Neer Dose Karnataka
Take a fresh look at your lifestyle.

ರಾಜ ರಾಣಿಯಲ್ಲಿ ಎಲ್ಲರ ಮುಖದಲ್ಲಿ ನಗು ಮೂಡಿಸುತ್ತಿರುವ ಪವನ್ ರವರ ತಂದೆ ಕನ್ನಡ ಚಿತ್ರರಂಗದ ಖ್ಯಾತ ನಟ ಯಾರು ಗೊತ್ತಾ??

9

ನಮಸ್ಕಾರ ಸ್ನೇಹಿತರೇ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಯಶಸ್ಸನ್ನು ಪಡೆದಿರುವ ಪ್ರತಿಭೆಗಳು ಕಿರುತೆರೆಯಲ್ಲಿ ಕೂಡ ಸಾಕಷ್ಟು ಅವಕಾಶ ಪಡೆದಿರುವುದು ನೀವು ನೋಡಿರಬಹುದು. ಕೇವಲ ಕಿರುತೆರೆಯ ದಾರವಾಹಿ ಹಾಗೂ ಸಿನಿಮಾ ನಟರಿಗೆ ಮಾತ್ರವಲ್ಲದೆ ಸಾಮಾಜಿಕ ಜಾಲತಾಣಗಳಲ್ಲಿ ಮನರಂಜನೆಯನ್ನೂ ನೀಡಿ ಯಶಸ್ವಿಯಾಗಿ ಇರುವವರಿಗೂ ಕೂಡ ಸಾಕಷ್ಟು ಸ್ಥಾನಮಾನಗಳು ಸಿಗುತ್ತಿವೆ. ಇನ್ನು ಲಾಕ್ಡೌನ್ ಸಂದರ್ಭದಲ್ಲಿಯೂ ಕೂಡ ಇದೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಮಾಡಿಕೊಂಡು ಅದೆಷ್ಟೋ ಜನರು ಕೆಲಸವಿಲ್ಲದಿದ್ದರೆ ತಮ್ಮ ಬದುಕನ್ನು ಕಟ್ಟಿಕೊಂಡು ಅಂತಹ ಉದಾಹರಣೆಗಳು ಕೂಡ ಇವೆ. ಹೌದು ಸ್ನೇಹಿತರೆ ಲಾಕ್ಡೌನ್ ಸಂದರ್ಭದಲ್ಲಿ ಈ ವಿಡಿಯೋ ಪ್ಲಾಟ್ಫಾರ್ಮ್ ಗಳು ಸಾಕಷ್ಟು ಜನರ ಬದುಕನ್ನು ಉಳಿಸಿದ್ದಾವೆ ಎಂದರೆ ತಪ್ಪಾಗಲಾರದು.

ಅದಕ್ಕೆ ಒಂದು ಸ್ಪಷ್ಟ ಉದಾಹರಣೆಯೆಂದರೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಜನಪ್ರಿಯರಾಗಿದ್ದ ರಘುರವರು ಬಿಗ್ ಬಾಸ್ ಗೆ ಆಯ್ಕೆಯಾಗುತ್ತಾರೆ. ಹೌದು ಸ್ನೇಹಿತರೆ ರಘುರವರು ಕನ್ನಡದ ಅತ್ಯಂತ ಶ್ರೀಮಂತ ಹಾಗೂ ದೊಡ್ಡ ರಿಯಾಲಿಟಿ ಶೋಗೆ ಆಯ್ಕೆಯಾಗಿದ್ದರು ಕೂಡ ಅದರ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂಬ ಮಾತಿದೆ. ಹೌದು ಸ್ನೇಹಿತರೆ ಸಾಮಾಜಿಕ ಜಾಲತಾಣಗಳಲ್ಲಿ ಮನೋರಂಜನಾತ್ಮಕ ವಿಡಿಯೋಗಳ ಮೂಲಕ ಎಲ್ಲರ ಮನವನ್ನು ರಂಜಿಸುತ್ತಿದ್ದ ರಘುರವರು ಬಿಗ್ ಬಾಸ್ ನಲ್ಲಿ ಸಂಪೂರ್ಣ ಸಪ್ಪೆಯಾಗಿ ಕುಳಿತಿದ್ದರು.

ಈ ಕಾರಣದಿಂದಾಗಿ ರಘುರವರು ಫೈನಲ್ ಗೆ ಬರಲು ಆಗಲಿಲ್ಲ ಎಂಬುದು ಮಾತಿದೆ. ಇನ್ನು ಇದೇ ಸಾಮಾಜಿಕ ಜಾಲತಾಣಗಳಲ್ಲಿ ಮನೋರಂಜನಾತ್ಮಕ ವಿಡಿಯೋಗಳನ್ನು ಪೋಸ್ಟ್ ಮಾಡುವುದರ ಮೂಲಕ ಜನಪ್ರಿಯರಾದವರು ಪವನ್ ರವರು. ಇದಕ್ಕಾಗಿಯೇ ಪವನ್ ರವರನ್ನು ಸಾಮಾಜಿಕ ಜಾಲತಾಣಗಳ ಮೂಲಕ ರಾಜ ರಾಣಿ ಕಾರ್ಯಕ್ರಮದಲ್ಲಿ ಆಹ್ವಾನಿಸಲಾಗಿದೆ. ಹೌದು ಸ್ನೇಹಿತರೆ ರಾಜ ರಾಣಿ ಕಾರ್ಯಕ್ರಮದಲ್ಲಿ ಪವನ್ ರವರು ಬಂದಿದ್ದ ದಿನದಿಂದಲೂ ಕೂಡ ತಮ್ಮ ಹಾಸ್ಯಾಸ್ಪದ ಮಾತುಗಳಿಂದ ಎಲ್ಲರ ಮುಖದಲ್ಲಿ ನಗು ತರಿಸಿದ್ದರು.

ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಯನ್ನು ಕೂಡ ಇದೇ ರೀತಿಯ ಮನೋರಂಜನಾತ್ಮಕ ವಿಡಿಯೋಗಳನ್ನು ಮಾಡುವುದರ ಮೂಲಕ ಜನಪ್ರಿಯರಾಗಿದ್ದು ಅಂತಹ ಪವನ್ ರವರು ಇಲ್ಲಿಯೂ ಕೂಡ ಎಲ್ಲರ ಮನಸ್ಸನ್ನು ಗೆಲ್ಲುತ್ತಾರೆ. ಇನ್ನು ಪವನ್ ರವರು ರಾಜ ರಾಣಿ ಕಾರ್ಯಕ್ರಮಕ್ಕೆ ತಮ್ಮ ಪತ್ನಿಯೊಂದಿಗೆ ಬಂದಿರುತ್ತಾರೆ. ಇನ್ನು ಇಬ್ಬರೂ ಕೂಡ ತಮ್ಮ ಜೀವನದಲ್ಲಿ ಹಲವಾರು ವಿಷಯಗಳನ್ನು ಇಲ್ಲಿ ಹಂಚಿಕೊಳ್ಳುತ್ತಾರೆ ಹಾಗೂ ಟಾಸ್ಕ್ ಗಳಲ್ಲಿ ಕೂಡ ಭಾಗಿಯಾಗುತ್ತಾರೆ. ಇನ್ನು ಪವನ್ ರವರು ನಮ್ಮ ತಂದೆ ಕುರಿತಂತೆ ಕೇಳಿದಾಗ ಸಾಕಷ್ಟು ಭಾವನಾತ್ಮಕವಾಗುತ್ತಾರೆ.

ಹೌದು ಸ್ನೇಹಿತರೇ ಪವನ್ ರವರ ತಂದೆ ಸಾಮಾನ್ಯರಲ್ಲ ಅವರು ಕೂಡ ಕನ್ನಡ ಚಿತ್ರರಂಗದ ಖ್ಯಾತ ಹಿರಿಯ ಕಲಾವಿದರು. ಹೌದು ಸ್ನೇಹಿತರೆ ಪವನ್ ರವರ ತಂದೆ ವೇಣು ರವರು. ವೇಣು ರವರನ್ನು ನೀವು ಸಾಹಸಸಿಂಹ ವಿಷ್ಣುವರ್ಧನ್ ರವರ ಕೋಟಿಗೊಬ್ಬ ಚಿತ್ರದ ಕಾಲೇಜ್ ಪ್ರಿನ್ಸಿಪಾಲ್ ಪಾತ್ರದಲ್ಲಿ ನೀವು ನೋಡಿರಬಹುದು. ಕನ್ನಡ ಚಿತ್ರರಂಗದ ಹಿರಿಯ ಕಲಾವಿದರಾಗಿದ್ದರು ಕೂಡ ತಮ್ಮ ತಂದೆ ವೇಣು ರವರು ಸಾಕಷ್ಟು ಕಷ್ಟ ಪಟ್ಟಿದ್ದರು ಎಂಬುದನ್ನು ಹೇಳುತ್ತಾ ಪವನ್ ರವರ ವೇದಿಕೆಯಲ್ಲಿ ಕಣ್ಣೀರಿಟ್ಟಿದ್ದಾರೆ.

ಇದಕ್ಕಿಂತಲೂ ಹೆಚ್ಚಾಗಿ ಪವನ್ ರವರ ಕೈಯ ಮೇಲೆ ವರ್ಷಗಳ ಹಿಂದೆಯಷ್ಟೇ ಅವರ ತಂದೆ ವೇಣು ರವರು ಇಹಲೋಕವನ್ನು ತ್ಯಜಿಸಿದ ವಿಷಯ ಕೂಡ ತಿಳಿಸಿದ್ದಾರೆ. ಇನ್ನು ವೇಣು ರವರು ತಮ್ಮ ಮಗನನ್ನು ಸಾಧಿಸಲಿಲ್ಲ ವೆಂಬ ಕೊ ರಗಿನಲ್ಲಿಯೇ ಇದ್ದರು. ಈಗ ಅವರು ಸಾಮಾಜಿಕ ಜಾಲತಾಣಗಳ ಮೂಲಕ ಜನಪ್ರಿಯರಾಗಿ ಇರುವುದನ್ನು ನೋಡಿದರೆ ಖಂಡಿತವಾಗಿಯೂ ನನ್ನ ಕುರಿತಂತೆ ಹೆಮ್ಮೆಪಡುತ್ತಿದ್ದಾರೆ ಎಂಬುದಾಗಿ ಹೇಳಿಕೊಂಡಿದ್ದಾರೆ. ಈ ಕಾರ್ಯಕ್ರಮವನ್ನು ನೀವು ಕೂಡ ನೋಡಿದ್ದೀರಾ ಸ್ನೇಹಿತರೆ ನೋಡಿದರೆ ಖಂಡಿತವಾಗಿಯೂ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ನಮ್ಮೊಂದಿಗೆ ತಪ್ಪದೆ ಹಂಚಿಕೊಳ್ಳಿ.

Leave A Reply

Your email address will not be published.