Neer Dose Karnataka
Take a fresh look at your lifestyle.

Car Color Facts: ವಿಶ್ವದ ದಿಗ್ಗಜ ನಾಯಕರ ಕಾರಿನ ಬಣ್ಣ ಕಪ್ಪು ಇರುತ್ತದೆ- ಇದರ ಹಿಂದಿರುವ ಕಾರಣವೇನು ಗೊತ್ತೇ? ತಿಳಿಯಿರಿ.

Car Color Facts: ನಮಸ್ಕಾರ ಸ್ನೇಹಿತರೇ ಪ್ರಪಂಚದಲ್ಲಿ ನಡೆಯುವಂತಹ ಸಾಕಷ್ಟು ವಿಚಾರಗಳ ಬಗ್ಗೆ ನಮಗೆ ಆಗಾಗ ತಲೆಯಲ್ಲಿ ಯೋಚನೆಗಳು ಮೂಡುತ್ತವೆ. ಅವುಗಳಲ್ಲಿ ಪ್ರಮುಖವಾಗಿ ನಾವು ಇವತ್ತಿನ ಲೇಖನಿಯಲ್ಲಿ ಮಾತನಾಡಲು ಹೊರಟಿರುವುದು ಪ್ರಪಂಚದ ಜಾಗತಿಕ ಕೆಲವೊಂದು ಪ್ರಮುಖ ಗಣ್ಯ ವ್ಯಕ್ತಿಗಳು ಅಂದರೆ ದೇಶದ ಪ್ರಧಾನ ಮಂತ್ರಿಗಳು(Prime Ministers) ಅಥವಾ ದೇಶದ ಅಧ್ಯಕ್ಷರ ಕಾರಿನ ಗಾಜಿನ ಮೇಲೆ ಕಪ್ಪು ಬಣ್ಣ ಯಾಕೆ ಇರುತ್ತದೆ ಎನ್ನುವುದಾಗಿ ಸಾಕಷ್ಟು ಬಾರಿ ನೀವು ಯೋಚನೆ ಮಾಡಿರಬಹುದು. ಹೆಚ್ಚಾಗಿ ಯೋಚನೆ ಮಾಡುವುದು ಬೇಡ ಬನ್ನಿ ಅದಕ್ಕೆ ಉತ್ತರವನ್ನೇ ತಿಳಿದುಕೊಳ್ಳೋಣ.

ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ. Maruti Ertiga

Car Color facts: Why big leader car always black – Interesting facts explained in Kannada

ಉದಾಹರಣೆಗೆ ಅಮೆರಿಕಾದ ರಹಸ್ಯ ಪಡೆಗಳಿಂದ(America’s Secret Agency) ಕೂಡ ಈ ಕಪ್ಪು ವಾಹನಗಳನ್ನು ಬಳಸಲು ಪ್ರಾರಂಭವಾಗಿದ್ದು ಇದು ಸಾಂಪ್ರದಾಯಿಕವಾಗಿ ಬಹುತೇಕ ಎಲ್ಲಾ ರಾಷ್ಟ್ರಗಳಲ್ಲಿ ಕೂಡ ಮುಂದುವರೆದಿದೆ ಎಂದು ಹೇಳಬಹುದು. ಕೇವಲ ಪ್ರಧಾನ ಮಂತ್ರಿಗಳು ಮಾತ್ರವಲ್ಲದೆ ರಾಷ್ಟ್ರಪತಿ ಸೇರಿದಂತೆ ದೇಶದ ಪ್ರಮುಖ ನಾಯಕರ ಕಾರುಗಳು ಕೂಡ ಕಪ್ಪು ಬಣ್ಣದಿಂದ ಆವೃತವಾಗಿರುತ್ತವೆ ಎನ್ನುವುದನ್ನು ನೀವು ಸಾಕಷ್ಟು ಬಾರಿ ಗಮನಿಸಿರಬಹುದಾಗಿದೆ. ಕಾರಣವಿಲ್ಲದ ಇಂತಹ ಕೆಲಸವನ್ನು ಯಾರೂ ಕೂಡ ಅದರಲ್ಲೂ ರಾಷ್ಟ್ರೀಯ ಮಟ್ಟದಲ್ಲಿ ಕಾಣಿಸಿಕೊಳ್ಳುವಂತಹ ನಾಯಕರುಗಳು ಮಾಡಲು ಹೋಗುವುದಿಲ್ಲ ಎಂಬುದನ್ನು ಕೂಡ ನೀವು ಅರ್ಥ ಮಾಡಿಕೊಳ್ಳಬಹುದಾಗಿದೆ.

