Neer Dose Karnataka
Take a fresh look at your lifestyle.

ಯಾವ ಹೀರೋಯಿನ್ ಗೂ ಕಮ್ಮಿ ಇಲ್ಲ ಧ್ರುವ ಸರ್ಜಾ ರವರ ಪತ್ನಿ ಪ್ರೇರಣಾ ರವರ ತಂಗಿ?? ಹೇಗಿದ್ದಾರೆ ಗೊತ್ತಾ??

6

ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಸಾಕಷ್ಟು ನಟರು ವಿವಾಹವಾಗಿರುವುದು ನೀವು ನೋಡಿರುತ್ತೀರಿ ಹಾಗೂ ಸುದ್ದಿ ಮಾಧ್ಯಮಗಳಲ್ಲಿ ಕೇಳಿರುತ್ತೀರಿ. ಕೆಲವರು ಮನೆಯವರ ಒಪ್ಪಿಗೆ ಮಾಡಿರುವ ಹುಡುಗಿಯನ್ನು ಮದುವೆಯಾಗಿ ಅರೇಂಜ್ ಮ್ಯಾರೇಜ್ ಆದರೆ ಇನ್ನೂ ಕೆಲವರು ತಮ್ಮ ಇಷ್ಟಪಟ್ಟ ಹುಡುಗಿಯನ್ನು ಎಲ್ಲರ ಒಪ್ಪಿಗೆ ಮೇರೆಗೆ ಮದುವೆ ಆಗೋದು ನೀವು ನೋಡಿರುತ್ತೀರಿ.

ಇನ್ನು ನಮ್ಮ ಕನ್ನಡ ಚಿತ್ರರಂಗದಲ್ಲಿ ಇತ್ತೀಚಿನ ದಿನಗಳಲ್ಲಿ ಹೇಳುವುದಾದರೆ ಸರ್ಜಾ ಮನೆತನದ ಇಬ್ಬರು ಸಹೋದರರು ತಮ್ಮ ಜೀವನದ ಪ್ರೀತಿಸಿದ ಹುಡುಗಿಯನ್ನು ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು ಎಂಬುದು ನಿಮಗೆ ಗೊತ್ತೇ ಇದೆ. ಹೌದು ಸ್ನೇಹಿತರೆ ಅರ್ಥ ಚಿರು ಸರ್ಜಾ ಮೇಘನಾ ರಾಜ್ ಅವರನ್ನು ಪ್ರೀತಿಸಿ ಮದುವೆಯಾದರೆ ಇತ್ತ ತಮ್ಮ ಧ್ರುವ ಸರ್ಜಾ ಅವರು ಕಾಲೇಜು ದಿನಗಳಿಂದ ಪ್ರೀತಿಸುತ್ತಿದ್ದ ಪ್ರೇರಣಾ ಶಂಕರ್ ಅವರನ್ನು ಮದುವೆಯಾಗಿದ್ದರು. ಧ್ರುವ ಸರ್ಜಾ ಪ್ರೇರಣಾ ಶಂಕರ್ ರವರನ್ನು ಚಿಕ್ಕವಯಸ್ಸಿನಿಂದಲೂ ನೋಡಿಕೊಂಡು ಬಂದವರು.

ಸಣ್ಣ ಶಂಕರ್ ಅವರ ಮನೆ ಧ್ರುವ ಸರ್ಜಾ ರವರ ಎದುರುಗಡೆ ಇತ್ತು. ಚಿಕ್ಕವಯಸ್ಸಿನಿಂದಲೂ ಇಬ್ಬರಿಗೆ ಪರಸ್ಪರ ಪರಿಚಯ ಇತ್ತು ಈ ಪರಿಚಯ ಸ್ನೇಹಕ್ಕೆ ತಿರುಗಿ ಸ್ನೇಹ ಪ್ರೀತಿಗೆ ತಿರುಗಿತ್ತು. ಧ್ರುವ ಸರ್ಜಾ ಹಾಗೂ ಪ್ರೇರಣಾ ರವರ ಪ್ರೀತಿ ಎಲ್ಲರಿಗೂ ತಿಳಿದಿತ್ತಾದರೂ ಧ್ರುವ ಸರ್ಜಾ ಅವರು ಚಿತ್ರರಂಗದಲ್ಲಿ ಏನನ್ನಾದರೂ ಸಾಧಿಸಿದ ಮೇಲೆ ಮದುವೆಯಾಗುವ ಪ್ರಸ್ತಾಪವನ್ನಿಟ್ಟಿದ್ದರು. ಹಾಗೆಯೇ ದೃವಸರ್ಜಾ ರವರು ಮೊದಲಿಗೆ ಚಂದನ್ ಶೆಟ್ಟಿ ಅವರೊಂದಿಗೆ ಅವರ ಸಂಗೀತದ ತಂಡದೊಂದಿಗೆ ಕಾಣಿಸಿಕೊಂಡಿದ್ದರು. ನಂತರದ ದಿನಗಳಲ್ಲಿ ಹಲವಾರು ನಟನಾ ಸಂಸ್ಥೆಗಳೊಂದಿಗೆ ಕಾಣಿಸಿಕೊಂಡಿದ್ದರು.

