Neer Dose Karnataka
Take a fresh look at your lifestyle.

ಟಿವಿ9 ವಾಹಿನಿಯ ಖ್ಯಾತ ನಿರೂಪಕಿ ಸುಕನ್ಯಾ ಅವರ ನಿಜ ಜೀವನ ಹೇಗಿದೆ ಗೊತ್ತಾ?? ಬಹಳ ಕ್ಯೂಟ್ ಅಂಡ್ ಸ್ಟೈಲಿಶ್.

ನಮಸ್ಕಾರ ಸ್ನೇಹಿತರೇ ಇಂದಿನ ದಿನಗಳಲ್ಲಿ ಸುದ್ದಿವಾಹಿನಿ ಹಾಗೂ ಪತ್ರಿಕೋದ್ಯಮದಲ್ಲಿ ಸಾಕಷ್ಟು ಮಹಿಳೆಯರು ಕಾಣಿಸಿಕೊಳ್ಳುತ್ತಿದ್ದಾರೆ. ಹೌದು ಇದೀಗ ಅನೇಕ ಮಹಿಳೆಯರು ಈ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು ತಮ್ಮ ಪ್ರತಿಭೆಯನ್ನು ಸಾಬೀತು ಪಡಿಸಿದ್ದಾರೆ. ಇನ್ನು ಸುದ್ದಿವಾಹಿನಿಗಳಲ್ಲಿ ನಿರೂಪಣೆ ಮಾಡುವಲ್ಲಿ ಹೆಣ್ಣುಮಕ್ಕಳು ಮೇಲುಗೈ ಸಾಧಿಸುತ್ತಿದ್ದಾರೆ. ಇದೀಗ ಎಲ್ಲ ಸುದ್ದಿವಾಹಿನಿಗಳಲ್ಲಿ ಅವರದೇ ಪ್ರಮುಖ ಪಾತ್ರ ಆಗಿದೆ.

ಇನ್ನು ಅದೇ ರೀತಿ ಟಿವಿ 9 ಎಂಬುದು ಕೂಡ ಕನ್ನಡದ ಪ್ರಮುಖ ಸುದ್ದಿವಾಹಿನಿಗಳಲ್ಲಿ ಒಂದು. ಇನ್ನು ಈ ಸುದ್ದಿವಾಹಿನಿಯಲ್ಲಿ ನಿರೂಪಕಿಯಾಗಿ ಕಾಣಿಸಿಕೊಳ್ಳುವವರ ಹೆಸರು ಸುಕನ್ಯಾ ಜೈನ. ಹೌದು ಕನ್ನಡ ಸುದ್ದಿವಾಹಿನಿಗಳಲ್ಲಿ ಹೆಚ್ಚು ಪ್ರಾಮುಖ್ಯತೆ ಪಡೆದ ನಿರೂಪಕರಲ್ಲಿ ಇವರು ಕೂಡ ಒಬ್ಬರು. ಇವರು ಕೇಳುವ ಪ್ರಶ್ನೆ ಹಾಗೂ ಇವರು ಮಾತನಾಡುವ ರೀತಿ ಎಲ್ಲರಿಗೂ ಕೂಡ ಇಷ್ಟವಾಗಿದೆ. ಇನ್ನು ಇವರನ್ನು ಸಾಕಷ್ಟು ಜನರು ಕೇವಲ ಸುದ್ದಿವಾಹಿನಿಯಲ್ಲಿ ಮಾತ್ರ ನೋಡಿರುತ್ತಾರೆ. ಇನ್ನು ಅವರು ತಮ್ಮ ನಿಜ ಜೀವನದಲ್ಲಿ ಹೇಗಿದ್ದಾರೆ ಎಂಬುದನ್ನು ನಾವು ಇಲ್ಲಿ ನಿಮಗೆ ತಿಳಿಸಿಕೊಡುತ್ತೇವೆ ಬನ್ನಿ.

ಹೌದು ಇಂದಿನ ದಿನಮಾನದಲ್ಲಿ ಸುಕನ್ಯಾ ಜೈನ್ ಒಬ್ಬರು ಪ್ರತಿಷ್ಠಿತ ನಿರೂಪಕಿಯಾಗಿ ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇನ್ನು ನಾವು ಕಾಣುವಂತೆ ಎಲ್ಲ ಕುಟುಂಬಗಳಲ್ಲಿ ಹೆಣ್ಣುಮಕ್ಕಳಿಗೆ ಬಹುಬೇಗನೇ ವಿವಾಹ ಮಾಡುತ್ತಾರೆ. ಇದರಿಂದ ಸುಕನ್ಯಾ ಜೈನ ಕೂಡ ಹೊರತಾಗಿರಲಿಲ್ಲ. ಹೌದು ಅವರ ಕುಟುಂಬದಲ್ಲಿ ಕೂಡ ಅವರಿಗೆ ಬಹು ಬೇಗ ಮದುವೆ ಮಾಡಬೇಕೆಂದು ನಿರ್ಧರಿಸಿದ್ದರು. ಆದರೆ ಪದವಿ ಪಡೆಯಬೇಕೆಂಬ ಆಸೆ ಹೊಂದಿದ್ದ ಸುಕನ್ಯಾ ಜೈನ್ ಅವರು ತಮ್ಮ ಮದುವೆಯನ್ನು ಮುಂದೆ ಹಾಕಿದರು.

