ಕತ್ರಿನಾ ಕೈಫ್ ರವರನ್ನು ಮದುವೆಯಾಗುವ ಮುನ್ನ ವಿಕ್ಕಿ ಕೌಶಲ್ ಅವರು ಪ್ರೀತಿ ಮಾಡಿದ ನಟಿಯರು ಎಷ್ಟು ಜನ ಗೊತ್ತಾ?? ಅಚ್ಚರಿಯ ಹೆಸರುಗಳು ಲಿಸ್ಟಿನಲ್ಲಿ.
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ತಿಳಿದಿರುವಂತೆ ಬಾಲಿವುಡ್ ಚಿತ್ರರಂಗದ ಸೂಪರ್ ಜೋಡಿ ಗಳಾಗಿರುವ ವಿಕ್ಕಿ ಕೌಶಲ್ ಹಾಗೂ ಈಗಾಗಲೇ ಗುರುಹಿರಿಯರ ಸಮ್ಮುಖದಲ್ಲಿ ಅದ್ಧೂರಿಯಾಗಿ ಮದುವೆ ಆಗಿದ್ದಾರೆ. ಇವರಿಬ್ಬರ ನಡುವೆ ಯಾವಾಗ ಪ್ರೀತಿ ಪ್ರಾರಂಭವಾಯಿತು ಹೇಗೆ ಮದುವೆಯಲ್ಲಿ ಅಂತ್ಯವಾಯಿತು ಎಂದು ತಿಳಿಯಲು ಕೂಡ ಸಾಧ್ಯವಾಗುತ್ತಿಲ್ಲ.
ಇನ್ನು ಇಂದಿನ ವಿಚಾರದಲ್ಲಿ ನಾವು ಹೇಳಹೊರಟಿರುವುದು ವಿಕ್ಕಿ ಕೌಶಲ್ ರವರು ಕತ್ರಿನಾ ಕೈಫ್ ರವರನ್ನು ಮದುವೆಯಾಗುವುದಕ್ಕಿಂತ ಮುನ್ನ ಕೆಲವೊಂದು ನಟಿಯರ ಜೊತೆಗೆ ಡೇಟ್ ಮಾಡಿದ್ದರು. ಅವರು ಯಾರು ಎಂಬುದರ ಕುರಿತಂತೆ ನಾವು ನಿಮಗೆ ಇಂದಿನ ಲೇಖನಿಯಲ್ಲಿ ವಿವರವಾಗಿ ಹೇಳಲು ಹೊರಟಿದ್ದೇವೆ. ಹಾಗಿದ್ದರೆ ಈ ಸಾಲಿನಲ್ಲಿ ಯಾರೆಲ್ಲ ಇದ್ದಾರೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.
ಹರ್ಲೀನ್ ಸೇತಿ ಹರ್ಲೀನ್ ಸೇತಿ ಆಗಲಿ ಅಥವಾ ವಿಕ್ಕಿ ಕೌಶಲ್ ರವರೆ ಆಗಲಿ ಪರಸ್ಪರ ಪ್ರೀತಿಸುತ್ತಿರುವ ಹಾಗೂ ಮಾಡುತ್ತಿರುವ ವಿಚಾರದ ಕುರಿತಂತೆ ಎಲ್ಲೂ ಕೂಡ ಪಬ್ಲಿಕ್ ಆಗಿ ದೃಢಪಡಿಸಿಲ್ಲ. ಆದರೂ ಕೂಡ ಇವರಿಬ್ಬರು ಸಾಕಷ್ಟು ಸಮಯ ಜೊತೆಗೆ ಓಡಾಡಿಕೊಂಡಿದ್ದ ನ್ನು ನೋಡಿ ಇವರು ಡೇಟ್ ಮಾಡುತ್ತಿರುವ ವಿಚಾರ ದೃಢವಾಗಿದೆ. ಇನ್ನು ಇವರಿಬ್ಬರೂ ಕೂಡ ಕಾಮನ್ ಫ್ರೆಂಡ್ ಮುಖಾಂತರ ಪರಿಚಯವಾಗಿ ನಂತರ ಪ್ರೇಮಕ್ಕೆ ಬಿದ್ದಿದ್ದಾರೆ ಎಂಬ ಮಾಹಿತಿಗಳು ಸಿಕ್ಕಿವೆ. ಇನ್ನು ಇದು ಯಾಕೆ ಹೆಚ್ಚಾಗಿ ಸೌಂಡ್ ಆಗಲಿಲ್ಲವೇಕೆಂದರೆ ಇವರಿಬ್ಬರ ಪ್ರೀತಿ ಹೆಚ್ಚು ವರ್ಷಗಳ ಕಾಲ ಸಾಗಲಿಲ್ಲ. ಉರಿ ಚಿತ್ರದ ಯಶಸ್ಸಿನ ನಂತರ ವಿಕ್ಕಿ ಕೌಶಲ್ ರವರು ಹರ್ಲೀನ್ ಸೇತಿ ರವರೊಂದಿಗೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿಗಳು ಕೂಡ ಕೇಳಿಬಂದಿತ್ತು.
