Neer Dose Karnataka
Take a fresh look at your lifestyle.

ಒಮ್ಮೆ ಅನ್ನದಾಸೋಹದ ಸಂದರ್ಭದಲ್ಲಿ ಸಾಂಬಾರಿಗೆ ಬಿದ್ದ ನಾಗರಹಾವು, ಸಿದ್ದಗಂಗಾ ಶ್ರೀಗಳು ಮಾಡಿದ್ದೇನು ಗೊತ್ತಾ??

ನಮಸ್ಕಾರ ಸ್ನೇಹಿತರೇ ನಮ್ಮ ಕರ್ನಾಟಕ ರಾಜ್ಯದಲ್ಲಿ ನಾವು ಅದೆಷ್ಟು ಮಂದಿ ಮಹಾತ್ಮರನ್ನು ನೋಡಿದ್ದೇವೆ ಹಾಗೂ ಅವರ ಇತಿಹಾಸ ಹಾಗೂ ಕಥೆಗಳನ್ನು ಕೇಳಿ ತಿಳಿದಿದ್ದೇವೆ. ಅದರಲ್ಲಿ ಇಂದು ನಾವು ಹೇಳಹೊರಟಿರುವ ವ್ಯಕ್ತಿಗೆ ಕರ್ನಾಟಕ ರಾಜ್ಯದಾದ್ಯಂತ ಪವಿತ್ರವಾದ ಸ್ಥಾನವಿದೆ. ಹೌದು ಸ್ನೇಹಿತರೆ ನಾವು ಮಾತನಾಡಲು ಹೊರಟಿರುವುದು ತುಮಕೂರಿನ ಪವಿತ್ರ ಕ್ಷೇತ್ರವಾಗಿ ರುವಂತಹ ಸಿದ್ದಗಂಗಾ ಮಠದ ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಕುರಿತಂತೆ ಮಾತನಾಡಲು ಹೊರಟಿದ್ದೇವೆ.

ಸಿದ್ದಗಂಗಾ ಶ್ರೀಗಳ ಕುರಿತಂತೆ ಎಷ್ಟೇ ಹೇಳಿದರೂ ಅದು ಕಡಿಮೆಯೇ ಎಂದು ಹೇಳಬಹುದಾಗಿದೆ. ಇಂದು ಅವರು ಶಿವೈಕ್ಯರಾಗಿರಬಹುದು ಆದರೆ ಅವರು ಮಾಡಿದಂತಹ ಜನಸೇವೆ ಗಳು ಇಂದಿಗೂ ಕೂಡ ಚಿರಸ್ಮರಣೀಯವಾಗಿದೆ. ಇನ್ನು ಸಿದ್ದಗಂಗಾ ಕ್ಷೇತ್ರಕ್ಕೆ ಹಲವಾರು ಶತಮಾನಗಳ ಇತಿಹಾಸವಿದೆ. ಇನ್ನು ಸಿದ್ದಗಂಗಾಮಠದಲ್ಲಿ ಅತ್ಯಂತ ಹೆಚ್ಚು ಪ್ರಸಿದ್ಧವಾಗಿರುವ ಇಬ್ಬರು ಮಹಾ ಪುರುಷರೆಂದರೆ ಮೊದಲನೆಯವರು ಶ್ರೀ ಶ್ರೀ ಉದಯ ಶಿವಯೋಗಿಗಳು ಹಾಗೂ ಎರಡನೆಯವರಾಗಿ ಶ್ರೀ ಶ್ರೀ ಶ್ರೀ ಶಿವಕುಮಾರ ಸ್ವಾಮಿಗಳು.

