Neer Dose Karnataka
Take a fresh look at your lifestyle.

ಹಿರಿಯ ನಟಿ ಸುಧಾರಾಣಿ ಅವರ ಮನೆಯನ್ನು ನೋಡಿದ್ದೀರಾ ಈ ತರ ಇರಬೇಕು ಮನೆ ಎಂದರೆ.

ನಮಸ್ಕಾರ ಸ್ನೇಹಿತರೇ ಅಲ್ಲಿನ ಚಿತ್ರರಂಗದಲ್ಲಿ ಸಾಕಷ್ಟು ನಟಿಮಣಿಯರು ಬಂದು ಹೋಗಿದ್ದಾರೆ. ಆದರೆ ಇಂದಿಗೂ ಸಹ ಕನ್ನಡಿಗರ ಮನಸ್ಸಿನಲ್ಲಿ ಉಳಿದುಕೊಂಡಿರುವುದು ತಮ್ಮ ಪ್ರತಿಭೆಯ ಮೂಲಕ ಜನರ ಮನಗೆದ್ದವರು ಮಾತ್ರ. ಅಂಥವರಲ್ಲಿ ಇಂದು ಒಬ್ಬರ ಕುರಿತಂತೆ ನಾವು ಮಾತನಾಡಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಅವರು ಆ ಕಾಲದಲ್ಲಿ ಹ್ಯಾಟ್ರಿಕ್ ಹೀರೋಯಿನ್ ಎಂದು ಬಿರುದನ್ನು ಪಡೆದ ನಟಿ.

ನೀವು ಕರೆಕ್ಟಾಗಿ ಗೆಸ್ ಮಾಡಿದ್ದೀರಿ ಸ್ನೇಹಿತರೆ ನಾವು ಮಾತನಾಡುತ್ತಿರುವುದು ಹ್ಯಾಟ್ರಿಕ್ ಹೀರೋಯಿನ್ ಎಂದೇ ಖ್ಯಾತಿಯಾಗಿರುವ ನಟಿ ಸುಧಾರಾಣಿ ಅವರ ಬಗ್ಗೆ. ಕನ್ನಡ ಚಿತ್ರರಂಗದಲ್ಲಿ ಬಾಲನಟಿಯಾಗಿ ಎಂಟ್ರಿ ಕೊಟ್ಟಿದ್ದ ಸುಧಾರಾಣಿ ಅವರು ಬಾಲನಟಿಯಾಗಿ ಮೊದಲು ನಟಿಸಿದ್ದು ಕಿಲಾಡಿ ಕಿಟ್ಟು ಎನ್ನುವ ಚಿತ್ರದಲ್ಲಿ. ನಂತರ ಪೂರ್ಣ ಪ್ರಮಾಣದ ನಟಿಯಾಗಿ ಪಾದಾರ್ಪಣೆ ಮಾಡಿದ್ದು ಶಿವಣ್ಣರವರ ಪಾದಾರ್ಪಣ ಚಿತ್ರವಾದ ಆನಂದ್ ಚಿತ್ರದಲ್ಲಿ.

ಆಗ ಅವರಿಗಿನ್ನೂ ಹದಿಮೂರು ವರ್ಷ ವಯಸ್ಸಾಗಿತ್ತು. ನಂತರ ಒಂದಾದ ಮೇಲೊಂದರಂತೆ ಕನ್ನಡ ಚಿತ್ರರಂಗದಲ್ಲಿ ಚಿತ್ರಗಳಲ್ಲಿ ನಟಿಸಿ ಸೂಪರ್ ಸ್ಟಾರ್ ನಟಿಯಾಗಿ ಕಾಣಿಸಿಕೊಂಡರು. ಕೇವಲ ಕನ್ನಡ ಚಿತ್ರರಂಗ ಮಾತ್ರವಲ್ಲದೆ ತಮಿಳು ತೆಲುಗು ಹಾಗೂ ಮಲಯಾಳಂ ಚಿತ್ರರಂಗದಲ್ಲಿ ಕೂಡ ಬಹು ಬೇಡಿಕೆಯ ನಟಿಯಾಗಿ ನಟಿಸಿದರು. ಆದರೂ ಸಹ ಬೇರೆಯವರಂತೆ ಅವರು ಕನ್ನಡವನ್ನು ಬಿಟ್ಟು ಹೋಗಲಿಲ್ಲ ಕನ್ನಡದಲ್ಲೇ ಪ್ರಮುಖ ನಟಿಯಾಗಿ ಕಾಣಿಸಿಕೊಂಡು ನಟಿಸುತ್ತಾ ಕನ್ನಡ ಚಿತ್ರರಂಗದಲ್ಲಿ ನೆಲೆಸಿದರು.

