Neer Dose Karnataka
Take a fresh look at your lifestyle.

ನಾರ್ಮಲ್ ಡೆಲಿವರಿಯ ಮೂಲಕ ಮಕ್ಕಳನ್ನು ಪಡೆದು ಇಂದಿಗೂ ಕೂಡ ಯಂಗ್ ಆಗಿ ಕಾಣುವ ಸ್ಟಾರ್ ನಟಿಯರು ಯಾರು ಗೊತ್ತಾ??

6

ನಮಸ್ಕಾರ ಸ್ನೇಹಿತರೇ ಇಂದು ನಾವು ಬಾಲಿವುಡ್ ಚಿತ್ರರಂಗದ ಕುರಿತಂತೆ ಕೆಲವೊಂದು ವಿಶೇಷವಾದ ಮಾಹಿತಿಯನ್ನು ಹೇಳಲು ಹೊರಟಿದ್ದೇವೆ. ನಮ್ಮ ಬಾಲಿವುಡ್ ಚಿತ್ರರಂಗದಲ್ಲಿ ಕೆಲ ನಟಿಯರು ಗರ್ಭಿಣಿಯರಾದಾಗ ತಮ್ಮ ಸೌಂದರ್ಯ ಹಾಳಾಗಬಾರದೆಂದು ಮಕ್ಕಳನ್ನು ಸಿಸೇರಿಯನ್ ಮೂಲಕ ಪಡೆಯುತ್ತಾರೆ. ಹೆಚ್ಚಿನ ನಟಿಯರು ಇದೇ ಮಾರ್ಗವನ್ನು ಅನುಸರಿಸುತ್ತಾರೆ.

ಆದರೆ ಬಾಲಿವುಡ್ ಚಿತ್ರರಂಗದಲ್ಲಿ ಕೆಲ ನಟಿಯರು ಸ್ವಾಭಾವಿಕ ಹೆರಿಗೆಯನ್ನು ಕೂಡ ಮಾಡಿಸಿಕೊಂಡಿದ್ದಾರೆ ಆದರೂ ಕೂಡ ಇಂದಿಗೂ ಚಿರ ಯುವತಿಯಂತೆ ಕಾಣುತ್ತಿದ್ದಾರೆ. ಸ್ವಾಭಾವಿಕ ಹೆರಿಗೆಯನ್ನು ಮಾಡಿಸಿಕೊಂಡು ಇಂದಿಗೂ ಕೂಡ ಸೌಂದರ್ಯ ವತಿಯರಾಗಿರುವ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯರ ಕುರಿತಂತೆ ನಾವು ನಿಮಗೆ ಇಂದು ಹೇಳಲು ಹೊರಟಿದ್ದೇವೆ. ತಪ್ಪದೇ ಕೊನೆಯವರೆಗೆ ಓದಿ.

ಐಶ್ವರ್ಯ ರೈ ಬಚ್ಚನ್ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿರುವ ಐಶ್ವರ್ಯ ರೈ ಬಚ್ಚನ್ ತಮ್ಮ ಮಗಳು ಆರಾಧ್ಯಾ ರವರಿಗೆ 2011 ರಲ್ಲಿ ಜನ್ಮ ನೀಡುವಾಗ ನಾರ್ಮಲ್ ಡೆಲಿವರಿ ಯನ್ನೇ ಮಾಡಿಸಿಕೊಂಡಿದ್ದರು. ಇನ್ನು ಈಗ ನಿಮಗೆಲ್ಲ ತಿಳಿದಿರುವಂತೆ ಅವರು 40ಕ್ಕಿಂತ ಅಧಿಕ ವಯಸ್ಸಾಗಿದ್ದರೂ ಕೂಡ ಇಪ್ಪತ್ತರ ಹರೆಯದ ಯುವತಿಯಂತೇ ಕಾಣಿಸುತ್ತಿದ್ದಾರೆ.