ಇವರಿಬ್ಬರ ಮುಖ್ಯ ಸ್ಥಿತಿಯಲ್ಲಿ ಸಿದ್ದಗಂಗಾಮಠದಲ್ಲಿ ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾದಾನ ಅನ್ನದಾನ ಹಾಗೂ ಅದೆಷ್ಟೋ ಬಡ ಜೀವಗಳಿಗೆ ಆಸರೆ ಕೂಡ ಸಿಕ್ಕಿದೆ. ಶಿವಕುಮಾರಸ್ವಾಮಿಗಳು ಭಾರತೀಯ ಹಿಂದೂ ಸಂಸ್ಕೃತಿಯ ಆಧ್ಯಾತ್ಮಕ ನಾಯಕರಲ್ಲಿ ಅಗ್ರಗಣ್ಯ ರಾಗಿ ಕಾಣಿಸಿಕೊಳ್ಳುತ್ತಾರೆ. ಇವರ ಆಧ್ಯಾತ್ಮಿಕ ಚಿಂತನೆಗಳಿಂದ ಆಗಿಯೇ ಇವರನ್ನು ಭಾರತ ದೇಶದಾದ್ಯಂತ ನಡೆದಾಡುವ ದೇವರು ಎಂದೇ ಕರೆಯುತ್ತಾರೆ. ಇನ್ನು ಇವರ ಸಾಮಾಜಿಕ ಸೇವೆಗಳನ್ನು ಪರಿಗಣಿಸಿದ ಭಾರತ ಸರ್ಕಾರ 2015 ರಲ್ಲಿ ಪದ್ಮಭೂಷಣ ಪ್ರಶಸ್ತಿಯನ್ನು ಕೂಡ ನೀಡಿ ಗೌರವಿಸಿದೆ. ತ್ರಿವಿಧ ಅಂದರೆ ಅನ್ನ ಅಕ್ಷರ ಹಾಗೂ ಜ್ಞಾನದ ದಾಸೋಹಿ. ಇನ್ನು ಜೀವನದಾದ್ಯಂತ ಕೂಡ ಶಿವಕುಮಾರ ಯೋಗಿಗಳು ಬಸವಣ್ಣನವರ ಕಾಯಕವೇ ಕೈಲಾಸ ಎಂಬ ತತ್ವವನ್ನು ನಾಡಿನಾದ್ಯಂತ ಸಾರಿದ್ದಾರೆ.

ಶಿವಕುಮಾರ ಯೋಗಿಗಳು 1908 ರಲ್ಲಿ ತಮ್ಮ ತಂದೆ-ತಾಯಿಯರಿಗೆ 13ನೇ ಮಗನಾಗಿ ಹುಟ್ಟುತ್ತಾರೆ. ಇನ್ನು ಇವರು ತುಮಕೂರಿನಲ್ಲಿ ತಮ್ಮ ಪ್ರೌಢಶಿಕ್ಷಣವನ್ನು ಪೂರೈಸುತ್ತಾರೆ. ಅಂದಿನ ಕಾಲದಲ್ಲಿ ಸಿದ್ದಗಂಗಾ ಮಠಾಧೀಶರಾಗಿದ್ದ ಉದ್ದಾನ ಶ್ರೀಗಳ ನಂತರ ಉತ್ತರಾಧಿಕಾರಿಯಾದ ಬೇಕಿದ್ದವರು ಶಿವೈಕ್ಯ ಆಗಿದ್ದರಿಂದ ಆ ಕಾರ್ಯಕ್ರಮದಲ್ಲಿ ಬಂದಂತಹ ಶಿವಣ್ಣನವರನ್ನು ನೋಡಿ ತಮ್ಮ ಮುಂದಿನ ಉತ್ತರಾಧಿಕಾರಿ ಇವರ ಎಂಬುದಾಗಿ ಘೋಷಿಸುತ್ತಾರೆ. ಇನ್ನು ಉದ್ದಾನ ಶಿವಯೋಗಿಗಳು ಶಿವೈಕ್ಯರಾದ ಮೇಲೆ ಮಠದ ಎಲ್ಲಾ ಸಂಪೂರ್ಣ ಜವಾಬ್ದಾರಿಯನ್ನು ಶಿವಯೋಗಿಗಳಿಗೆ ಹಸ್ತಾಂತರಿಸಲಾಗುತ್ತಿದೆ.

