Neer Dose Karnataka
Take a fresh look at your lifestyle.

ಪ್ರತಿದಿನ ಸಬ್ಬಕ್ಕಿ ತಿಂದರೆ ದೇಹದಲ್ಲಿ ಏನಲ್ಲಾ ಬದಲಾವಣೆ ಆಗುತ್ತದೆ ಗೊತ್ತಾ??

ವ್ರತ, ಪೂಜೆ, ಉಪವಾಸ ಇರುವಾಗ ಸಬ್ಬಕ್ಕಿಯನ್ನು ಹೆಚ್ಚಾಗಿ ಉಪಯೋಗಿಸುತ್ತೇವೆ. ಮುಖ್ಯವಾಗಿ ಉಪವಾಸದ ಆಹಾರವಾಗಿ ಸಬ್ಬಕ್ಕಿಯನ್ನು ಬಳಸುವ ಪದ್ಧತಿ ಹಿಂದಿನ ಕಾಲದಿಂದಲೂ ಬಂದಿದೆ. ಸಬ್ಬಕ್ಕಿಯು ಸುಲಭವಾಗಿ ಜೀರ್ಣವಾಗುವಂತಹ ಅಂಶವನ್ನು ಒಳಗೊಂಡಿದೆ. ಕೆಲವರು ಸಬ್ಬಕ್ಕಿಯನ್ನು ಗಂಜಿ ರೂಪದಲ್ಲಿ ಸೇವಿಸುತ್ತಾರೆ. ಇನ್ನು ಶಿಶುವಿನ ಆಹಾರದಲ್ಲಿಯೂ ಸಹ ಸಬ್ಬಕ್ಕಿಯನ್ನು ಉಪಯೋಗಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ರುಚಿಯನ್ನು ಹೆಚ್ಚಿಸಲು ವಡೆ, ದೋಸೆ ,ಉಪ್ಪಿಟ್ಟು, ಇಡ್ಲಿ ಇನ್ನಿತರ ಅಡುಗೆಗಳನ್ನು ಮಾಡುವಾಗ ಸಬ್ಬಕ್ಕಿಯನ್ನು ಬಳಸುತ್ತಾರೆ. ಸಬ್ಬಕ್ಕಿಯನ್ನು ಅಡುಗೆಗಳಿಗೆ ಬಳಸುವ ಮೊದಲು 3 ಗಂಟೆಗಳ ಕಾಲ ನೆನೆಸಿ ಉಪಯೋಗಿಸಲಾಗುತ್ತದೆ.

ಮರಗೆಣಸಿನ ಹಿಟ್ಟಿನಿಂದ ಸಬ್ಬಕ್ಕಿಯನ್ನು ತಯಾರಿಸುತ್ತಾರೆ. ಮರಗೆಣಸಿನ ಬೆಳೆಗಳನ್ನು ಹೆಚ್ಚಾಗಿ ತಮಿಳುನಾಡಿನಲ್ಲಿ ಕಾಣಬಹುದು. ಬಲಿತ ಮರಗೆಣಸನ್ನು ಚೆನ್ನಾಗಿ ತೊಳೆದು, ಸಿಪ್ಪೆಯನ್ನು ತೆಗೆದು ಮತ್ತೆ ಸ್ವಚ್ಛಗೊಳಿಸುತ್ತಾರೆ. ನಂತರ ಮರಗೆಣಸಿನ ಹೋಳುಗಳನ್ನು ನೀರಿನಲ್ಲಿ ಹಾಕಿ ರುಬ್ಬಿ ಹಾಲನ್ನು ತೆಗೆಯುತ್ತಾರೆ. ಈ ಹಾಲನ್ನು ಪಾತ್ರೆಗೆ ಹಾಕಿ 4 – 5 ಗಂಟೆಗಳ ಕಾಲ ಚೆನ್ನಾಗಿ ಬೇಯಿಸಿಕೊಳುತ್ತಾರೆ. ಕಟ್ಟಿ ಪದಾರ್ಥವು ಪಾತ್ರೆಯ ಕೆಳಗಡೆ ಇರುತ್ತದೆ ಮತ್ತು ನೀರಿನ ಅಂಶವು ಮೇಲೆ ತೇಲುತ್ತದೆ. ಈ ಪದಾರ್ಥವನ್ನು ನೀರಿನಿಂದ ಬೇರ್ಪಡಿಸಿ ಶೋಧಿಸಿದಾಗ ಮರಗೆಣಸಿನ ಹಿಟ್ಟು ತಯಾರಾಗುತ್ತದೆ. ಇದನ್ನು ಸಬ್ಬಕ್ಕಿ ತಯಾರಿಸುವ ಯಂತ್ರದಲ್ಲಿ ಹಾಕಿ ಸಬ್ಬಕ್ಕಿ ಕಾಳುಗಳನ್ನು ಮಾಡುತ್ತಾರೆ. ಈ ರೀತಿ ಸಬ್ಬಕ್ಕಿ ಕಾಳುಗಳನ್ನು ತಯಾರಿಸುತ್ತಾರೆ.

