ದಿನ 2 ಏಲಕ್ಕಿ 1 ಲವಂಗ ತಿಂದ್ರೆ ಏನಾಗುತ್ತೆ ಗೊತ್ತಾದ್ರೆ ಷಾಕ್ ಆಗ್ತೀರ. ಎಷ್ಟೆಲ್ಲ ಲಾಭ ಗೊತ್ತಾ?? ಪುರುಷರು ತಪ್ಪದೆ ನೋಡಿ.

Health

ನಮಸ್ಕಾರ ಸ್ನೇಹಿತರೇ ನಾವು ತಿಳಿಸಿದಂತೆ ಅದೆಷ್ಟು ರೋಗಗಳಿಗೆ ಮದ್ದು ನಮ್ಮ ಮನೆಯ ಸುತ್ತಮುತ್ತಲೇ ಪರಿಸರಗಳಲ್ಲಿ ಇರುತ್ತದೆ. ನಮಗೆ ಸರಿಯಾದ ಜ್ಞಾನ ಹಾಗೂ ತಿಳಿವಳಿಕೆ ಇರಬೇಕಷ್ಟೇ ಅವುಗಳನ್ನು ಉಪಯೋಗಿಸಲು. ಇಂದಿನ ವಿಷಯದಲ್ಲಿ ಕೂಡ ನಾವು ಇದೇ ಒಂದು ಮನೆಮದ್ದನ್ನು ಹೇಳಲು ಹೊರಟಿದ್ದೇವೆ. ಸ್ನೇಹಿತರೆ ಏಲಕ್ಕಿ ಹಾಗೂ ಲವಂಗವನ್ನು ನಾವು ನಮ್ಮ ದಿನನಿತ್ಯ ಅಡಿಗೆಳಲ್ಲಿ ಉಪಯೋಗಿಸುತ್ತೇವೆ. ನಮ್ಮ ಜೀವನದ ಆರೋಗ್ಯವನ್ನು ಸುಧಾರಿಸಲು ಕೂಡ ಸಹಾಯಕಾರಿ ಎಂಬುದು ನಿಮಗೆ ಗೊತ್ತೇ. ಬನ್ನಿ ಕುರಿತಂತೆ ನಿಮಗೆ ವಿವರವಾಗಿ ಹೇಳುತ್ತೇನೆ.

ನಿಮಗೆ ಒಂದು ವಿಷಯ ಗೊತ್ತಾ ಸ್ನೇಹಿತರೆ ಏಲಕ್ಕಿ ಹಾಗೂ ಲವಂಗಗಳನ್ನು ಸುಗಂಧ ದ್ರವ್ಯ ತಯಾರಿಕೆಗೆ ಕೂಡ ಬಳಸುತ್ತಾರೆ ಏಕೆಂದರೆ ಇವುಗಳ ಸುವಾಸನೆ ಅಷ್ಟರಮಟ್ಟಿಗೆ ಎಲ್ಲರನ್ನೂ ಮೆಚ್ಚಿಸುತ್ತದೆ. ಸ್ನೇಹಿತರೆ ಇವುಗಳ ಸೇವನೆಯಿಂದಾಗಿ ನಮ್ಮ ದೇಹದ ಜೀರ್ಣಕ್ರಿಯೆ ಕಾರ್ಯಗಳು ಸುಲಭವಾಗಿ ನಡೆಯುತ್ತದೆ. ಹಾಗೂ ನಮ್ಮ ಹೃದಯದ ರಕ್ತಪರಿಚಲನಾ ಕಾರ್ಯಕೂಡ ಸುಲಲಿತವಾಗಿ ನಡೆಯಲು ಇವುಗಳ ಸೇವನೆ ಬಹಳ ಸಹಕಾರಿಯಾಗುತ್ತದೆ. ಅಲ್ಲದೆ ಇದರಲ್ಲಿರುವ ಮ್ಯಾಗ್ನಿಷಿಯಂ ಕ್ಯಾಲ್ಸಿಯಂ ಹೀಗೆ ಹಲವಾರು ಪೋಷಕಾಂಶಗಳು ದೇಹದ ರೋಗನಿರೋಧಕ ಶಕ್ತಿಯನ್ನು ಗಣನೀಯವಾಗಿ ಹೆಚ್ಚಿಸುತ್ತದೆ.

ಕೆಲವೊಮ್ಮೆ ಜನರು ಬ್ಯುಸಿ ಲೈಫ್ ಸ್ಟೈಲ್ ನಲ್ಲಿ ಡಿಪ್ರೆಶನ್ ಗೆ ಹೋಗಿ ಬಿಡುತ್ತಾರೆ ಆಗ ಆ ಸಂದರ್ಭದಲ್ಲಿ ನೀವು ಏಲಕ್ಕಿಯನ್ನು ಅಗಿಯುತ್ತಾ ಹೋದರೆ ನಿಮ್ಮ ಡಿಪ್ರೆಷನ್ ಖಂಡಿತವಾಗಿ ಕಡಿಮೆಯಾಗುತ್ತದೆ. ಒಂದು ವೇಳೆ ನಿಮಗೆ ಟೀ ಕುಡಿಯುವ ಅಭ್ಯಾಸವಿದ್ದರೆ ಪ್ರತಿನಿತ್ಯ ಎರಡು ಏಲಕ್ಕಿಯನ್ನು ಅದಕ್ಕೆ ಜಜ್ಜಿ ಹಾಕಿ ಕುಡಿದರೆ ನಿಮಗೆ ಮಾನಸಿಕ ಒತ್ತಡ ಕಡಿಮೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಇನ್ನು ಲವಂಗದ ವಿಷಯಕ್ಕೆ ಬರೋದಾದರೆ ನೋಡಲು ಚಿಕ್ಕದಿದ್ದರೂ ಸಹ ಅದರಲ್ಲಿರುವ ಪೋಷಕಾಂಶಗಳ ಮೊತ್ತ ತುಂಬಾ ದೊಡ್ಡದು.

