Neer Dose Karnataka
Take a fresh look at your lifestyle.

Shrama Shakthi Scheme: ಹೊಸ ಯೋಜನೆ- ಸರ್ಕಾರನೇ ಕೊಡುತ್ತೆ 25000. ನಿಮ್ಮ ಮನೆಯ ಮಹಿಳೆಯರ ಕೈಯಲ್ಲಿ ಕೂಡಲೇ ಅರ್ಜಿ ಹಾಕಿಸಿ.

Shrama Shakthi Scheme: ನಮಸ್ಕಾರ ಸ್ನೇಹಿತರೇ ಸರಕಾರ ಜಾರಿಗೆ ತಂದಿರುವಂತಹ ಐದು ಪ್ರಮುಖ ಯೋಜನಗಳ ಬಗ್ಗೆ ಪ್ರತಿಯೊಬ್ಬರಿಗೂ ಕೂಡ ತಿಳಿದಿದೆ ಎಂಬುದಾಗಿ ನಾವು ಭಾವಿಸುತ್ತೇವೆ ಆದರೆ ಇವತ್ತಿನ ಲೇಖನಿಯಲಿ ನಾವು ಮಾತನಾಡಲು ಹೊರಟಿರುವುದು ಹೊಸ ಯೋಜನೆಯ ಮೂಲಕ ರಾಜ್ಯ ಸರ್ಕಾರ ಮಹಿಳೆಯರಿಗೆ 25,000 ರೂಪಾಯಿಗಳ ಸಾಲವನ್ನು ನೀಡಲು ಹೊರಟಿರುವ ಬಗ್ಗೆ. ಗೆಳೆಯರೇ ಈ ಯೋಜನೆಯನ್ನು ಶ್ರಮಶಕ್ತಿ ಯೋಜನೆಯ(shram Shakti scheme) ಎಂಬುದಾಗಿ ರಾಜ್ಯ ಸರ್ಕಾರ ನಾಮಕರಣ ಮಾಡಿದೆ. ಯಾರೆಲ್ಲ ಯೋಜನೆಯನ್ನು ಉಪಯೋಗಿಸಿಕೊಳ್ಳಬಹುದು ಏನೆಲ್ಲ ಇರುತ್ತೆ ಎನ್ನುವಂತಹ ಪ್ರತಿಯೊಂದು ಮಾಹಿತಿಗಳನ್ನು ಕೂಡ ಒಂದಿಂಚು ಬಿಡದಂತೆ ವಿವರವಾಗಿ ಇವತ್ತಿನ ಈ ಲೇಖನಿಯಲ್ಲಿ ತಿಳಿಸುತ್ತಿದ್ದೇವೆ ಹೀಗಾಗಿ ತಪ್ಪದೆ ಲೇಖನಿಯನ್ನು ಕೊನೆಯವರೆಗೂ ಓದಿ.

ನಿಮ್ಮ ಕೈಯಲ್ಲಿ ಒಂದು ರೂಪಾಯಿ ಇಲ್ಲ ಅಂದರೂ ಈ ಬಿಸಿನೆಸ್ ಗಳನ್ನೂ ಆರಂಭಿಸಿ ಲಕ್ಷ ಲಕ್ಷ ದುಡಿಯಬಹುದು.. – Business Idea

Shrama Shakthi Scheme Complete details explained in Kannada – By Kannada News.

ಮೊದಲಿಗೆ ಶ್ರಮಶಕ್ತಿ ಯೋಜನೆ ಏನು ಅನ್ನೋದನ್ನ ತಿಳಿದುಕೊಳ್ಳುವುದು ಪ್ರಮುಖವಾಗಿರುತ್ತದೆ. ಸಾಕಷ್ಟು ಮಹಿಳೆಯರಿಗೆ ತಮ್ಮದೇ ಸ್ವಂತ ಉದ್ಯಮವನ್ನು ಪ್ರಾರಂಭಿಸಬೇಕು ಎನ್ನುವಂತಹ ಆಸೆ ಇರುತ್ತದೆ. ಅಂಥವರಿಗೆ ಶ್ರಮಶಕ್ತಿ ಯೋಜನೆಯ ಮೂಲಕ ಸಾಲವನ್ನು ನೀಡಲಾಗುತ್ತದೆ ಹಾಗೂ ಎಲ್ಲಕ್ಕಿಂತ ಪ್ರಮುಖವಾಗಿ ಇಲ್ಲಿ ಪಡೆದುಕೊಂಡಿರುವಂತಹ ಸಾಲವನ್ನು ಅರ್ಧ ಸರ್ಕಾರವೇ ಕಟ್ಟುತ್ತದೆ ಅನ್ನೋದು ಕೂಡ ಪ್ರತಿಯೊಬ್ಬರೂ ಗಮನವಹಿಸಬೇಕಾಗಿರುವಂತಹ ವಿಚಾರವಾಗಿದೆ. ಇನ್ನು ಮಹಿಳೆಯರಿಗೆ ಉಳಿದ ಅರ್ಧ ಭಾಗದ ಹಣವನ್ನು ತೀರಿಸುವುದಕ್ಕೆ ರಾಜ್ಯ ಸರ್ಕಾರ ಮೂರು ವರ್ಷಗಳ ಕಾಲಾವಕಾಶವನ್ನು ಕೂಡ ನೀಡುತ್ತದೆ ಎಂಬುದಾಗಿ ತಿಳಿದು ಬಂದಿದೆ.