ಇಲ್ಲಿ ದೈನಂದಿಕ ವಾಗಿ 10 ಸಾವಿರ ವಿದ್ಯಾರ್ಥಿಗಳಿಗೆ ಶಿಕ್ಷಣ ಊಟ ಹಾಗೂ ಜ್ಞಾನವನ್ನು ನೀಡಲಾಗುತ್ತದೆ. ಈಗ ನಾವು ಇಂದು ನಾವು ಹೇಳುತ್ತಿರುವ ಘಟನೆ ಕುರಿತಂತೆ ಮಾತನಾಡಲು ಹೊರಟಿದ್ದೇವೆ. ಅದು 2010 ರ ಸಮಯ. ಅಂದು ಮಕ್ಕಳಿಗಾಗಿ ಅಡುಗೆಮನೆಯಲ್ಲಿ ಅಡುಗೆ ಸಿದ್ಧವಾಗುತ್ತಿತ್ತು. ಅದೇ ಸಂದರ್ಭದಲ್ಲಿ ಒಂದು ಅವಗಡ ನಡೆದುಬಿಡುತ್ತದೆ. ಬೇಯುತ್ತಿದ್ದ ಸಾಂಬಾರು ಪಾತ್ರೆಗೆ ಎಲ್ಲಿಂದಲೋ ಬಂದ ನಾಗರಹಾವು ಬಿದ್ದು ಬಿಡುತ್ತದೆ. ಇದನ್ನು ಅಡುಗೆಭಟ್ಟರು ಶ್ರೀಗಳಿಗೆ ಹೇಳುತ್ತಾರೆ.

ಒಂದು ಕಡೆ ಮಕ್ಕಳು ಹಸಿವಿನಿಂದ ಊಟದ ನಿರೀಕ್ಷೆಯಲ್ಲಿದ್ದಾರೆ ಇನ್ನು ಇದನ್ನು ಬದಲಾಯಿಸಿ ಮತ್ತೆ ಪುನಹ ಅಡುಗೆ ಮಾಡುವುದಾದರೆ ಮತ್ತೆ ಒಂದು ಗಂಟೆ ಸಮಯ ಆಗುತ್ತದೆ. ಇದಕ್ಕಾಗಿ ಅವರನ್ನು ಕಾಯಿಸುವುದು ಬೇಡ ಎಂದು ಶ್ರೀಗಳು ತಮ್ಮ ಇಷ್ಟಲಿಂಗವನ್ನು ಕೈಯಲ್ಲಿ ಧರಿಸಿ ಹಾವನ್ನು ಎತ್ತಿ ಹೊರಗೆ ಹಾಕುತ್ತಾರೆ. ಇನ್ನು ಊಟವನ್ನು ಕೂಡ ತಾವೇ ಮೊದಲೇ ತಿಂದು ರುಚಿ ನೋಡುತ್ತಾರೆ. ಅನ್ನಪೂರ್ಣೇಶ್ವರಿಯ ಚಮತ್ಕಾರ ಎನ್ನುವಂತೆ ಶ್ರೀಗಳಿಗೆ ಏನು ಕೂಡ ಆಗುವುದಿಲ್ಲ ಹಾಗೂ ಅದನ್ನು ಮಕ್ಕಳಿಗೆ ಬಡಿಸಲು ಹೇಳುತ್ತಾರೆ.

ಚಮತ್ಕಾರ ವೆಂಬಂತೆ ಊಟವನ್ನು ಮಾಡಿದ ಯಾವುದೇ ಮಕ್ಕಳಿಗೆ ಆಗಲಿ ಅಥವಾ ಯಾವುದೇ ವ್ಯಕ್ತಿಗಾಗಲೀ ಏನು ಕೂಡ ಆಗಿರುವುದಿಲ್ಲ. ಶ್ರೀಗಳ ಕೈಯ ಗುಣದಿಂದಾಗಿ ಹಾವಿನ ವಿ’ಷವು ಕೂಡ ಅಮೃತ ವಾಗಿರುತ್ತದೆ. ಹೀಗೆ ಇದೇ ರೀತಿಯ ಹಲವಾರು ಚಮತ್ಕಾರಗಳಿಂದ ಆಗಿ ಶಿವಕುಮಾರ ಯೋಗಿಗಳು ಭಕ್ತ ಸಮೂಹದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಶತಾಯುಷಿ ಗಳಾಗಿ ನಮ್ಮ ಕರ್ನಾಟಕದಲ್ಲಿ ಹಲವಾರು ಜನಸೇವೆ ಗಳಿಂದಾಗಿ ಎಲ್ಲರ ಮನಗೆದ್ದ ಅಂತಹ ದೈವ ಸಂಭೂತ ವ್ಯಕ್ತಿತ್ವ ಎಂದರೆ ತಪ್ಪಾಗಲಾರದು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ಹಂಚಿಕೊಳ್ಳಿ.

Comments are closed.