Car Color facts: Why big leader car always black - Interesting facts explained in Kannada
Car Color facts: Why big leader car always black – Interesting facts explained in Kannada

ಸಾಮಾನ್ಯವಾಗಿ ರಾಜ ತಾಂತ್ರಿಕ(Political) ಭಾಷೆಯಲ್ಲಿ ಕಪ್ಪು ಬಣ್ಣವನ್ನು ಅಧಿಕಾರದ ಸಂಕೇತ ಎಂಬುದಾಗಿ ಪರಿಗಣಿಸಲಾಗುತ್ತದೆ ಎಂಬುದನ್ನು ಕೂಡ ಮೊದಲಿಗೆ ನೀವು ಅರ್ಥ ಮಾಡಿಕೊಳ್ಳಬೇಕಾಗಿರುತ್ತದೆ. ದೇಶದಲ್ಲಿ ಅತ್ಯಂತ ಸ್ಥಾನಮಾನ ಹೊಂದಿರುವಂತಹ ವ್ಯಕ್ತಿತ್ವವನ್ನು ಹೊಂದಿರುವಂತಹ ವ್ಯಕ್ತಿ ಎಂಬುದನ್ನು ಆ ಕಾರಿನ ಕಪ್ಪು ಬಣ್ಣ ಸಾಂಕೇತಿಕವಾಗಿ ನಮಗೆ ಪರಿಚಯಿಸುತ್ತದೆ.

ಕೊನೆಗೂ 500 ರೂಪಾಯಿ ನೋಟಿನ ಬಗ್ಗೆ ಮೌನ ಮುರಿತದ RBI – ದೇಶದ ಜನತೆಗೆ ಗಟ್ಟಿಯಾಗಿ ಹೇಳಿದ್ದೇನು ಗೊತ್ತೇ? Kannada News

ಕಾರುಗಳಿಗೆ ಬಣ್ಣವನ್ನು ಆಯ್ಕೆ ಮಾಡಲು ಪ್ರಾರಂಭಿಸಿದಾಗ ನಿಂದಲೂ ಕೂಡ ಕಪ್ಪು ಬಣ್ಣ ಎನ್ನುವುದು ರಾಜ ತಾಂತ್ರಿಕ ವ್ಯಕ್ತಿಗಳಿಗೆ ಸಾಂಕೇತಿಕ ಬಣ್ಣ ಎನ್ನುವ ರೀತಿಯಲ್ಲಿ ಸಾಂಪ್ರದಾಯಿಕವಾಗಿ ಪರಿಗಣಿಸಲಾಗಿತ್ತು. ಆರಂಭಿಕ ದಿನಗಳಲ್ಲಿಯೇ ಕ್ಯಾಲಿಗ್ರಫಿ ಚಿತ್ರಕಲೆ ಹಾಗೂ ಕಾರುಗಳ ಮೇಲೆ ಕೂಡ ಕಪ್ಪು ಬಣ್ಣಗಳನ್ನು ಪ್ರಮುಖವಾಗಿ ಪ್ರದರ್ಶಿಸಲಾಯಿತು. ಹೀಗಾಗಿ ಅಂದಿನಿಂದಲೂ ಕೂಡ ಈ ಬಣ್ಣಗಳನ್ನು ಪಾರಂಪರಿಕವಾಗಿ ಬಳಸುತ್ತ ಬರಲಾಗಿದೆ ಎಂಬುದಾಗಿ ಸಾಮಾನ್ಯವಾಗಿ ತಿಳಿದು ಬರುತ್ತದೆ. ಇತ್ತೀಚಿಗೆ ದೆಹಲಿಯಲ್ಲಿ ನಡೆದ G20 ಶೃಂಗಸಭೆಯಲ್ಲಿ(G20 Summit) ಕೂಡ ಬಂದಿಳಿದಿರುವಂತಹ ಸಾಕಷ್ಟು ಪ್ರಮುಖ ಬಲಾಢ್ಯ ದೇಶಗಳ ನಾಯಕರು ಕೂಡ ಕಪ್ಪು ಬಣ್ಣದ ಕಾರಿನಲ್ಲಿಯೇ ಕಾಣಿಸಿಕೊಳ್ಳುತ್ತಿರುವುದು ಕೂಡ ಇದನ್ನು ಮತ್ತೆ ಸಾಕ್ಷಿಕರಿಸುತ್ತದೆ.

ಇನ್ನು ಭದ್ರತಾ ದೃಷ್ಟಿಯಿಂದಲೂ(Black Cars For Safety) ಕೂಡ ಕಪ್ಪು ಬಣ್ಣದ ಕಾರುಗಳು ಸಾಕಷ್ಟು ಸುರಕ್ಷಿತವಾದಂತಹ ವಾತಾವರಣವನ್ನು ದೇಶದ ನಾಯಕರಿಗೆ ಆ ಕಾರಿನಲ್ಲಿ ಅನುಭವಿಸುವಂತೆ ಮಾಡುತ್ತದೆ ಎಂದು ಹೇಳಬಹುದಾಗಿದೆ. ಈ ಕಾರಣದಿಂದಲೂ ಕೂಡ ಕಪ್ಪು ಬಣ್ಣದ ಕಾರುಗಳನ್ನು ಹೆಚ್ಚಾಗಿ ಬಳಸುತ್ತಾರೆ ಎಂಬುದನ್ನು ಕೂಡ ನೀವು ಈ ಸಂದರ್ಭದಲ್ಲಿ ಅರ್ಥಮಾಡಿಕೊಳ್ಳಬಹುದು. ಒಟ್ಟಾರೆಯಾಗಿ ಇದೇ ರೀತಿಯ ಭದ್ರತಾ ದೃಷ್ಟಿಯ ಕಾರಣಗಳನ್ನು ಕಪ್ಪು ಬಣ್ಣದ ಕಾರುಗಳ ಬಳಕೆಗೆ ನೀಡಬಹುದಾಗಿದೆ.

Comments are closed.