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ನಟಿ ಸುಧಾರಾಣಿ ಅವರು 20 ವರ್ಷಗಳ ನಟನಾ ಸೇವೆಯನ್ನು ಸಲ್ಲಿಸಿದ್ದಾರೆ. ಇನ್ನು ಕೂಡ ಕನ್ನಡಚಿತ್ರರಂಗದಲ್ಲಿ ಸಕ್ರಿಯರಾಗಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಬಿಡುಗಡೆಯಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಟನೆಯ ಯುವರತ್ನ ಚಿತ್ರದಲ್ಲಿ ಕೂಡ ಕಾಣಿಸಿಕೊಂಡಿದ್ದರು. ಇನ್ನು ಸುಧಾರಾಣಿ ಅವರ ವೈವಾಹಿಕ ಜೀವನ ಮತ್ತು ಅವರು ಈಗ ಇರುವ ಮನೆಯ ಬಗ್ಗೆ ತಿಳಿದುಕೊಳ್ಳುವುದಾದರೆ ಬನ್ನಿ ಸ್ನೇಹಿತರೇ ನಾವು ನಿಮಗೆ ವಿವರವಾಗಿ ಹೇಳುತ್ತೇವೆ.

ಹೌದು ಸ್ನೇಹಿತರೆ ಸುಧಾರಾಣಿ ಅವರು ಮೊದಲಿಗೆ 1996 ರಲ್ಲಿ ಸಂಜಯ್ ಅವರನ್ನು ಮದುವೆಯಾಗಿ ಎರಡು ವರ್ಷಗಳಲ್ಲೇ ಅವರಿಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿಬಂದು ಅವರಿಗೆ ವಿವಾಹ ವಿಚ್ಛೇದನವನ್ನು ನೀಡಿದರು. ನಂತರ ಗೋವರ್ಧನ್ ಎನ್ನುವ ಚಾರ್ಟೆಡ್ ಅಕೌಂಟೆಂಟ್ ಅನ್ನು 2000 ಯಲ್ಲಿ ವಿವಾಹವಾದರು ನಟಿ ಸುಧಾರಾಣಿ. ಇವರಿಗೆ ನಿಧಿಯಂಬ ಮಗಳು ಕೂಡ ಇದ್ದಾಳೆ. ಇನ್ನು ಇವರ ಮನೆ ಮಲ್ಲೇಶ್ವರ ಮಲ್ಲಿ ನಿರ್ಮಾಣ ಮಾಡಿದ್ದು ಸಾಕಷ್ಟು ಮರ ಗಿಡಬಳ್ಳಿಗಳನ್ನು ಈ ಮನೆಯ ಆವರಣ ಹೊಂದಿದೆ.

ಸಂಪೂರ್ಣ ಭಾರತೀಯ ಸಂಸ್ಕೃತಿಗೆ ಒಗ್ಗುವಂತೆ ನಿರ್ಮಿಸಿರುವ ಈ ಮನೆ ನೋಡಲು ಸಾಕಷ್ಟು ಸುಂದರವಾಗಿದೆ. ಪ್ರತಿಯೊಂದು ಸಾಂಸ್ಕೃತಿಕ ಕಲಾಕೃತಿಗಳನ್ನು ಮನೆಯಲ್ಲಿ ಅಲಂಕಾರಕ್ಕಾಗಿ ಇಡಲಾಗಿದ್ದು ಪ್ರಾಕೃತಿಕ ಟಚ್ ಕೂಡ ಈ ಮನೆಯ ಸುತ್ತಮುತ್ತಲೂ ಇದೆ. ಈ ಮನೆ ನೋಡಲು ತುಂಬಾ ಚೆನ್ನಾಗಿದ್ದು ಪರಿಸರದ ಕುರಿತಂತೆ ಇರುವ ಕಾಳಜಿಯನ್ನು ಕೂಡ ಈ ಮನೆ ಎಲ್ಲರಿಗೆ ತೋರಿಸುತ್ತದೆ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೇ ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Comments are closed.