ರವೀನಾ ಟಂಡನ್ ತಮ್ಮ ಗ್ಲಾಮರಸ್ ನಟನೆಯ ಮೂಲಕ ಬಾಲಿವುಡ್ ಮಂದಿಯ ಮನ ಗೆದ್ದಂತಹ ನಟಿ ರವೀನ ತಂಡನ್ ಕೂಡ ತನ್ನ ಮಕ್ಕಳನ್ನು ಪಡೆದಿದ್ದು ನಾರ್ಮಲ್ ಡೆಲಿವರಿ ಮೂಲಕ. ಇಷ್ಟು ಮಾತ್ರವಲ್ಲದೆ ಇಂದಿಗೂ ಕೂಡ ಯಾವ ಸ್ಟಾರ್ ನಟಿ ಕೂಡ ಕಮ್ಮಿ ಇಲ್ಲದಂತೆ ಸೌಂದರ್ಯವತಿ ಯಾಗಿದ್ದಾರೆ. ಟ್ವಿಂಕಲ್ ಖನ್ನಾ ತಮ್ಮ ಪತಿ ಅಕ್ಷಯ್ ಕುಮಾರ್ ಅವರಂತೆ ಫಿಟ್ ಹಾಗೂ ಫೈನ್ ಆಗಿರುವ ಟ್ವಿಂಕಲ್ ಕನ್ನಡ ರವರು ಕೂಡ ತಮ್ಮ ಮಗಳಿಗೆ ಜನ್ಮ ನೀಡಿದ್ದು ಸಹಜ ಹೆರಿಗೆ ಮೂಲಕ. ಇಂದಿಗೂ ಕೂಡ ಬ್ಯೂಟಿಫುಲ್ ಆಗಿದ್ದಾರೆ.

ಮೀರಾ ರಾಜಪೂತ್ ಮೀರಾ ರಾಜಪೂತ್ ನಟಿ ಅಲ್ಲದಿದ್ದರೂ ಕೂಡ ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಶಾಹಿದ್ ಕಪೂರ್ ಅವರ ಧರ್ಮಪತ್ನಿ. ಚಿಕ್ಕ ವಯಸ್ಸಿಗೆ ಮದುವೆ ಆಗಿ ಸ್ವಾಭಾವಿಕ ಹೆರಿಗೆಯಲ್ಲಿ ಮಕ್ಕಳನ್ನು ಪಡೆದರು. ಇಂದಿಗೂ ಕೂಡ ತಮ್ಮ ಸೌಂದರ್ಯವನ್ನು ಮೈನ್ಟೈನ್ ಮಾಡಿಕೊಂಡು ಬಂದಿದ್ದಾರೆ. ತಾರಾ ಶರ್ಮ ದ ತಾರ ಶರ್ಮಾ ಶೋ ಎಂಬ ಹೆರಿಗೆ ಸಂಬಂಧಿತ ಕಾರ್ಯಕ್ರಮಗಳನ್ನು ನಡೆಸುವ ತಾರ ಶರ್ಮರವರು ಕೂಡ ತಮ್ಮ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದು ನಾರ್ಮಲ್ ಡೆಲಿವರಿ ಮೂಲಕ.

ಸುಜೈನ್ ಖಾನ್ ಬಾಲಿವುಡ್ ಚಿತ್ರರಂಗದ ಸ್ಟಾರ್ ನಟರ ತಿಕ್ ರೋಷನ್ ರವರ ಪತ್ನಿ ಸುಜೈನ್ ಖಾನ್ ಕೂಡ ತಮ್ಮ ಇಬ್ಬರು ಮಕ್ಕಳಿಗೆ ಜನ್ಮ ನೀಡಿದ್ದು ಸ್ವಾಭಾವಿಕ ಹೆರಿಗೆಯ ಮೂಲಕವೇ. ಕಲ್ಕಿ ಕೊಚ್ಲಿನ್ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿಯಾಗಿರುವ ಕಲ್ಕಿ ಕೋಚ್ಲಿನ್ ರವರು ಕೂಡ ಸ್ವಾಭಾವಿಕ ಅದರಲ್ಲೂ ಕೂಡ ಬಿಸಿನೀರಿನ ಹೆರಿಗೆಯ ಮೂಲಕ ತಮ್ಮ ಮಗಳಿಗೆ ಜನ್ಮ ನೀಡಿದ್ದಾರೆ. ನೋಡಿದ್ರಲ್ಲ ಗೆಳೆಯರೆ ಬಾಲಿವುಡ್ ಚಿತ್ರರಂಗದಲ್ಲಿ ಯಾವೆಲ್ಲ ಸ್ಟಾರ್ ನಟಿಯರು ಸ್ವಾಭಾವಿಕ ಹೆರಿಗೆ ಮೂಲಕ ತಮ್ಮ ಮಕ್ಕಳಿಗೆ ಜನ್ಮ ನೀಡಿ ಇಂದಿಗೂ ಕೂಡ ಸೌಂದರ್ಯವತಿ ಆಗಿದ್ದಾರೆ ಎಂಬುದನ್ನು. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ ಮಾಡುವ ಮೂಲಕ ಹಂಚಿಕೊಳ್ಳಿ.

Leave A Reply

Your email address will not be published.