ಇನ್ನು ಪದವಿ ವಿದ್ಯಾಭ್ಯಾಸ ಪಡೆಯುವಾಗ ಅವರ ಉಪನ್ಯಾಸಕರ ಸಹಾಯದಿಂದಾಗಿ ಟಿವಿ9 ವಾಹಿನಿಯಲ್ಲಿ ಕೆಲಸ ಮಾಡುವ ಅವಕಾಶ ಸಿಕ್ಕಿತು. ಆ ಸಮಯದಲ್ಲಿ ಸುಕನ್ಯಾ ಜೈನ್ ಅವರು ತಮ್ಮ ಕೆಲಸ ಹುಟ್ಟುಹಬ್ಬದ ಶುಭಾಶಯ ತಿಳಿಸುವುದು, ಪತ್ರ ಓದುವುದು ಎಂದು ತಿಳಿದುಕೊಂಡಿದ್ದರಂತೆ. ಆದರೆ ನ್ಯೂಸ್ ಓದುವ ಕೆಲಸ ತಮ್ಮದು ಎಂದು ಅಂದುಕೊಂಡಿರಲಿಲ್ಲ. ಏಕೆಂದರೆ ಅವರಿಗೆ ಅದರಲ್ಲಿ ಆಸಕ್ತಿ ಕೂಡ ಇರಲಿಲ್ಲ. ಹೀಗೆ ಟಿವಿ9 ವಾಹಿನಿಯಲ್ಲಿ ಕೆಲಸ ಪಡೆದುಕೊಂಡ ಸುಕನ್ಯಾ ಜೈನ್ ಅವರು ಮತ್ತೊಮ್ಮೆ ತಮ್ಮ ಮದುವೆಯನ್ನು ಸ್ವಲ್ಪ ಮಟ್ಟಿಗೆ ಮುಂದೆ ಹಾಕಿದರು ಕೂಡ ಬೇಗನೇ ವಿವಾಹ ಮಾಡಿಕೊಂಡರು.

ಇನ್ನೂ ಒಂದು ವೇಳೆ ಅವರು ಈ ಕೆಲಸಕ್ಕೆ ಒಪ್ಪಿಗೆ ನೀಡಿರಲಿಲ್ಲ ಎಂದರೆ ಅವರು ಇದೀಗ ಕಾಲೇಜು ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರಂತೆ. ಇನ್ನು ಈ ಬಗ್ಗೆ ಮಾತನಾಡಿದ ಸುಕನ್ಯಾ ಜೈನ್ ಅವರು ಟಿವಿ9 ಎಂಬುದೇ ಒಂದು ಬ್ರಾಂಡ್. ಅದರಲ್ಲಿ ನನ್ನ ವರ್ಚಸ್ಸು ಇದೆ ಎಂದರೆ ನನಗೆ ಬಹಳ ಸಂತೋಷ. ಇದು ನನಗೆ ಆಶೀರ್ವಾದ ಎಂದು ಅಂದು ಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.

ಇದೀಗ ನಿರೂಪಕಿಯಾಗಿ ನೀವು ನೋಡಿದ ಸುಕನ್ಯಾ ಜೈನ್ ಅವರನ್ನು ನಿಜ ಜೀವನದಲ್ಲಿ ಹೇಗಿದ್ದಾರೆ ಎಂಬುದನ್ನು ಈ ಫೋಟೋಗಳನ್ನು ಮೂಲಕ ನೋಡಬಹುದು. ವಿದ್ಯಾಭ್ಯಾಸ ಮಾಡಿದ್ದು ಸೈನ್ಸ್ ಆದರೂ ಕೂಡ ಇದೀಗ ಸುದ್ದಿ ವಾಹಿನಿ ರಂಗದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿದ್ದಾರೆ ಎಂದು ಹೇಳಬಹುದು. ಇನ್ನು ಈ ಸುದ್ದಿ ನಿಮಗೆ ಇಷ್ಟವಾದಲ್ಲಿ ಶೇರ್ ಮಾಡಿ ಹಾಗೂ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮಾಡಿ ತಿಳಿಸಿ.

Comments are closed.