Neer Dose Karnataka
Take a fresh look at your lifestyle.

Gruhalakshami Scheme: ಮಹಿಳೆಯರಿಗೆ ಸಿಹಿ ಸುದ್ದಿ- ಈ ಬಾರಿ 4000 ಹಣ ಅಕೌಂಟ್ ಗೆ. ನೀವು ಪಡೆಯಬೇಕು ಎಂದರೆ ಏನು ಮಾಡಬೇಕು ಗೊತ್ತೇ??

Gruhalakshami Scheme: ನಮಸ್ಕಾರ ಸ್ನೇಹಿತರೆ ಈಗಾಗಲೇ ಕಾಂಗ್ರೆಸ್ ಸರ್ಕಾರದ ನೇತೃತ್ವದಲ್ಲಿ ರಾಜ್ಯದಲ್ಲಿ ಜಾರಿಯಾಗಿರುವಂತಹ ಐದು ಪ್ರಮುಖ ಯೋಜನೆಗಳಲ್ಲಿ ನಾವು ವಿಶೇಷವಾಗಿ ಗೃಹಲಕ್ಷ್ಮಿ(Gruhalakshami Scheme) ಯೋಜನೆಯ ಬಗ್ಗೆ ಮಾತನಾಡಲು ಹೊರಟಿದ್ದೇವೆ. ಯೋಜನೆ ಆಗಸ್ಟ್30 ರಿಂದ ಪ್ರಾರಂಭವಾಗಿದ್ದು ಈಗಾಗಲೇ ಮೊದಲ ಕಂತು ರಾಜ್ಯದ 80 ಲಕ್ಷಕ್ಕೂ ಅಧಿಕ ಮಹಿಳೆಯರಿಗೆ ಸಿಕ್ಕಿದೆ ಎನ್ನುವುದಾಗಿ ಅಂಕಿ ಅಂಶಗಳ ಪ್ರಕಾರ ತಿಳಿದು ಬಂದಿದೆ. ಇದು ಸಿಹಿ ಸುದ್ದಿ ಆದರೆ ಇದಕ್ಕಿಂತಲೂ ಕಹಿ ಸುದ್ದಿ ಏನೆಂದರೆ ಇನ್ನೂ ಸಾಕಷ್ಟು ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಮಾಸಿಕ ಹಣ ಆಗಿರುವಂತಹ 2000 ರೂಪಾಯಿ ಖಾತೆಗೆ ಜಮಾ ಆಗಿಲ್ಲ ಅನ್ನೋದು. ಬನ್ನಿ ಹಾಗಿದ್ದರೆ ಇದರ ಬಗ್ಗೆ ಇನ್ನಷ್ಟು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ.

ವಿಶ್ವದ ದಿಗ್ಗಜ ನಾಯಕರ ಕಾರಿನ ಬಣ್ಣ ಕಪ್ಪು ಇರುತ್ತದೆ- ಇದರ ಹಿಂದಿರುವ ಕಾರಣವೇನು ಗೊತ್ತೇ? ತಿಳಿಯಿರಿ. . –>Car Color Facts

Gruhalakshami Scheme latest updates and below is the complete details of it.