ಈ ಸಂದರ್ಭ ನಿರ್ದೇಶಕ ಎಪಿ ಅರ್ಜುನ್ ರವರ ಕಣ್ಣಿಗೆ ಬಿದ್ದಂತಹ ದೃವಸರ್ಜಾ ರವರು ಅವರ ಮುಂದಿನ ಚಿತ್ರಕ್ಕೆ ನಾಯಕನಾಗುವ ಅವಕಾಶ ಅವರಿಗೆ ಒಲಿದು ಬಂದಿತ್ತು. ಕನ್ನಡದ ಮಾತ್ರವಲ್ಲದೆ ಇಡೀ ಭಾರತೀಯ ಚಿತ್ರರಂಗದಲ್ಲೇ ಅತ್ಯಂತ ಬಹುಬೇಡಿಕೆ ನಟನಾಗಿದ್ದ ಅವರ ಮಾವ ಅರ್ಜುನ್ ಸರ್ಜಾ ರವರ ಶಿಫಾರಸನ್ನು ಎಲ್ಲೂ ಕೂಡ ಮಾಡದೆ ಅವರು ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಧ್ರುವ ಸರ್ಜಾ ರವರು ಸರ್ಜಾ ಕುಟುಂಬದಿಂದ ಬಂದಿದ್ದರೂ ಸಹ ಯಾರ ಸಹಾಯವಿಲ್ಲದೆ ತಮ್ಮದೇ ಸ್ವಂತ ಪರಿಶ್ರಮದಿಂದ ಅದ್ದೂರಿ ಚಿತ್ರದ ಮೂಲಕ ಅದ್ದೂರಿಯಾಗಿ ಕಾಲಿಟ್ಟರು.

ನಂತರದ ದಿನಗಳಲ್ಲಿ ಕನ್ನಡ ಚಿತ್ರರಂಗದಲ್ಲಿ ಮೊದಲ ಮೂರು ಚಿತ್ರಗಳಲ್ಲಿ ಬ್ಯಾಕ್ ಟು ಬ್ಯಾಕ್ ಹಿಟ್ ಚಿತ್ರಗಳನ್ನು ಕೊಟ್ಟಂತಹ ನಟನಾಗಿ ಕಾಣಿಸಿಕೊಂಡರು. ನಂತರ ಕನ್ನಡ ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಪಟ್ಟವನ್ನು ಸಂಪಾದಿಸಿದ ನಂತರ 2018 ಡಿಸೆಂಬರ್ನಲ್ಲಿ ತಮ್ಮ ಬಹುಕಾಲದ ಗೆಳತಿ ಪ್ರೇರಣಾ ಶಂಕರ್ ರವರೊಂದಿಗೆ ಮದುವೆಯಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಇನ್ನು ಪ್ರೇರಣಾ ಶಂಕರ್ ರವರ ತಂಗಿ ಯಾರೆಂದು ಗೊತ್ತೇ.

ಹೌದು ಸ್ನೇಹಿತರೆ ಧ್ರುವಸರ್ಜಾ ರವರ ಪತ್ನಿ ಪ್ರೇರಣಾ ಶಂಕರ್ ಅವರ ತಂಗಿ ಹೆಸರು ಪ್ರಾರ್ಥನ ಎಂದು. ಈ ಮೇಲಿನ ಫೋಟೋ ನೋಡುತ್ತಿರುವಂತೆ ನಿಮಗೂ ಕೂಡ ಇವರು ತುಂಬಾ ಸುಂದರವಾಗಿದ್ದು ಕನ್ನಡ ಚಿತ್ರಗಳಲ್ಲಿ ನಟಿಸಬಹುದಾದ ಅರ್ಹತೆ ಇದೆ ಎಂಬುದು ತಿಳಿಯುತ್ತದೆ. ಇನ್ನೂ ಪ್ರಾರ್ಥನೆ ಆದವರು ಕೂಡ ಸರ್ಜಾ ಕುಟುಂಬಕ್ಕೆ ತುಂಬಾ ಹತ್ತಿರವಾದವರು ಚಿರು ಸರ್ಜಾ ರವರು ಇವರನ್ನು ತಮ್ಮ ಸ್ವಂತ ತಂಗಿಯಂತೆ ಚಿಕ್ಕವಯಸ್ಸಿನಿಂದ ಕಂಡುಕೊಂಡು ಬಂದವರು. ಮುಂಬರುವ ದಿನಗಳಲ್ಲಿ ಇವರು ಚಿತ್ರನಟಿ ಕಾಲಿಟ್ಟರು ಕೂಡ ಆಶ್ಚರ್ಯಪಡಬೇಕಾಗಿಲ್ಲ. ಈ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ನಮ್ಮ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ

Leave A Reply

Your email address will not be published.