ಇದು ನಿಮ್ಮ ಮೆದುಳಿನ ಬೆಳವಣಿಗೆ ಹಾಗೂ ಚುರುಕುತನಕ್ಕೆ ಸಹಕಾರಿಯಾಗುತ್ತದೆ. ಅಲ್ಲದೆ ನಿಮ್ಮ ಮೂಳೆಯ ಬಲಕ್ಕೆ ಇದರ ಸೇವನೆ ತುಂಬಾ ಪ್ರಯೋಜನಕಾರಿ. ಅಲ್ಲದೆ ಲವಂಗ ದಲ್ಲಿ ರಕ್ತಪರಿಚಲನಾ ಕಾರ್ಯಕ್ಕೆ ಸಹಕಾರಿಯಾಗುವ ಅಂಶಗಳಿದ್ದು ಅಲ್ಲದೆ ಕ್ಯಾನ್ಸರ್ನಂತಹ ಕಾಯಿಲೆಗಳಿಗೆ ಕೂಡ ಇದು ಅಲ್ಪಪ್ರಮಾಣದಲ್ಲಿ ನಿರೋಧಕವಾಗಿ ಕೆಲಸ ಮಾಡುತ್ತದೆ. ನೀನು ಪ್ರತಿನಿತ್ಯ ನೀವು 2 ಏಲಕ್ಕಿ ಹಾಗೂ ಒಂದು ಲವಂಗವನ್ನು ಮಲಗುವಮುನ್ನ ಹಾಗೂ ಬೆಳಗ್ಗೆ ತಿಂಡಿ ಆದ ನಂತರ ತಿಂದರೆ ಏನಾಗುತ್ತದೆ ಸ್ನೇಹಿತರೆ ಹೇಳುತ್ತೇನೆ ಬನ್ನಿ.

ಹೌದು ಸ್ನೇಹಿತರೆ ಈ ತರಹ ನೀವು ಪ್ರತಿನಿತ್ಯ ಎರಡು ಏಳಕ್ಕೆ ಹಾಗೂ ಒಂದು ಲವಂಗವನ್ನು ತಿಂದರೆ ನಿಮ್ಮ ದೇಹದಲ್ಲಿರುವ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಇದು ಹೊರಹಾಕಿ ನಿಮ್ಮ ದೇಹದಲ್ಲಿರುವ ಬ್ಯಾಕ್ಟೀರಿಯಾವನ್ನು ಇಲ್ಲದಂತೆ ಮಾಡುತ್ತದೆ. ಅದರಲ್ಲೂ ಪುರುಷರಿಗೆ ಇದರ ಸೇವನೆಯಿಂದಾಗಿ ಸಂತಾನ ಸಮಸ್ಯೆಗಳು ಇದ್ದರೆ ನಿವಾರಣೆಯಾಗುತ್ತದೆ. ಅಲ್ಲದೆ ನಿಮ್ಮ ದೇಹದಲ್ಲಿರುವ ವಿಷ ಪದಾರ್ಥವನ್ನು ಹೊರಹಾಕಿ ನಿಮ್ಮ ದೇಹದ ರಕ್ತವನ್ನು ಪರಿಶುದ್ಧ ಮಾಡುವಲ್ಲಿ ಎರಡು ವಸ್ತುಗಳು ಮುಖ್ಯ ಕಾರ್ಯವನ್ನು ವಹಿಸುತ್ತದೆ.

ನೋಡಿದ್ರಲ್ಲ ಸ್ನೇಹಿತರೆ ಎರಡು ಚಿಕ್ಕ ವಸ್ತುಗಳು ನಮ್ಮ ದೇಹದಲ್ಲಿ ಎಷ್ಟೆಲ್ಲಾ ಒಳ್ಳೆಯ ಬದಲಾವಣೆಗಳನ್ನು ತರಬಹುದು ಎಂದು. ಅದಕ್ಕಾಗಿ ಪ್ರತಿನಿತ್ಯ ಇವೆರಡನ್ನು ಸೇವಿಸುತ್ತ ಬಂದರೆ ನಿಮ್ಮ ಜೀವನದಲ್ಲಿ ಹಾಗೂ ಆರೋಗ್ಯದಲ್ಲಿ ದೈಹಿಕವಾಗಿ ಉತ್ತಮ ಬದಲಾವಣೆಗಳನ್ನು ಕಾಣಲು ಸಾಧ್ಯ ಎಂದು ಈ ಮೂಲಕ ಹೇಳಲು ಹೊರಟಿದ್ದೇವೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ನಿಮ್ಮ ಅಭಿಪ್ರಾಯಗಳನ್ನು ಹಂಚಿಕೊಳ್ಳಿ.

Leave a Reply

Your email address will not be published. Required fields are marked *