ಹಾಗಿದ್ರೆ ಬನ್ನಿ ಯಾರೆಲ್ಲ ಈ ಸಾಲವನ್ನು ಪಡೆದುಕೊಳ್ಳಬಹುದು ಅರ್ಹತೆಗಳು ಏನಿರಬೇಕು ಅನ್ನೋದನ್ನ ಕೂಡ ತಿಳಿಯೋಣ. ಕೇವಲ ಅಲ್ಪಸಂಖ್ಯಾತ ಮಹಿಳೆಯರಿಗೆ(Minority Ladies) ಮಾತ್ರ ಈ ಯೋಜನೆಯಲ್ಲಿ ಹಣವನ್ನು ಪಡೆಯುವಂತಹ ಅವಕಾಶವನ್ನು ನೀಡಲಾಗುತ್ತದೆ. ವಯೋಮಾನ್ಯತೆ 18 ವರ್ಷದಿಂದ 55 ವರ್ಷಗಳ ವರೆಗೆ ಇರಬೇಕು ಹಾಗೂ ಅವರು ಕರ್ನಾಟಕ ರಾಜ್ಯದವರೇ ಆಗಿರಬೇಕು ಎನ್ನುವುದನ್ನು ಕೂಡ ಇಲ್ಲಿ ಉಲ್ಲೇಖಿಸಲಾಗಿದೆ. ಇನ್ನು ಅವರ ಕುಟುಂಬದ ಆದಾಯ ವಾರ್ಷಿಕವಾಗಿ 3.50 ಲಕ್ಷ ರೂಪಾಯಿಗಳಿಗೆ ಮೀರದಂತೆ ಇರಬೇಕು. ರಾಜ್ಯ ಹಾಗೂ ಕೇಂದ್ರ ಸರ್ಕಾರದ ನೌಕರಿಯಲ್ಲಿ ಅವರ ಕುಟುಂಬದಲ್ಲಿ ಯಾರು ಕೂಡ ಇರಬಾರದು ಮತ್ತು ಯಾವುದೇ ಸರ್ಕಾರಿ ಯೋಜನೆಗಳಲ್ಲಿ ಕಳೆದ ಐದು ವರ್ಷಗಳಲ್ಲಿ ಕೂಡ ಅವರು ಫಲಾನುಭವಿಗಳು ಆಗಿರಬಾರದು ಎನ್ನುವಂತಹ ನಿಯಮಗಳನ್ನು ಕೂಡ ಈ ಯೋಜನೆಯಲ್ಲಿ ಅಳವಡಿಸಲಾಗಿದೆ.

ಇನ್ನೋವಾ ಕಾರ್ ಅನ್ನು ಮೀರಿಸುವಂತಹ ಕಾರು. ಸಂಪೂರ್ಣ ವಿಶೇಷತೆ, ಬೆಲೆ ತಿಳಿದರೆ ಇಂದೇ ಖರೀದಿ ಮಾಡ್ತೀರಾ… – Maruthi Ertiga

