Neer Dose Karnataka
Take a fresh look at your lifestyle.

ರಾಬರ್ಟ್ ಸಿನಿಮಾ ನೋಡಿ ಷಾಕಿಂಗ್ ಹೇಳಿಕೆ ನೀಡಿದ ತೆಲುಗು ಸ್ಟಾರ್ ಅಲ್ಲು ಅರ್ಜುನ್ ! ಹೇಳಿದ್ದೇನು ಗೊತ್ತಾ?

5

ನಮಸ್ಕಾರ ಸ್ನೇಹಿತರೇ ಇದೀಗ ರಾಬರ್ಟ್ ಸಿನಿಮಾ ಬಿಡುಗಡೆಯಾಗಿ ಕರ್ನಾಟಕದಲ್ಲಿ ಹಾಗೂ ತೆಲಂಗಾಣ ಮತ್ತು ಆಂಧ್ರ ಪ್ರದೇಶ ರಾಜ್ಯಗಳಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೇ ಮೊಟ್ಟ ಮೊದಲ ಬಾರಿಗೆ ದರ್ಶನ್ ರವರ ಚಿತ್ರ ತೆಲುಗಿನಲ್ಲಿಯೂ ಕೂಡಾ ಬಿಡುಗಡೆಯಾಗಿದೆ, ಇನ್ನೂ ಅಧಿಕೃತ ಅಂಕಿ-ಅಂಶಗಳ ಪ್ರಕಾರ ತೆಲುಗಿನಲ್ಲಿಯೂ ಕೂಡ ದರ್ಶನ್ ರವರು ಮೋಡಿ ಮಾಡುವುದರಲ್ಲಿ ಯಶಸ್ವಿಯಾಗಿದ್ದು, ಮೊದಲ ದಿನವೇ ಮೂರು ಕೋಟಿಗೂ ಹೆಚ್ಚು ಹಣ ಕಲೆಕ್ಷನ್ ಆಗಿದೆ.

ತೆಲುಗು ಪ್ರೇಕ್ಷಕರು ಕೂಡ ದರ್ಶನ್ ರವರ ಸಿನಿಮಾವನ್ನು ಒಪ್ಪಿಕೊಂಡು ನಿಜಕ್ಕೂ ಸಿನಿಮಾ ಅದ್ಭುತವಾಗಿದೆ ಎಂದು ಪ್ರತಿಕ್ರಿಯೆ ನೀಡುತ್ತಿದ್ದಾರೆ, ಇಂತಹ ಸಂದರ್ಭದಲ್ಲಿ ರಾಬರ್ಟ್ ಆಡಿಯೋ ಲಾಂಚ್ ಹಾಗೂ ಟ್ರೈಲರ್ ಗಳನ್ನು ನೋಡಿ ಉತ್ತಮ ಪ್ರತಿಕ್ರಿಯೆ ನೀಡಿದ ಅಲ್ಲುಅರ್ಜುನ್ ರವರು ರಾಬರ್ಟ್ ಸಿನಿಮಾ ಕುರಿತು ಮಾತನಾಡಿದ್ದಾರೆ.

ಹೌದು ಸ್ನೇಹಿತರೇ ಸಾಮಾಜಿಕ ಜಾಲತಾಣಗಳಲ್ಲಿ ತೆಲುಗು ಚಿತ್ರರಂಗದ ಖ್ಯಾತ ನಟರಲ್ಲಿ ಒಬ್ಬರಾಗಿರುವ ಅಲ್ಲು ಅರ್ಜುನ್ ರವರು ರಾಬರ್ಟ್ ಸಿನಿಮಾ ಕುರಿತು ಬರೆದು ಕೊಂಡು, ಕನ್ನಡ ಚಿತ್ರರಂಗವನ್ನು ಮತ್ತೊಂದು ಲೆವೆಲ್ಲಿಗೆ ತೆಗೆದುಕೊಂಡು ಹೋಗುವ ಚಿತ್ರ ಇದಾಗಿದೆ, ಈ ಸಿನಿಮಾ ನೋಡಿದ ಮೇಲೆ ತೆಲುಗಿನಲ್ಲಿಯೂ ಕೂಡ ದರ್ಶನ್ ರವರಿಗೆ ಅಭಿಮಾನಿ ಬಳಗ ಸೃಷ್ಟಿಯಾಗುತ್ತದೆ, ಆ ಕಡಕ ಲುಕ್ ಆ ಡೈಲಾಗ್ ಡಿಲಿವರಿ ನಿಜಕ್ಕೂ ಬಹಳ ಅದ್ಭುತವಾಗಿದೆ. ಬ್ಯಾಕ್ ಗ್ರೌಂಡ್ ಮ್ಯೂಸಿಕ್, ಫಿಲಮೋಗ್ರಫಿ ಅಂತೂ ಅದ್ಭುತ, ಚಿತ್ರ ಬಹಳ ಅದ್ಭುತವಾಗಿ ಮೂಡಿ ಬಂದಿದ್ದು ಈ ಚಿತ್ರ ಮತ್ತಷ್ಟು ಯಶಸ್ಸು ಕಾಣಲಿ ಎಂದು ಹಾರೈಸಿದ್ದಾರೆ.

Leave A Reply

Your email address will not be published.