Neer Dose Karnataka
Take a fresh look at your lifestyle.

ಅಪ್ಪು ಇಲ್ಲ ಎಂದು ಗೊತ್ತಾದ ನಂತರ ದೊಡ್ಡ ಮನೆಯವರು ಯಾಕೆ ದುಃಖ ತೋರಿಸಿಕೊಳ್ಳಲಿಲ್ಲ ಗೊತ್ತಾ, ಶಿವಣ್ಣ ಕೂಡ ಮರೆಯಲ್ಲಿ ಕಣ್ಣೀರು ಹಾಕಿದ್ದು ಯಾಕೆ ಗೊತ್ತೇ???

ನಮಸ್ಕಾರ ಸ್ನೇಹಿತರೇ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ನಾವು ಕಳೆದುಕೊಂಡು ಬರೋಬ್ಬರಿ ಐದು ದಿನಗಳು ಕಳೆದಿವೆ. ಅವರನ್ನು ನಾವು ಕಳೆದುಕೊಂಡಿದ್ದೇವೆ ಎಂದು ಇಂದಿಗೂ ಕೂಡ ನಂಬಲು ಸಾಧ್ಯವಾಗುತ್ತಿಲ್ಲ. ಯಾಕೆಂದರೆ ಕನ್ನಡ ಚಿತ್ರರಂಗದಲ್ಲಿ ಅತ್ಯಂತ ಆರೋಗ್ಯಯುತವಾಗಿ ಇದ್ದಂತಹ ನಟರಲ್ಲಿ ಪುನೀತ್ ರಾಜಕುಮಾರ್ ಅವರು ಮೊದಲ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಿದ್ದರು.

ಆದರೆ ಕೇವಲ 46ನೇ ವಯಸ್ಸಿನಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರು ನಮ್ಮನ್ನೆಲ್ಲಾ ಅಗಲಿ ಹೋಗಿರುವುದು ನುಂಗಲಾರದ ತುತ್ತಾಗಿದೆ. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರನ್ನು ಕಳೆದುಕೊಂಡು ದೊಡ್ಮನೆ ಅವರು ಕಂಗಾಲಾಗಿದ್ದಾರೆ. ಹೌದು ಗೆಳೆಯರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡಿರುವ ದುಃಖ ಅವರಿಗಿದ್ದರೂ ಕೂಡ ಅಷ್ಟೊಂದು ಹೊರಗೆ ಹಾಕಿಲ್ಲ. ಹೌದು ಗೆಳೆಯರೇ ರಾಘಣ್ಣ ಶಿವಣ್ಣ ಎಲ್ಲರೂ ಕೂಡ ತಮ್ಮ ತಮ್ಮನನ್ನು ಕಳೆದುಕೊಂಡು ದುಃಖದಲ್ಲಿದ್ದರೂ ಕೂಡ ಸಾರ್ವಜನಿಕವಾಗಿ ಅತ್ತು ರಂಪಾಟ ಮಾಡಿಲ್ಲ.

ಹೌದು ಗೆಳೆಯರೆ ದೊಡ್ಡ ಮನೆಯವರು ಬಂದವರೆಲ್ಲರಿಗೂ ಸಮಾಧಾನ ಮಾಡುವಲ್ಲಿ ನಿರತರಾಗಿದ್ದರು. ಇನ್ನು ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕೊನೆಯ ಬಾರಿ ನೋಡಲು 25 ಲಕ್ಷಕ್ಕೂ ಅಧಿಕ ಮಂದಿ ಕಂಠೀರವ ಸ್ಟೇಡಿಯಂನಲ್ಲಿ ಬಂದಿರುವ ವಿಷಯ ನಿಮಗೆಲ್ಲ ಗೊತ್ತೇ ಇದೆ. ಈ ಹಿಂದೆ ಅಣ್ಣಾವ್ರು ನಿಧನರಾಗಿದ್ದಾಗ ದೊಡ್ಡ ಮನೆಯವರು ಭಾವೋದ್ವೇಗಕ್ಕೆ ಒಳಗಾಗಿ ಎಲ್ಲಾ ಕಡೆ ಅತ್ತಿದ್ದರು. ಇದನ್ನು ಕಂಡಂತಹ ಅಭಿಮಾನಿಗಳು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಹಾನಿಗೆ ಒಳಗಾಗುವಂತೆ ಮಾಡಿದ್ದರು.