ಇನ್ನು ಈ ಯೋಜನೆಗೆ ಬೇಕಾಗಿರುವಂತಹ ದಾಖಲೆ ಪತ್ರಗಳ ಬಗ್ಗೆ ನೋಡುವುದಾದರೆ ಅಲ್ಪಸಂಖ್ಯಾತ ಪ್ರಮಾಣ ಪತ್ರ, ಆದಾಯ ಪ್ರಮಾಣ ಪತ್ರ, ಯೋಜನಾ ವರದಿ, ನಿಮ್ಮ ಅಡ್ರೆಸ್ ಪ್ರೂಫ್ ಗಾಗಿ ಆಧಾರ್ ಕಾರ್ಡ್(Aadhaar Card), ಸ್ವಯಂ ಘೋಷಣ ಪತ್ರದ ಜೊತೆಗೆ ನಿಮ್ಮ ಬ್ಯಾಂಕ್ ಖಾತೆಯ ಡೀಟೇಲ್ಸ್ ಅನ್ನು ಕೂಡ ನೀವು ಈ ಸಂದರ್ಭದಲ್ಲಿ ನೀಡಬೇಕಾಗಿರುತ್ತದೆ. ಈ ಯೋಜನೆಯಲ್ಲಿ ಹಣವನ್ನು ಪಡೆಯುವ ಮೂಲಕ ಮಹಿಳೆಯರು ಟೈಲರಿಂಗ್, ಹೂ ಹಾಗು ಹಣ್ಣುಗಳನ್ನು ಮಾರಾಟ ಮಾಡುವಂತಹ ವ್ಯಾಪಾರ, ಮಾಂಸ ಹಾಗೂ ಮೀನುಗಳ ವ್ಯಾಪಾರವನ್ನು ಮಾಡುವುದು ಹಾಗೂ ಇದೇ ರೀತಿಯ ಇನ್ನಿತರ ಚಿಕ್ಕಪುಟ್ಟ ವ್ಯಾಪಾರಗಳನ್ನು ಸುಲಭವಾಗಿ ಪ್ರಾರಂಭಿಸಿ ಹಣವನ್ನು ಸಂಪಾದನೆ ಮಾಡಬಹುದಾಗಿದೆ.

ಮೊದಲಿಗೆ ನೀವು ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಲಾಗಿನ್ ಆಗಬೇಕು. ಅಲ್ಲಿ ಅರ್ಜಿ ಸಲ್ಲಿಸುವಂತಹ ಆಯ್ಕೆಯನ್ನು ಕ್ಲಿಕ್ ಮಾಡಿ ನಿಮ್ಮ ನಂಬರ್ ಅನ್ನು ನೀಡಬೇಕು ಅಲ್ಲಿಂದ ನಿಮ್ಮ ಓಟಿಪಿ ಜನರೇಟ್ ಆಗುತ್ತೆ. ಓಟಿಪಿ ಹಾಕಿದ ನಂತರ ನಿಮ್ಮ ಮಾಹಿತಿಯನ್ನು ಅಲ್ಲಿ ಕೇಳಲಾಗುತ್ತದೆ ಪ್ರತಿಯೊಂದು ಮಾಹಿತಿಗಳನ್ನು ಕೂಡ ಸರಿಯಾದ ರೀತಿಯಲ್ಲಿ ತುಂಬಿಸಿ ದಾಖಲೆ ಪತ್ರಗಳನ್ನು ನೀವು ಒದಗಿಸಬೇಕಾಗುತ್ತದೆ. ಇಷ್ಟೆಲ್ಲ ಮಾಡಿದ ನಂತರ ಸಬ್ಮಿಟ್ ಮಾಡಿದ್ರೆ ಸಾಕು ಅರ್ಜಿ ಸಲ್ಲಿಸುವ ಪ್ರಕ್ರಿಯೆ ಸಂಪೂರ್ಣ ವಾಗುತ್ತದೆ. ಈ ಯೋಜನೆಯ ಮೂಲಕ 50,000 ಹಣವನ್ನು ಸಾಲ ರೂಪದಲ್ಲಿ ಪಡೆದುಕೊಂಡು 25,000 ಅದರಲ್ಲಿ ಸಹಾಯಧನದ ರೂಪದಲ್ಲಿ ಅಂದರೆ ಸರ್ಕಾರ ಅದನ್ನು ಕಟ್ಟುವುದರಿಂದಾಗಿ ಉಚಿತವಾಗಿ ಪಡೆದುಕೊಂಡಂತಾಗುತ್ತದೆ. ಖಂಡಿತವಾಗಿ ಚಿಕ್ಕ ಉದ್ಯಮವನ್ನು ಪ್ರಾರಂಭಿಸುವ ಆಸೆಯನ್ನು ಹೊಂದಿರುವಂತಹ ಮಹಿಳೆಯರಿಗೆ ಇದೊಂದು ಸುವರ್ಣ ಅವಕಾಶ.

Comments are closed.