗಾಗಲೇ ಕನ್ನಡ ಚಿತ್ರರಂಗದಲ್ಲಿ ಉದಯೋನ್ಮುಖ ನಟಿಯಾಗಿ ಗುರುತಿಸಿಕೊಂಡಿರುವ ನಟಿ ಶ್ರೀಲೀಲಾ ರವರು ತೆಲುಗು ಭಾಷೆಗೂ ಕೂಡ ಪಾದಾರ್ಪಣೆ ಮಾಡಿದ್ದಾರೆ.

ಇನ್ನು ನಟಿ ಶ್ರೀಲೀಲಾ ರವರ ತಾಯಿ ಸ್ವರ್ಣಲತಾ ಎಂಬುದು ಬಹುತೇಕ ಕನ್ನಡಿಗರಿಗೆ ಗೊತ್ತಿದೆ. ಯಾಕೆಂದರೆ ಇದಕ್ಕೆ ಮುಖ್ಯ ಕಾರಣವಾಗಿರುವುದು ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಗಳು. ಹೌದು ರಾಧಿಕಾ ಪಂಡಿತ್ ರವರ ಇಬ್ಬರು ಮಕ್ಕಳನ್ನು ಕೂಡ ಹೆರಿಗೆ ಮಾಡಿಸಿರುವುದು ಇದೇ ಸ್ವರ್ಣಲತಾ ಎಂಬ ಡಾಕ್ಟರ್. ಸ್ವರ್ಣಲತಾ ಅವರು ವೈದ್ಯರಾಗಿದ್ದು ಇವರನ್ನು ರಾಕಿಂಗ್ ಸ್ಟಾರ್ ಯಶ್ ರವರು ತಮ್ಮ ಅಕ್ಕ ಎಂದೇ ಸಂಬೋಧಿಸುತ್ತಾರೆ. ಇನ್ನು ಹೀಗಾಗಿಯೇ ಎಪಿ ಅರ್ಜುನ್ ರವರ ನಿರ್ದೇಶನದ ಹಾಗೂ ನಿರ್ಮಾಣದ ಕಿಸ್ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ನಾಯಕನಾಗಿ ಪಾದಾರ್ಪಣೆ ಮಾಡುತ್ತಾರೆ ನಟಿ ಶ್ರೀಲೀಲಾ ರವರು.

ಇನ್ನು ನಟಿ ಶ್ರೀಲೀಲಾ ರವರು ಈಗಾಗಲೇ ಕಿಸ್ ಹಾಗೂ ರೋರಿಂಗ್ ಸ್ಟಾರ್ ಶ್ರೀ ಮುರಳಿ ನಟನೆಯ ಭರಾಟೆ ಚಿತ್ರದಲ್ಲಿ ನಟಿಸಿ ಅತಿ ಕಡಿಮೆ ಸಮಯದಲ್ಲಿ ಅತಿ ಹೆಚ್ಚು ಜನರ ಪ್ರೀತಿಯನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಇವರು ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ಕೂಡ ಲಕ್ಷಾಂತರ ಮಂದಿ ಫಾಲೋವರ್ಸ್ ಅನ್ನು ಹೊಂದಿದ್ದಾರೆ. ಇನ್ನು ಈಗ ಕನ್ನಡದಲ್ಲಿ ಧನ್ವೀರ್ ಅವರ ಜೊತೆಗೆ ನಟಿಸುತ್ತಿರುವ ಬೈಟು ಲವ್ ಚಿತ್ರ ಚಿತ್ರೀಕರಣದ ಹಂತದಲ್ಲಿದೆ. ಹೀಗಾಗಿ ತೆಲುಗಿನಲ್ಲಿ ಕೂಡ ಒಂದು ಚಿತ್ರದಲ್ಲಿ ನಟಿಸಿದ್ದು ಅದು ಯಶಸ್ವಿಯಾಗಿ ಇತ್ತೀಚೆಗೆ ಬಿಡುಗಡೆಯಾಗಿದೆ.