ಆದ್ದರಿಂದ ಈ ಬಾರಿ ಕೂಡ ನಾವು ಅತ್ತರೆ ಅವರನ್ನು ನೋಡಲು ಬಂದಿರುವ ಲಕ್ಷಾಂತರ ಜನರು ಭಾವೋದ್ವೇಗಕ್ಕೆ ಒಳಗಾಗಿ ಏನಾದರೂ ನಡೆಯಬಹುದು ಎಂಬ ಕಾರಣದಿಂದಾಗಿ ರಾಜಣ್ಣನವರು ಈ ಮೊದಲೇ ಮನೆಯವರೆಲ್ಲರಿಗೂ ಕೂಡ ಸೂಚಿಸಿದರು. ಹೌದು ಗೆಳೆಯರೇ ನೀವು ಶಿವಣ್ಣನವರನ್ನು ಕುಸಿದು ಬಿದ್ದಿರುವುದನ್ನು ನೋಡಿರಬಹುದು ಆದರೆ ಅವರು ಹೆಚ್ಚಾಗಿ ಕೊನೆಯ ದರ್ಶನದಲ್ಲಿ ಅತ್ತಿರಲಿಲ್ಲ ಎಲ್ಲರನ್ನೂ ಸಮಾಧಾನ ಮಾಡುತ್ತಿದ್ದರು ಇದಕ್ಕೆ ಮುಖ್ಯ ಕಾರಣ ನಾವು ಮೇಲೆ ಹೇಳಿದ ಕಾರಣ.

ಇನ್ನು ಅಪ್ಪು ಅವರನ್ನು ಆಸ್ಪತ್ರೆಯಿಂದ ಮನೆಗೆ ಕರೆತಂದ ಮೇಲೆ ಎಲ್ಲರೂ ಕೂಡ ಕಣ್ಣೀರ ಹೊಳೆ ಹರಿಯುವಂತೆ ಅತ್ತಿದ್ದರು. ದೊಡ್ಡ ಮನೆಯವರು ಅನ್ನೋದು ಇದಕ್ಕೆ ನಾಲ್ಕು ಗೋಡೆ ಮಧ್ಯ ತಮ್ಮ ತಮ್ಮನನ್ನು ಕಳೆದುಕೊಂಡಿರುವ ದುಃಖವನ್ನು ತೋಡಿಕೊಂಡಿದ್ದಾರೆ ಆದರೆ ಹೊರಗೆ ಎಲ್ಲೂ ಕೂಡ ಜೋರಾಗಿ ಅಳದೆ ಬಂದವರನ್ನು ಸಂತೈಸಿ ಪರಿಸ್ಥಿತಿಯನ್ನು ಹದವಾಗಿಡಲು ಎಲ್ಲ ಪ್ರಯತ್ನಗಳನ್ನು ಕೂಡ ಮಾಡಿದ್ದಾರೆ.

ದೊಡ್ಡ ಮನೆಯವರು ಈ ದೊಡ್ಡತನ ತೋರಿದಕ್ಕಾಗಿ ಎಲ್ಲಾ ಕಾರ್ಯಕ್ರಮಗಳು ಕೂಡ ಸುಸೂತ್ರವಾಗಿ ನಡೆದು ಹೋಗಿದೆ. ಒಂದು ವೇಳೆ ದೊಡ್ಡ ಮನೆಯವರು ಕೂಡ ಅಭಿಮಾನಿಗಳೊಂದಿಗೆ ಅಳುತ್ತಿದ್ದರೆ ಅಲ್ಲಿ ಅಭಿಮಾನಿಗಳು ಭಾವೋ’ದ್ವೇ’ಗಕ್ಕೆ ಒಳಗಾಗಿ ಪರಿಸ್ಥಿತಿಯನ್ನು ಯಾರು ಕೂಡ ನಿಯಂತ್ರಿಸಲಾಗದ ಮಟ್ಟಕ್ಕೆ ಹೋಗಿರುತ್ತಿತ್ತು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ ಅಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Comments are closed.