ಇಷ್ಟು ದಿವಸ ಸುಮ್ಮನಿದ್ದು ಇದ್ದಕ್ಕಿದ್ದ ಹಾಗೆ ಅಪ್ಪು ಸಾವಿಗೆ ಕಾರಣವನ್ನು ತಿಳಿಸಿದ ರಾಘಣ್ಣ, ಒಮ್ಮೆಲೇ ಮಾಧ್ಯಮದ ಮುಂದೆ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಎಷ್ಟೇ ಹೇಳಿದರು ಎಷ್ಟೇ ನೆನಪು ಮಾಡಿಕೊಂಡರು ಕೂಡ ದೈಹಿಕವಾಗಿ ನಮ್ಮನ್ನು ಅಕಾಲಿಕವಾಗಿ ಅಗಲಿ ಹೋಗಿರುವ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರು ಮತ್ತೆ ವಾಪಸ್ಸು ಬರುವುದು ಸಾಧ್ಯವೇ ಇಲ್ಲ. ಆದರೂ ಕೂಡ ಅಷ್ಟೊಂದು ಆರೋಗ್ಯವಂತರಾಗಿದ್ದ ಅವರಿಗೆ ಹೀಗೆ ಯಾಕಾಯಿತು ಎಂಬುದನ್ನು ಪ್ರತಿನಿತ್ಯ ದೇವರಿಗೆ ಶಪಿಸುವುದನ್ನು ಮಾತ್ರ ಜನರು ಇನ್ನೂ ಕೂಡ ಬಿಟ್ಟಿಲ್ಲ.
ಇನ್ನು ಪುನೀತ್ ರಾಜಕುಮಾರ್ ರವರ ಮರಣಾನಂತರದ ಎಲ್ಲ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ವಿಧಿವಿಧಾನಗಳು ಪೂರ್ಣವಾಗಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಕೂಡ ಹಲವಾರು ಗಣ್ಯರ ಸಮ್ಮುಖದಲ್ಲಿ ಪುನೀತ್ ನಮನ ಎಂಬ ಗೀತನಮನ ಕಾರ್ಯಕ್ರಮವನ್ನು ಕೂಡ ಆಯೋಜಿಸಿತ್ತು. ಈ ಸಂದರ್ಭದಲ್ಲಿ ಕರ್ನಾಟಕದ ಅತ್ಯುನ್ನತ ಪ್ರಶಸ್ತಿಯಾದ ಕರ್ನಾಟಕ ರತ್ನವನ್ನು ಮಾನ್ಯ ಮುಖ್ಯಮಂತ್ರಿಗಳು ಆಗಿರುವ ಶ್ರೀ ಬಸವರಾಜ ಬೊಮ್ಮಾಯಿ ರವರು ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರವಾಗಿ ಘೋಷಿಸಿದ್ದಾರೆ. ಇನ್ನು ಇತ್ತೀಚೆಗೆ ನಡೆದಿರುವ ಟೆಲಿವಿಷನ್ ಅಸೋಸಿಯೇಷನ್ ನಲ್ಲಿ ನಡೆದಿರುವ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಜಣ್ಣನವರು ಪುನೀತ್ ರಾಜಕುಮಾರ್ ಅವರ ಕುರಿತಂತೆ ಮಾತನಾಡಿದರು.
ಆ ಸಮಯದಲ್ಲಿ ಆತನ ಬಳಿ ಕೋಟ್ಯಾಂತರ ರೂಪಾಯಿ ಹಣ ಇತ್ತು ಆಸ್ತಿ ಇತ್ತು 6-7 ಕಾರಿತ್ತು ಪಕ್ಕದಲ್ಲಿ ನಾವು ಇದ್ದವಾದರೂ ಕೂಡ ಆತನಿಗೆ 46 ವರ್ಷದ ನಂತರ ನಾಲ್ಕು ನಿಮಿಷ ಹೆಚ್ಚಿಗೆ ಬದುಕಲು ಕೂಡ ಅವಕಾಶ ಸಿಕ್ಕಲಿಲ್ಲ. ಅತಿವೇಗವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ನೋಡಿದರೂ ಕೂಡ 4 ನಿಮಿಷ ಮುಂಚೆ ಆಸ್ಪತ್ರೆಗೆ ಹೋಗಿದ್ದರೆ ಆತ ಬದುಕುಳಿಯುತ್ತಿದ್ದ ಎಂದರು. ಬೆಂಗಳೂರಿನಲ್ಲಿ ರಸ್ತೆಗಳು ಇನ್ನೂ ಅಗಲ ವಾಗಬೇಕು ಹಾಗೂ ಟ್ರಾಫಿಕ್ ರಹಿತವಾಗಿರಬೇಕು ಎಂಬುದಾಗಿ ಕೂಡ ಈ ಸಂದರ್ಭದಲ್ಲಿ ರಾಘಣ್ಣನವರು ಅಭಿಪ್ರಾಯಪಟ್ಟಿದ್ದಾರೆ. ಬಹುಶಃ ಟ್ರಾಫಿಕ್ ಇದ್ದ ಕಾರಣ ಪುನೀತ್ ರಾಜಕುಮಾರ್ ಅವರು ಬೇಗ ತಲುಪಲು ಸಾಧ್ಯವಾಗಲಿಲ್ಲ ಎಂದು ಅವರು ಪರೋಕ್ಷವಾಗಿ ಹೇಳಿದ್ದಾರೆ.
Comments are closed.