Neer Dose Karnataka
Take a fresh look at your lifestyle.

2007 ರಲ್ಲಿ ಮೊದಲ ವಿಶ್ವಕಪ್ ಆಡಿದ್ದ 8 ಆಟಗಾರರು 2021ರ ವಿಶ್ವಕಪ್ ಸಹ ಆಡುತ್ತಿದ್ದಾರೆ, ಅಷ್ಟು ವಯಸ್ಸಾದ ಆಟಗಾರರು ಯಾರ್ಯಾರು ಗೊತ್ತೆ??

ನಮಸ್ಕಾರ ಸ್ನೇಹಿತರೇ ನಿಮಗೆಲ್ಲಾ ತಿಳಿದಿರುವಂತೆ 2007ರಲ್ಲಿ ಐಸಿಸಿ ಮೊದಲ ಭಾರಿಗೆ ಟಿ 20 ವಿಶ್ವಕಪ್ ನ್ನು ಆಯೋಜಿಸಿತ್ತು. ಆಗಿನ್ನು ಟಿ 20 ಕ್ರಿಕೇಟ್ ಜನಪ್ರಿಯವಾಗಿರಲಿಲ್ಲ. ಆದರೇ 2007ರ ವಿಶ್ವಕಪ್ ಭಾರತ ಗೆದ್ದ ನಂತರ ಭಾರತದಲ್ಲಿ ಈ ಮಾದರಿ ಜನಪ್ರಿಯವಾಗತೊಡಗಿತು. ಐಪಿಎಲ್ ಶುರುವಾದ ನಂತರ ಮನೆಮನೆಯಲ್ಲಿಯೂ ಈ ಮಾದರಿ ಕ್ರಿಕೇಟ್ ವಿಶ್ವಾದ್ಯಂತ ಹೆಸರುಗಳಿಸಿತು. 2007 ರ ವಿಶ್ವಕಪ್ ನಲ್ಲಿ ತಮ್ಮ ದೇಶದ ಪರ ಪದಾರ್ಪಣೆ ಮಾಡಿದ್ದ ಎಂಟು ಆಟಗಾರರು 2021ರಲ್ಲಿಯೂ ಸಹ ಆ ದೇಶದ ಪರ ಆಡುತ್ತಿದ್ದಾರೆ. ಬನ್ನಿ ಈ ವಿಶೇಷ ಸಾಧನೆಗೈದಿರುವ ಆ ಎಂಟು ಆಟಗಾರರು ಯಾರು ಎಂಬುದನ್ನ ತಿಳಿಯೋಣ.

ಮೊದಲನೆಯದಾಗಿ ರೋಹಿತ್ ಶರ್ಮಾ – ಹಿಟ್ ಮ್ಯಾನ್ ಖ್ಯಾತಿಯ ರೋಹಿತ್, 2007 ರ ಟಿ 20 ವಿಶ್ವಕಪ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ಪದಾರ್ಪಣೆ ಮಾಡಿ, ಮೊದಲ ಪಂದ್ಯದಲ್ಲೇ ಅರ್ಧ ಶತಕ ಗಳಿಸಿದ್ದರು. ಸದ್ಯ ರೋಹಿತ್ ಒಬ್ಬರೇ ಮೊದಲ ವಿಶ್ವಕಪ್ ಗೆದ್ದ ಭಾರತ ತಂಡದ ಆಟಗಾರರಾಗಿದ್ದಾರೆ. ಎರಡನೆಯದಾಗಿ ಮಹಮದುಲ್ಲಾ – ಈಗಿನ ಬಾಂಗ್ಲಾದೇಶದ ಟಿ 20 ತಂಡದ ನಾಯಕ ಸಹ 2007ರ ವಿಶ್ವಕಪ್ ನಲ್ಲಿ ಆಡಿದ್ದರು. ಇನ್ನು ಮೂರನೆಯದಾಗಿ ಶಕೀಬ್ ಅಲ್ ಹಸನ್ – ಬಾಂಗ್ಲಾದೇಶದ ಆಲ್ ರೌಂಡರ್ ಸಹ 2007 ರ ವಿಶ್ವಕಪ್ ನಲ್ಲಿ ಬಾಂಗ್ಲಾ ತಂಡದ ಅವಿಭಾಜ್ಯ ಅಂಗವಾಗಿದ್ದರು.

ಇನ್ನು ಮುಷ್ಪಿಕುರ್ ರಹೀಮ್ – ಬಾಂಗ್ಲಾದೇಶದ ವಿಕೇಟ್ ಕೀಪರ್ ರಹೀಮ್ ಸಹ 2007 ರ ವಿಶ್ವಕಪ್ ನಲ್ಲಿ ಮೊದಲ ಭಾರಿಗೆ ಬಾಂಗ್ಲಾದೇಶ ತಂಡದಲ್ಲಿ ಸ್ಥಾನ ಪಡೆದಿದ್ದರು. ಇನ್ನು ಐದನೆಯದಾಗಿ ಕ್ರಿಸ್ ಗೇಲ್ – ಟಿ 20 ಕ್ರಿಕೇಟ್ ನಲ್ಲಿ ಯುನಿವರ್ಸಲ್ ಬಾಸ್ ಎನಿಸಿಕೊಂಡಿರುವ ಗೇಲ್ 2007ರ ಟಿ 20 ವಿಶ್ವಕಪ್ ನಲ್ಲಿ ಆಡಿದ್ದರು. ಇವರು 2021 ರ ಟಿ 20 ವಿಶ್ವಕಪ್ ನಲ್ಲಿ ವಿಂಡೀಸ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಅದೇ ತಂಡದಲ್ಲಿ ಆರನೆಯದಾಗಿ ಡ್ವೇನ್ ಬ್ರಾವೋ – ಆಲ್ ರೌಂಡರ್ ಬ್ರಾವೋ 2007 ರ ವಿಶ್ವಕಪ್ ನಲ್ಲಿಯೂ ಆಡಿದ್ದರು. 2021 ರ ವಿಶ್ವಕಪ್ ನಲ್ಲಿಯೂ ಸಹ ಆಡಲಿದ್ದಾರೆ. ಏಳನೆಯದಾಗಿ ರವಿ ರಾಮಪೌಲ್ – ಅಚ್ಚರಿ ಎಂಬಂತೆ 2007ರಲ್ಲಿ ವಿಶ್ವಕಪ್ ನಲ್ಲಿ ಆಡಿದ್ದ ರವಿ ರಾಮಪೌಲ್ 2021 ರ ಟಿ 20 ವಿಶ್ವಕಪ್ ನಲ್ಲಿ ಸಹ ಸ್ಥಾನ ಪಡೆದಿದ್ದಾರೆ. ಕೊನೆಯದಾಗಿ ಮಹಮದ್ ಹಫೀಜ್ – 40 ವರ್ಷದ ಪಾಕಿಸ್ತಾನ ತಂಡದ ಆಲ್ ರೌಂಡರ್ ಹಫೀಜ್ 2021 ರ ವಿಶ್ವಕಪ್ ಆಡುತ್ತಿರುವ ಹಿರಿಯ ಆಟಗಾರರಾಗಿದ್ದಾರೆ. 2007 ರ ವಿಶ್ವಕಪ್ ನಲ್ಲಿ ಪಾಕಿಸ್ತಾನ ತಂಡದ ಪ್ರಮುಖ ಆಟಗಾರರಾಗಿದ್ದರು. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ‌.

Comments are closed.