ಇನ್ನು ಈ ಸಂದರ್ಭದಲ್ಲಿ ನಟಿ ಶ್ರೀಲೀಲಾ ರವರ ತಂದೆ ಯಾರು ಎಂದು ಕೇಳಿದಾಗ ತೆಲುಗಿನ ಖ್ಯಾತ ಉದ್ಯಮಿಯೊಬ್ಬರ ಹೆಸರನ್ನು ಹೇಳಿದ್ದಾರೆ. ಇನ್ನು ಉದ್ಯಮಿ ಮಾಧ್ಯಮಗಳ ಮುಂದೆ ಬಂದು ನಿಂತು ಅವಳು ನನ್ನ ಮಗಳಲ್ಲ ನನ್ನ ಆಸ್ತಿ ಕೇಳಲು ಇಂತಹ ಹುನ್ನಾರ ಮಾಡುತ್ತಿದ್ದಾರೆ ಎಂಬುದಾಗಿ ಹೇಳಿದರು. ಇನ್ನು ಈ ಕುರಿತಂತೆ ಮುಂದೆ ಶ್ರೀಲೀಲಾ ರವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದರು. ಇನ್ನು ಇದಕ್ಕೆ ಸರಿಯಾದ ವಿವರಣೆ ನಾವು ನೀಡುತ್ತೇವೆ ಬನ್ನಿ ಸ್ನೇಹಿತರೆ. ಸ್ವರ್ಣಲತ ಹಾಗೂ ತೆಲುಗಿನ ಖ್ಯಾತ ಉದ್ಯಮಿಯಾಗಿರುವ ಸುಭಾಕರ್ ರಾವ್ 22 ವರ್ಷಗಳ ಹಿಂದೆ ಮದುವೆಯಾಗಿದ್ದರು.

ಆದರೆ ಎರಡು ವರ್ಷಗಳ ನಂತರ ಇವರಿಬ್ಬರೂ ಪರಸ್ಪರ ವೈಮನಸ್ಸಿನಿಂದ ಆಗಿ ಬೇರೆ ಆಗುವ ನಿರ್ಧಾರವನ್ನು ತೆಗೆದುಕೊಂಡು ಕೋರ್ಟಿನಲ್ಲಿ ವಿವಾಹ ವಿಚ್ಛೇದನಕ್ಕೆ ಅರ್ಜಿಯನ್ನು ನೀಡುತ್ತಾರೆ. ಇನ್ನು ಈ ಸಮಯದಲ್ಲಿ ಸ್ವರ್ಣಲತಾ ರವರು ಅಮೆರಿಕಕ್ಕೆ ತೆರಳುತ್ತಾರೆ ಅಲ್ಲಿಯೇ ಶ್ರೀಲೀಲಾ ರವರ ಜನ್ಮವಾಗುತ್ತದೆ. ಹೀಗಾಗಿಯೇ ಸುಭಾಕರ್ ರಾವ್ ಶ್ರೀಲೀಲ ನನ್ನಿಂದ ದೂರವಾದ ಮೇಲೆ ಹುಟ್ಟಿದವಳು ಹೀಗಾಗಿ ಅವಳು ನನ್ನ ಮಗಳಲ್ಲ ಈಗ ನನ್ನನ್ನು ತಂದೆಯೆಂದು ನನ್ನ ಆಸ್ತಿಯನ್ನು ಪಡೆಯುದಕ್ಕಾಗಿ ನಾಟಕ ಮಾಡುತ್ತಿದ್ದಾಳೆ ಎಂಬುದಾಗಿ ಹೇಳಿಕೊಂಡಿದ್ದರು.

ಇದಕ್ಕೆ ಪ್ರತಿಕ್ರಿಯಿಸಿರುವ ನಟಿ ಶ್ರೀಲೀಲಾ ರವರ ತಾಯಿಯಾಗಿರುವ ಸ್ವರ್ಣಲತಾ ನಮಗೆ ಯಾರ ಆಸ್ತಿಯು ಬೇಕಾಗಿಲ್ಲ ಎಂಬುದಾಗಿ ಹೇಳಿದ್ದಾರೆ. ಇಷ್ಟು ಮಾತ್ರವಲ್ಲದೆ ಈ ಸಮಸ್ತೆ ಕೋರ್ಟಿನಲ್ಲಿ 20ವರ್ಷಗಳಿಂದ ಇದೆ ನಾವು ಅಲ್ಲಿಯೇ ಬಗೆಹರಿಸಿಕೊಳ್ಳುತ್ತೇವೆ ಎಂಬುದಾಗಿ ಕೂಡ ಹೇಳಿಕೊಂಡಿದ್ದಾರೆ. ತಂದೆ-ತಾಯಿಯರು ಮಾಡಿಕೊಂಡಿರುವ ಈ ಸಮಸ್ಯೆಗೆ ನಟಿ ಶ್ರೀಲೀಲಾ ರವರು ವ್ಯಥೆ ಪಡುತ್ತಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ನಿಮ್ಮ ಅಭಿಪ್ರಾಯವಾಗಿದೆ ಎಂಬುದನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.