ವೇದಿಕೆ ಮೇಲೆ ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆ ಎಂದ ವಿಶಾಲ್ ಈಗ ಮಾಡಿರುವುದೇನು ಗೊತ್ತೇ?
ನಮಸ್ಕಾರ ಸ್ನೇಹಿತರೇ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರನ್ನು ಕಳೆದುಕೊಂಡ ನಂತರ ಕೇವಲ ಕನ್ನಡಿಗರಿಗೆ ಮಾತ್ರವಲ್ಲದೆ ಅವರು ಸಂಪಾದಿಸಿದಂತಹ ಎಲ್ಲಾ ಕಡೆಯ ಸ್ನೇಹಿತರು ಹಾಗೂ ಅಭಿಮಾನಿಗಳಿಗೂ ಕೂಡ ಸಾಕಷ್ಟು ದುಃಖವುಂಟು ಮಾಡಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಪರಭಾಷಾ ಚಿತ್ರಗಳ ಸ್ಟಾರ್ ನಟರಾದ ಜೂನಿಯರ್ ಎನ್ಟಿಆರ್ ಅಲ್ಲು ಅರ್ಜುನ್ ವಿಜಯ್ ದೇವರಕೊಂಡ ವಿಶಾಲ್ ಹೀಗೆ ಹಲವಾರು ಜನರ ಸ್ನೇಹವನ್ನು ಸಂಪಾದಿಸಿದರು.
ಎಲ್ಲರೂ ಕೂಡ ಪುನೀತ್ ರಾಜಕುಮಾರ್ ಅವರನ್ನು ತಮ್ಮ ಸಹೋದರ ಎಂಬಂತೆ ಭಾವಿಸಿ ಗೌರವವನ್ನು ನೀಡುತ್ತಿದ್ದರು. ಇನ್ನು ಮೊನ್ನೆ ನಡೆದ ಪುನೀತ್ ನಮನ ಕಾರ್ಯಕ್ರಮದಲ್ಲಿ ಕೂಡ ವಿಶಾಲ್ ಅವರು ಆಗಮಿಸಿದ್ದರು. ಈ ಹಿಂದೆ ಪುನೀತ್ ರಾಜಕುಮಾರ್ ಅವರು ನೋಡಿಕೊಳ್ಳುತ್ತಿದ್ದ 1800 ಮಕ್ಕಳ ಜವಾಬ್ದಾರಿಯನ್ನು ತಾನು ವಹಿಸಿಕೊಳ್ಳುವುದಾಗಿ ವಿಶಾಲ್ ಅವರು ಹೇಳಿದ್ದರು. ಇನ್ನು ಪುನೀತ್ ನಮನ ಕಾರ್ಯಕ್ರಮದಲ್ಲಿ ಕೂಡ ವಿಶಾಲ್ ರವರು ಇದೇ ವಿಚಾರವಾಗಿ ಮಾತನಾಡುತ್ತಾರೆ. ನಾನು ಯಾವುದೋ ಪ್ರಚಾರಕ್ಕೆ ಇಲ್ಲ ಕೆಟ್ಟ ಉದ್ದೇಶಕ್ಕೆ ಈ ಕೆಲಸವನ್ನು ಮಾಡಲು ಹೇಳಿಲ್ಲ. ಪುನೀತ್ ಅವರ ಸಹೋದರನಾಗಿ ಅವರು ಮಾಡಿಕೊಂಡು ಬರುತ್ತಿದ್ದ ಇಂತಹ ಒಳ್ಳೆಯ ಕಾರ್ಯ ನಿಲ್ಲಬಾರದು ಹಾಗೂ ನನ್ನಿಂದ ಏನಾದರೂ ಇದಕ್ಕೆ ಸಹಾಯ ಮಾಡಬೇಕೆಂಬ ಉದ್ದೇಶದಿಂದ ಇದನ್ನು ಮಾಡಲು ಹೊರಟಿದ್ದೇನೆ ಎಂಬುದಾಗಿ ಹೇಳಿದ್ದಾರೆ.
ನನ್ನ ಬಳಿಯೂ ಕೂಡ ತುಂಬಾ ಹಣ ಏನು ಇಲ್ಲ ಒಂದು ಲೆಕ್ಕದಲ್ಲಿ ಹೇಳುವುದಾದರೆ ಇನ್ನೂ ಕೂಡ ನಾನು ನನ್ನ ತಂದೆ ಕಟ್ಟಿಸಿರುವ ಮನೆಯಲ್ಲೇ ಇದ್ದೇನೆ ಒಂದು ಮನೆಯನ್ನು ಕೂಡ ಕಟ್ಟಲು ಸಾಧ್ಯವಾಗಿಲ್ಲ. ಆದರೆ ಆ ಮನೆಯನ್ನು ಕಟ್ಟಿಸಲು ಕೂಡಿಟ್ಟಿರುವ ಹಣದಲ್ಲಿ ಮಕ್ಕಳ ಜವಾಬ್ದಾರಿಯನ್ನು ನಾನು ಹೊತ್ತುಕೊಳ್ಳಬೇಕು ಎಂಬ ಆಸೆಯಲ್ಲಿ ಇದ್ದೇನೆ ಎಂಬುದಾಗಿ ಹೇಳಿದ್ದಾರೆ. ಇದಾದ ನಂತರ ಕೇವಲ ಮಾತಿಗೆ ಮಾತ್ರವಲ್ಲದೆ ನಿಜವಾಗಿಯೂ ಕೂಡ ಈ ಕೆಲಸವನ್ನು ಕಾರ್ಯರೂಪಕ್ಕೆ ತರಬೇಕು ಎಂಬುದಾಗಿ ವಿಶಾಲ ರವರು ಎರಡು ದಿನಗಳ ಕಾಲ ಬೆಂಗಳೂರಿನಲ್ಲಿ ಇದ್ದರು. ಶಿವಣ್ಣ ಹಾಗೂ ಪುನೀತ್ ನಿವಾಸಕ್ಕೆ ಹೋಗಿ ಈ ಕುರಿತಂತೆ ಕಾರ್ಯವನ್ನು ಕಾರ್ಯರೂಪಕ್ಕೆ ತರಲು ಹಾಗೂ ಅನುಮತಿಯನ್ನು ಕೂಡ ಕೇಳಿದ್ದಾರೆ. ಇನ್ನು ಶಿವಣ್ಣನವರು ಎಲ್ಲಿ ಎಷ್ಟು ಅಗತ್ಯ ಇದೆ ಎಂಬುದನ್ನು ಪರಿಶೀಲಿಸಿ ಮುಂದಿನ ದಿನಗಳಲ್ಲಿ ಹೇಳುತ್ತೇವೆ ಎಂಬುದಾಗಿ ವಿಶಾಲ್ ರವರಿಗೆ ತಿಳಿಸಿದ್ದಾರಂತೆ. ವಿಶಾಲ್ ರವರ ಈ ಕಾರ್ಯಕ್ಕೆ ಸಲ್ಯೂಟ್ ಹೇಳಲೇಬೇಕು.
Comments are closed.