Neer Dose Karnataka
Take a fresh look at your lifestyle.

ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸೇವೆ ಸಲ್ಲಿಸಿರುವ ನಟ ಅಭಿಜಿತ್ ರವರ ಮಗಳು ಹೇಗಿದ್ದಾರೆ ಗೊತ್ತೇ?? ಕುಟುಂಬ ಹೇಗಿದೆ ಗೊತ್ತೇ??

ನಮಸ್ಕಾರ ಸ್ನೇಹಿತರೇ ಕನ್ನಡ ಚಿತ್ರರಂಗದಲ್ಲಿ 90ರ ದಶಕದಲ್ಲಿ ಹಲವಾರು ನಟ-ನಟಿಯರು ಬಂದು ಹೋಗಿದ್ದಾರೆ. ಹೌದು ಸ್ನೇಹಿತರೆ ಕೆಲವರು ಹೀಗೆ ಬಂದು ಹಾಗೆ ಹೋದರೆ ಇನ್ನು ಕೆಲವರು ಇಂದಿಗೂ ಕೂಡ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಉಳಿದು ಕೊಂಡಿದ್ದಾರೆ ಕಾರಣ ಅವರ ವಿಶೇಷವಾದ ಪ್ರತಿಭೆ. ಇಂದು ನಾವು ಮಾತನಾಡಲು ಹೊರಟಿರುವುದು ನಟ ಅಭಿಜಿತ ಅವರ ಕುರಿತಂತೆ. ಹೌದು ಸ್ನೇಹಿತರೆ ನಟ ಅಭಿಜಿತ್ ರವರು ಕನ್ನಡ ಚಿತ್ರರಂಗಕ್ಕೆ 90ರ ದಶಕದಲ್ಲಿ ಖಳನಾಯಕನಾಗಿ ಪಾದರ್ಪಣೆ ಮಾಡುತ್ತಾರೆ.

ಇದಕ್ಕೂ ಮುನ್ನ ಹಾಗೂ ಇದು ಆದ ನಂತರವೂ ಕೂಡ ಕಿರುತೆರೆ ವಾಹಿನಿಯೊಂದರಲ್ಲಿ ನಿರೂಪಕರಾಗಿ ಕಾಣಿಸಿಕೊಂಡು ಆ ಕಾರ್ಯಕ್ರಮ ಕೂಡ ಸಾಕಷ್ಟು ಯಶಸ್ಸನ್ನು ಕಂಡಿತ್ತು. ಅಭಿಜಿತ್ ರವರು ಕನ್ನಡ ಚಿತ್ರರಂಗದಲ್ಲಿ ಹಲವಾರು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿರುವ ಸೂಪರ್ ಹಿಟ್ ಚಿತ್ರಗಳ ನಾಯಕ ಎಂದರೆ ತಪ್ಪಾಗಲಾರದು. ಸಾಹಸಸಿಂಹ ವಿಷ್ಣುವರ್ಧನ್ ನಟನೆಯ ಯಜಮಾನ ಚಿತ್ರದಲ್ಲಿ ಕೂಡ ಅವರು ನಟಿಸಿದ್ದು ಈ ಪಾತ್ರ ಸಾಕಷ್ಟು ಜನಮನ್ನಣೆಯನ್ನು ಕೂಡ ಪಡೆದುಕೊಂಡಿತ್ತು.

ಇನ್ನು ಇವರು ಇತ್ತೀಚಿನ ದಿನಗಳಲ್ಲಿ ಚಿತ್ರರಂಗದಲ್ಲಿ ಕಾಣಿಸಿಕೊಳ್ಳುತ್ತಿಲ್ಲ ವಾದರೂ ಕೂಡ ಪ್ರೇಕ್ಷಕರಿಗೆ ಇನ್ನೂ ಕೂಡ ಇವರ ನೆನಪಿದೆ ಎಂದು ಹೇಳಬಹುದಾಗಿದೆ. ಇನ್ನು ಅಭಿಜಿತ್ ರವರ ವೈವಾಹಿಕ ಜೀವನದ ಬಗ್ಗೆ ಬರುವುದಾದರೆ ಇವರು ರೋಹಿಣಿ ಎಂಬುವವರನ್ನು ಮದುವೆಯಾಗಿದ್ದಾರೆ. ಇನ್ನು ಇವರಿಗೆ ಮೂವರು ಮಕ್ಕಳಿದ್ದಾರೆ. ಬಾಲಾಜಿ ಕಾರ್ಥಿಕೆಯ ಹಾಗೂ ಶಿಲ್ಪ ಎಂಬ ಮಗಳು ಕೂಡ ಇದ್ದಾರೆ. ಮಗಳು ಶಿಲ್ಪಶ್ರೀ ಪ್ರತಿಷ್ಠಿತ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು ನೋಡಲು ಯಾವ ನಟಿಗೂ ಕಮ್ಮಿ ಇಲ್ಲದಂತೆ ಸೌಂದರ್ಯವತಿ ಯಾಗಿದ್ದಾರೆ. ಸದ್ಯಕ್ಕೆ ಇವರು ಮದುವೆಯಾಗಿದ್ದು ತಮ್ಮ ಸಂಸಾರದೊಂದಿಗೆ ಸುಖವಾಗಿ ಜೀವನ ನಡೆಸುತ್ತಿದ್ದಾರೆ.

Comments are closed.