80 ಲಕ್ಷಕ್ಕೂ ಅಧಿಕ ಮಹಿಳೆಯರು ಮೊದಲ ಕಂತಿನ 2000 ರೂಪಾಯಿ ಹಣವನ್ನು ಗೃಹ ಲಕ್ಷ್ಮಿ ಯೋಜನೆ ಅಡಿಯಲ್ಲಿ ಪಡೆದುಕೊಂಡಿದ್ದಾರೆ ಹಾಗೂ ಅವರು ಎರಡನೇ ಕಂತಿನ ಹಣಕ್ಕಾಗಿ ಕಾಯುತ್ತಿದ್ದಾರೆ ಆದರೆ, ಲಕ್ಷಾಂತರ ಮಹಿಳೆಯರು ಮೊದಲಿನ ಕಂತಿನ ಹಣವನ್ನು ಇನ್ನೂ ಪಡೆದಿಲ್ಲ. ಇದರ ಬಗ್ಗೆ ರಾಜ್ಯ ಮಕ್ಕಳ ಹಾಗೂ ಮಹಿಳಾ ಕಲ್ಯಾಣ ಇಲಾಖೆ ಸಚಿವರಾಗಿರುವಂತಹ ಲಕ್ಷ್ಮಿ ಹೆಬ್ಬಾಳ್ಕರ್( Lakshmi hebbalkar) ಅವರು ಅಪ್ಡೇಟ್ ನೀಡಿದ್ದು ಬನ್ನಿ ಅವರು ಈ ವಿಚಾರದ ಬಗ್ಗೆ ಯಾವ ರೀತಿಯ ಮಾಹಿತಿಯನ್ನು ನೀಡಿದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ. ಅವರು ನೀಡಿರುವಂತಹ ಮಾಹಿತಿಯ ಪ್ರಕಾರ ಕಳೆದ ತಿಂಗಳಿನಲ್ಲಿ ಯಾರಿಗೆ ಎರಡು ಸಾವಿರ ಸಿಕ್ಕಿಲ್ಲ ಅವರಿಗೆ ಈ ತಿಂಗಳು ಅಂದರೆ ಅಕ್ಟೋಬರ್ ತಿಂಗಳಿನಲ್ಲಿ 2,000 ಸೇರಿಸಿ ಒಟ್ಟಾರೆಯಾಗಿ ನಾಲ್ಕು ಸಾವಿರ ರೂಪಾಯಿ ಹಣವನ್ನು ಅವರ ಖಾತೆಗೆ ನೇರವಾಗಿ ವರ್ಗಾವಣೆ ಮಾಡುವಂತಹ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಹೇಳಿದ್ದಾರೆ. ಎರಡನೇ ಕಂತಿನ ಹಣ ವರ್ಗಾವಣೆ ಪ್ರಕ್ರಿಯೆಯನ್ನು ಅಕ್ಟೋಬರ್ ಮೂರರಿಂದ ಪ್ರಾರಂಭಿಸಲಾಗಿದೆ ಎನ್ನುವಂತಹ ಮಾಹಿತಿಯನ್ನು ಕೂಡ ಹೇಳಲಾಗಿದೆ.

ಇನ್ನು ಗೃಹಲಕ್ಷ್ಮಿ ಯೋಜನೆಯ 2000 ಹಣವನ್ನು ಯಾವೆಲ್ಲ ಕಾರಣಕ್ಕಾಗಿ ಖಾತೆಗೆ ವರ್ಗಾವಣೆ ಮಾಡಿಲ್ಲ ಎನ್ನುವಂತಹ ಕಾರಣಗಳನ್ನು ಕೂಡ ಇಲಾಖೆಯಿಂದ ನೀಡಲಾಗಿದ್ದು ಬನ್ನಿ ಅವುಗಳ ಬಗ್ಗೆ ಕೂಡ ಮಾಹಿತಿ ಪಡೆದುಕೊಳ್ಳೋಣ. ಬ್ಯಾಂಕ್ ಖಾತೆಯ ಜೊತೆಗೆ ಆಧಾರ್ ಕಾರ್ಡ್ ಲಿಂಕ್( bank account link with Aadhar card) ಮಾಡದೆ ಹೋದಲ್ಲಿ, ರೇಷನ್ ಕಾರ್ಡ್ ಜೊತೆಗೆ ಆಧಾರ್ ಕಾರ್ಡ್ ಲಿಂಕ್ ಇಲ್ಲದೆ ಹೋದಲ್ಲಿ, ಬ್ಯಾಂಕ್ ಖಾತೆ ಹಾಗೂ ರೇಷನ್ ಕಾರ್ಡ್ ನಲ್ಲಿ ಮಹಿಳಾ ಒಡತಿಯ ಹೆಸರಿನ ಸ್ಪೆಲ್ಲಿಂಗ್ ಮಿಸ್ಟೇಕ್ ಇದ್ದರೆ, ಒಂದೇ ಕುಟುಂಬದ ಇಬ್ಬರು ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿದರೆ, ರೇಷನ್ ಕಾರ್ಡ್ ನಲ್ಲಿ ಕುಟುಂಬದ ಯಜಮಾನಿ ಮಹಿಳೆ ಆಗಿರಲೇಬೇಕು ಹಾಗೂ ಆಗಿರದೆ ಇದ್ದಲ್ಲಿ ಕೂಡ ಹಣ ವರ್ಗಾವಣೆ ಆಗಿರದೆ ಇರಬಹುದು ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಸರ್ವರ್ ಸಮಸ್ಯೆಯಿಂದ ಕೂಡ ಈ ರೀತಿಯ ಹಣ ವರ್ಗಾವಣೆ ಆಗದೆ ಇರುವಂತಹ ಕೆಲಸಗಳು ಕೂಡ ನಡೆಯಬಹುದು.