ಸಬ್ಬಕ್ಕಿಯಲ್ಲಿ ವಿಟಮಿನ್ ಕೆ ಅಂಶವು ಹೆಚ್ಚಾಗಿ ಕಂಡುಬರುತ್ತದೆ. ಇದನ್ನು ಸೇವಿಸುವುದರಿಂದ ದೇಹದಲ್ಲಿ ಬೇಗನೆ ಶಕ್ತಿ ಹೆಚ್ಚಾಗುತ್ತದೆ. ಇನ್ನೂ ದೇಹದಲ್ಲಿ ತೂಕವನ್ನು ಕಡಿಮೆ ಮಾಡಲು ಬಯಸುವವರು ಸಬ್ಬಕ್ಕಿಯನ್ನು ಸೇವಿಸುವುದರಿಂದ ಕಡಿಮೆ ಮಾಡಿಕೊಳ್ಳಬಹುದು. ಸಬ್ಬಕ್ಕಿಯಲ್ಲಿ ಅನೇಕ ಔಷಧೀಯ ಅಂಶಗಳು ಇರುವುದರಿಂದ ಅನೇಕ ಕಾಯಿಲೆಗಳಿಗೆ ರಾಮಬಾಣವಾಗಿದೆ.ಸಬ್ಬಕ್ಕಿಯನ್ನು ಪ್ರತಿದಿನ ಸೇವಿಸುವುದರಿಂದ ನರಗಳಿಗೆ ಹಾಗೂ ಮಾಂಸಖಂಡಗಳಿಗೆ ಹೆಚ್ಚಿನ ಶಕ್ತಿಯನ್ನು ಒದಗಿಸುತ್ತದೆ.

ಸಬ್ಬಕ್ಕಿಯಲ್ಲಿ ಕ್ಯಾಲ್ಸಿಯಂ ಅಂಶವು ಹೆಚ್ಚಾಗಿರುವುದರಿಂದ ಹೃದಯಕ್ಕೆ ಬಹಳ ಒಳ್ಳೆಯದು. ಪೊಟ್ಯಾಷಿಯಂ ಇರುವುದರಿಂದ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರದಂತೆ ತಡೆಯುತ್ತದೆ. ಇನ್ನು ಇದರಲ್ಲಿ ಕಾರ್ಬೋಹೈಡ್ರೇಟ್ ಹಾಗೂ ಫೋಲಿಕ್ ಆಸಿಡ್ ಹೆಚ್ಚಾಗಿರುವುದರಿಂದ ಬರ್ತ್ ಡಿಫೆಕ್ಟ್ ನಿಂದ ಬರುವ ರೋಗಗಳನ್ನು ನಿಯಂತ್ರಿಸುತ್ತದೆ. ಇನ್ನು ಮುಖ್ಯವಾಗಿ ಗರ್ಭಿಣಿಯರು ಇದನ್ನು ಸೇವಿಸುವುದರಿಂದ ಮಗುವಿಗೆ ಹೆಚ್ಚಿನ ಪೋಷಕಾಂಶಗಳು ದೊರೆಯುತ್ತದೆ.

Comments are closed.