ಇನ್ನೊಂದು ಸುದ್ದಿ ಮಾಧ್ಯಮದ ಸಂದರ್ಶನದಲ್ಲಿ ಕೂಡ ಹರ್ಲೀನ್ ಸೇತಿ ರವರು ನನಗೆ ಯಾರು ಎಕ್ಸ್ ಬಾಯ್ ಫ್ರೆಂಡ್ ಇಲ್ಲ ಅಥವಾ ಫ್ಯೂಚರ್ ಬಾಯ್ ಫ್ರೆಂಡ್ ಕೂಡ ಇಲ್ಲ. ನಾನು ನಾನೇ ಹರ್ಲಿನ್ ಸೇತಿ ಎಂಬುದಾಗಿ ಹೇಳಿಕೊಂಡಿದ್ದರು. ಇನ್ನು ಇವರಿಬ್ಬರ ನಡುವೆ ಬ್ರೇಕಪ್ ಆಗಿತ್ತು ಎಂಬುದಕ್ಕೆ ಪುರಾವೆ ಎಂಬಂತೆ ಅವರು ಪೋಸ್ಟ್ ಮಾಡಿದ ಪೋಸ್ಟ್ನ ಕ್ಯಾಪ್ಷನ್ ಕೂಡ ಒಂದು ಮಾದರಿಯಲ್ಲಿ ಹೀಗಿತ್ತು.
ಮಾಳವಿಕ ಮೋಹನನ್ ಮಾಳವಿಕಾ ಮೋಹನನ್ ರವರ ಮನೆಗೆ ವಿಕ್ಕಿ ಕೌಶಲ್ ರವರು ರಾತ್ರಿ ಊಟಕ್ಕೆ ಹೋಗಿದ್ದರು ಎಂಬ ಸುದ್ದಿಯನ್ನು ಕೇಳಿದ ಮಾಧ್ಯಮ ಮಿತ್ರರು ಇವರಿಬ್ಬರ ನಡುವೆ ಏನೋ ಗುಸುಗುಸು ಇರಬೇಕು ಎಂಬುದಾಗಿ ಸುದ್ದಿಯನ್ನು ಕಟ್ಟಿರುತ್ತಾರೆ. ಈ ಸಂದರ್ಭದಲ್ಲಿ ವಿಕಿ ಕೌಶಲ್ ರವರ ಜೊತೆಗೆ ಅವರ ತಮ್ಮ ಸನ್ನಿ ಕೂಡ ಹೋಗಿರುತ್ತಾರೆ. ವಿಚಾರಗಳಿಂದ ತಿಳಿದ ಪ್ರಕಾರ ಇವರು ಮೂರು ಜನ ಕೂಡ ಚಿಕ್ಕಂದಿನಿಂದಲೂ ಕೂಡ ಒಳ್ಳೆಯ ಸ್ನೇಹಿತರಾಗಿದ್ದರು. ಇನ್ನು ವಿಕ್ಕಿ ಕೌಶಲ್ ರವರ ಜೊತೆಗೆ ಮಾಳವಿಕಾ ಮೋಹನನ್ ಸಂತೋಷವಾಗಿ ನಗುತ್ತಿರುವುದನ್ನು ನೋಡಿ ಅವರಿಬ್ಬರ ನಡುವೆ ಪ್ರೇಮ ಸಂಬಂಧ ಇದೆ ಎಂಬುದಾಗಿ ಗಾಳಿಸುದ್ದಿಯನ್ನು ಹರಡಿಸಲಾಗಿತ್ತು.
ಇನ್ನು ಸದ್ಯಕ್ಕೆ ತಿಳಿದಿರುವಂತೆ ಕತ್ರಿನಾ ಕೈಫ್ ರವರ ಜೊತೆಗೆ ಕೂಡ ವಿಕಿ ಕೌಶಲ್ ರವರು ಡೇಟ್ ಮಾಡುತ್ತಿರುವ ಸುದ್ದಿ ಈ ಮೊದಲೇ ಲೀಕ್ ಆಗಿತ್ತು ಆದರೆ ಅದನ್ನು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಆದರೆ ಇದೀಗ ದಿಡೀರನೆ ಒಂದೇಸಮನೆ ಮದುವೆ ಆಗಿರುವುದು ನೋಡಿ ಎಲ್ಲರೂ ಕೂಡ ಆಶ್ಚರ್ಯಕ್ಕೆ ಒಳಗಾಗಿದ್ದಾರೆ. ಅದೇನೇ ಇರಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಇಬ್ಬರು ಕೂಡ ವೈವಾಹಿಕ ಜೀವನವನ್ನು ಯಾವುದೇ ಚಿಂತೆಯಿಲ್ಲದೆ ಆಚರಿಸಲಿ ಎಂಬುದು ನಮ್ಮೆಲ್ಲರ ಆಶಯ. ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ಜೋಡಿಯ ಕುರಿತಂತೆ ನಿಮ್ಮ ಅನಿಸಿಕೆ ಹಾಗೂ ಅಭಿಪ್ರಾಯಗಳನ್ನು ನಮ್ಮೊಂದಿಗೆ ತಪ್ಪದೆ ಕಾಮೆಂಟ್ ಬಾಕ್ಸ್ನಲ್ಲಿ ಹಂಚಿಕೊಳ್ಳಿ.
Comments are closed.