ನಿಮ್ಮ ಕೈಯಲ್ಲಿ ಒಂದು ರೂಪಾಯಿ ಇಲ್ಲ ಅಂದರೂ ಈ ಬಿಸಿನೆಸ್ ಗಳನ್ನೂ ಆರಂಭಿಸಿ ಲಕ್ಷ ಲಕ್ಷ ದುಡಿಯಬಹುದು.. . –>Business Ideas

ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಲು ಕೂಡ ಸರ್ಕಾರ ನಿಮಗೆಲ್ಲರಿಗೂ ಗೊತ್ತಿರಬಹುದು ಯಾವುದೇ ದಿನಾಂಕದ ಕೊನೆಯ ಅವಧಿ ಎನ್ನುವುದಾಗಿ ನಿಗದಿಪಡಿಸಿಲ್ಲ ಹೀಗಾಗಿ ಯಾರಾದರೂ ಒಂದು ವೇಳೆ ಗ್ರಹಲಕ್ಷ್ಮಿ ಯೋಜನೆಗೆ ಇನ್ನೂ ಕೂಡ ಅರ್ಜಿ ಹಾಕಿಲ್ಲ ಅಂದ್ರೆ ಅವರಿಗೆ ಅರ್ಜಿ ಸಲ್ಲಿಸುವಂತಹ ಸಂಪೂರ್ಣ ಸ್ವಾತಂತ್ರ್ಯವನ್ನು ಸರ್ಕಾರ ನೀಡಿದೆ. ಸರ್ಕಾರದ ಮೂಲಗಳ ಮಾಹಿತಿಯ ಪ್ರಕಾರ ತಿಳಿದು ಬಂದಿರುವ ಸುದ್ದಿಯಲ್ಲಿ ಅಕ್ಟೋಬರ್ ಆರರಿಂದ ಮತ್ತೆ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸುವಂತಹ ಪ್ರಕ್ರಿಯೆ ಅಧಿಕೃತವಾಗಿ ಪ್ರಾರಂಭವಾಗಲಿದೆ. ಹೀಗಾಗಿ ಒಂದು ವೇಳೆ ನಿಮ್ಮ ಮನೆಯಲ್ಲಿ ಅಥವಾ ಮನೆಯ ಯಜಮಾನ ಇನ್ನು ಕೂಡ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಿಲ್ಲ ಎಂದರೆ ಈ ಕೂಡಲೇ ಸಲ್ಲಿಸಲು ಹೇಳಿ.

ಇನ್ನು ಗೃಹಲಕ್ಷ್ಮಿ ಯೋಜನೆಗೆ(gruhalakshmi scheme) ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಕೂಡ ಕೆಲವೊಂದು ತಪ್ಪುಗಳನ್ನು ಮಾಡಬಾರದು. ನಿಮ್ಮ ಬ್ಯಾಂಕ್ ಅಕೌಂಟ್ ಹಾಗೂ ರೇಷನ್ ಕಾರ್ಡ್ ಎರಡು ಕೂಡ ಆಧಾರ್ ಕಾರ್ಡ್ ಗೆ ಲಿಂಕ್ ಕಡ್ಡಾಯವಾಗಿ ಆಗಿರಬೇಕು. ಒಂದೇ ಕುಟುಂಬದ ಒಬ್ಬ ಮಹಿಳೆ ಮಾತ್ರ ಗೃಹಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಸಬೇಕು ಹಾಗೂ ರೇಷನ್ ಕಾರ್ಡ್ ನಲ್ಲಿ ಕೂಡ ಅವರೇ ಮನೆಯ ಯಜಮಾನಿಯಾಗಿರಬೇಕು. ರೇಷನ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯಲ್ಲಿ ಮನೆಯ ಯಜಮಾನಿಯ ಸ್ಪೆಲ್ಲಿಂಗ್ ಮಿಸ್ಟೇಕ್ ಆಗದಂತೆ ನಿಗಾ ವಹಿಸಬೇಕು. ಇವಿಷ್ಟನ್ನು ಅರ್ಜಿ ಸಲ್ಲಿಸುವ ಸಂದರ್ಭದಲ್ಲಿ ಸರಿಯಾಗಿ ಗಮನಿಸಿ ಹಾಗೂ ಪ್ರತಿ ತಿಂಗಳು ಗೃಹಲಕ್ಷ್ಮಿ ಯೋಜನೆ ಅಡಿಯಲ್ಲಿ 2000 ಮಾಸಿಕ ಸಹಾಯಧನವನ್ನು ಪಡೆದುಕೊಳ್ಳಬಹುದು.

Comments are closed.