ಅಪ್ಪಟ ಕನ್ನಡತಿಯಾಗಿ ಹೆಸರು ಮಾಡಿರುವ ಅದಿತಿ ಪ್ರಭುದೇವ ರವರಿಗೆ ಕೈಕೊಟ್ಟ ಕನ್ನಡಿಗರು. ಬೇಸರದಿಂದ ನಟಿ ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ಇದೇ ಡಿಸೆಂಬರ್ 17ರಂದು ಹಲವಾರು ಪರಭಾಷಾ ಚಿತ್ರಗಳು ಬಿಡುಗಡೆಯಾಗಿ ರುವುದು ಎಲ್ಲರಿಗೂ ತಿಳಿದಿದೆ. ಆದರೆ ನಮ್ಮದೇ ಕನ್ನಡ ಸಿನಿಮಾ ಒಂದು ಬಿಡುಗಡೆ ಆಗಿರುವುದು ಯಾರಿಗೂ ಕೂಡ ತಿಳಿದಿಲ್ಲ. ಹೌದು ನಾವು ಮಾತನಾಡಲು ಹೊರಟಿರುವುದು ನಟಿ ಅದಿತಿ ಪ್ರಭುದೇವ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆನ ಚಿತ್ರದ ಕುರಿತಂತೆ. ಡಿಸೆಂಬರ್ 17ರಂದು ಅಲ್ಲು ಅರ್ಜುನ್ ನಟನೆಯ ಪುಷ್ಪ ಮೋಹನ್ ಲಾಲ್ ನಟನೆಯ ಮರಕ್ಕರ್ ಸೈಫ್ ಅಲಿ ಖಾನ್ ನಟನೆಯ ಬಂಟಿ ಔರ್ ಬಬ್ಲಿ ಚಿತ್ರಗಳು ಬಿಡುಗಡೆ ಆಗಿರುವುದರ ನಡುವೆ ಕೆಲವು ಕನ್ನಡ ಚಿತ್ರಗಳು ಕೂಡ ಬಿಡುಗಡೆಯಾಗಿದ್ದವು.
ಆದರೆ ನಮ್ಮ ಉದಾರ ಮನಸ್ಸಿನ ಕನ್ನಡಿಗರು ಕನ್ನಡ ಚಿತ್ರಗಳಿಗೆ ಹೊರತುಪಡಿಸಿ ಪರಭಾಷೆ ಚಿತ್ರಗಳಿಗೆ ಮಣೆ ಹಾಕಿರುವುದು ಅದಿತಿ ಪ್ರಭುದೇವ ರವರು ಬೇಸರವನ್ನು ಹೊರಹಾಕಿದ್ದಾರೆ. ನೀವು ನಂಬಿದರೆ ನಂಬಿ ಸ್ನೇಹಿತರೆ ಮೊದಲ ದಿನವೇ ಪುಷ್ಪ ಚಿತ್ರಕ್ಕೆ ಬರೋಬ್ಬರಿ 600 ಪ್ರದರ್ಶನಗಳನ್ನು ಕೇವಲ ಬೆಂಗಳೂರಿನಲ್ಲಿ ನೀಡಲಾಗಿದೆ. ಇದು ಸಂಪೂರ್ಣವಾಗಿ ಕನ್ನಡತನವನ್ನು ಮುಗಿಸುವ ಪ್ರಯತ್ನವಲ್ಲದೆ ಇನ್ನೇನು. ಸಿನಿಮಾ ಮಾಡೋದು ದುಡ್ಡು ಮಾಡುವುದಕ್ಕೆ ಸರಿ ಆದರೆ ಕನ್ನಡತನವನ್ನು ಮರೆತು ದುಡ್ಡು ಮಾಡುವುದಕ್ಕೆ ಕನ್ನಡ ಸಿನಿಮಾಗಳನ್ನು ಮುಗಿಸುವ ತಂತ್ರವನ್ನು ಹೂಡಿರುವುದು ಎಷ್ಟರ ಮಟ್ಟಿಗೆ ಸರಿ ಎಂಬುದು ಅದಿತಿ ಪ್ರಭುದೇವ ಅವರ ಪ್ರಶ್ನೆಯಾಗಿದೆ.
ಗೆಳೆಯರೇ ಆನ ಎಂಬ ಚಿತ್ರ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದೆ ಎಂಬ ಪರಿವೇ ಕೂಡ ಕನ್ನಡಿಗರಿಗೆ ಇದ್ದಂತಿಲ್ಲ. ಪುಷ್ಪ ಚಿತ್ರ ಕೇವಲ ಕಣ್ಣೀರು ವರಿಸುವ ಪ್ರಯತ್ನವಾಗಿ ಕನ್ನಡಕ್ಕೆ ಡಬ್ ಆಗಿತ್ತು ಆದರೆ ಚಿತ್ರಮಂದಿರಗಳಲ್ಲಿ ಕನ್ನಡದ ವರ್ಷನ್ ಅನ್ನು ಬಿಡುಗಡೆ ಮಾಡಿಲ್ಲ. ನಮ್ಮ ಕನ್ನಡಿಗರು ಪರಭಾಷಾ ಚಿತ್ರಗಳನ್ನು ಬ್ಯಾನ್ ಮಾಡಿ ಎನ್ನುತ್ತಾರೆ ಆದರೆ ಕನ್ನಡ ಚಿತ್ರಗಳನ್ನು ನೋಡುವುದಿಲ್ಲ ನಮ್ಮವರೇ ನಮಗೆ ಕೈಕೊಡುತ್ತಾರೆ ಎಂಬುದಾಗಿ ಬೇಸರದಿಂದ ಅದಿತಿ ಪ್ರಭುದೇವ ಅವರು ತಮ್ಮ ದುಃಖವನ್ನು ಹೊರಹಾಕಿದ್ದಾರೆ. ಬೇರೆ ಭಾಷೆ ಚಿತ್ರಗಳಿಗೆ ವಿರೋಧ ಹೇರುವ ಬದಲು ನಮ್ಮ ಭಾಷೆಯ ಚಿತ್ರಕ್ಕೆ ಪ್ರೋತ್ಸಾಹ ನೀಡುವುದು ಒಳಿತಲ್ಲವೇ. ಅದಿತಿ ಪ್ರಭುದೇವ ನಟನೆಯ ಆನ ಚಿತ್ರ ಭಾರತದ ಮೊದಲ ಸೂಪರ್ ವುಮೆನ್ ಕಾನ್ಸೆಪ್ಟ್ ನಲ್ಲಿ ಮೂಡಿಬಂದಿರುವ ಚಿತ್ರವಾಗಿದೆ. ಆದರೆ ಸರಿಯಾದ ಜನಬೆಂಬಲವಿಲ್ಲದೆ ಚಿತ್ರಮಂದಿರಗಳಲ್ಲಿ ವಿಫಲ ಪ್ರದರ್ಶನದತ್ತ ಸಾಗುತ್ತಿದೆ.
Comments are closed.