ನೀವೆಲ್ಲರೂ ಟ್ರೊಲ್ ಮಾಡುತ್ತಿರುವಾಗ ರಶ್ಮಿಕಾ ಮಂದಣ್ಣ ಮಾತ್ರ ಮಾಡಿದ್ದಾದರೂ ಏನು ಗೊತ್ತೇ?? ಅದೃಷ್ಟ ಅಂದ್ರೆ ಇದೇನಾ??
ನಮಸ್ಕಾರ ಸ್ನೇಹಿತರೇ ಕನ್ನಡದ ಹುಡುಗಿ, ನಟಿ, ಕೊಡಗಿನ ಕುವರಿ ಸದ್ಯ ಪ್ಯಾನ್ ಇಂಡಿಯಾ ಸಿನಿಮಾ ಪುಷ್ಪದ ಯಶಸ್ಸಿನಲ್ಲಿ ಬೀಗುತ್ತಿದ್ದಾರೆ. ನಟಿ ಅಲ್ಲು ಅರ್ಜುನ್ ರವರೇ ಸ್ವತಃ ರಶ್ಮಿಕಾ ಮಂದಣ್ಣರನ್ನ ನ್ಯಾಶನಲ್ ಕ್ರಶ್ ಎಂದು ಹೊಗಳಿದ್ದರು. ಈ ತಮ್ಮ ಬಗ್ಗೆ ವೀಪರೀತ ಅನಿಸುವ ಟ್ರೋಲ್ ಗಳು ಟ್ರೋಲರ್ ಬಗ್ಗೆ ರಶ್ಮಿಕಾ ಮಂದಣ್ಣ ಇತ್ತಿಚೆಗಷ್ಟೇ ಅಸಮಾಧಾನ ಹೊರಹಾಕಿದ್ದರು. ಆದರೂ ರಶ್ಮಿಕಾ ಮಂದಣ್ಣ ಎಂದರೇ ಟ್ರೋಲ್ ಪೇಜ್ ಅಡ್ಮಿನ್ ಗಳಿಗೆ ಹಬ್ಬದೂಟ ಸಿಕ್ಕಿದಂತೆ.
ಏನಾದರೂ ಒಂದು ಸಣ್ಣ ಮಾಹಿತಿಯನ್ನು ಹಿಡಿದುಕೊಂಡು ಟ್ರೋಲ್ ಮಾಡುತ್ತಿರುತ್ತಾರೆ. ಆದರೇ ರಶ್ಮಿಕಾಗೆ ಈ ಪಾಟಿ ಜನಪ್ರಿಯತೆ ದೊರಕಿದೆಯಂದರೇ ಅದಕ್ಕೆ ಟ್ರೋಲ್ ಪೇಜ್ ಗಳು ಸಹ ಕಾರಣ ಎಂದು ಹೇಳಬಹುದು. ಈ ನಡುವೆ ರಶ್ಮಿಕಾ ಮಂದಣ್ಣ ಬಾಲಿವುಡ್ ಸ್ಟಾರ್ ಗಳನ್ನೇ ಮೀರಿಸುವಂತಹ ಒಂದು ದಾಖಲೆಯನ್ನು ನಿರ್ಮಿಸಿದ್ದಾರೆ. ಬನ್ನಿ ಅದೇನೆಂದೂ ತಿಳಿಯೋಣ.
ಹೌದು ಸಾಮಾಜಿಕ ಜಾಲತಾಣದ ದೈತ್ಯ ಆಗಿರುವ ಇನ್ಸ್ಟಾಗ್ರಾಂ ನಲ್ಲಿ ಸದ್ಯ ರಶ್ಮಿಕಾ ಮಂದಣ್ಣರವರಿಗೆ ಬರೋಬ್ಬರಿ 2 ಕೋಟಿ 50 ಲಕ್ಷ ಜನ ಫಾಲೊ ಮಾಡುತ್ತಿದ್ದಾರೆ. ಪುಷ್ಪ ಸಿನಿಮಾ ಬಿಡುಗಡೆಗೂ ಮುನ್ನ ರಶ್ಮಿಕಾ ಮಂದಣ್ಣರವರಿಗೆ 2 ಕೋಟಿ 50 ಲಕ್ಷ ಜನ ಫಾಲೋವರ್ಸ್ ಇದ್ದರು. ಪುಷ್ಪ ಸಿನಿಮಾ ಬಿಡುಗಡೆಯಾದ ಒಂದು ವಾರದೊಳಗೆ 8 ಲಕ್ಷ ಜನ ರಶ್ಮಿಕಾರನ್ನ ಹೊಸದಾಗಿ ಫಾಲೋ ಮಾಡುತ್ತಿದ್ದಾರೆ. ಈ ಸಂತಸದ ಸುದ್ದಿಯನ್ನ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿರುವ ರಶ್ಮಿಕಾ ಮಂದಣ್ಣ, ಇದನ್ನ ಕೇಕ್ ಕಟ್ ಮಾಡುವ ಮೂಲಕ ಸೆಲೆಬ್ರೇಟ್ ಕೂಡ ಮಾಡಿದ್ದಾರೆ. ಆ ಫೋಟೋಗಳನ್ನು ಸಹ ಪೋಸ್ಟ್ ಮಾಡಿದ್ದಾರೆ. ದಕ್ಷಿಣ ಭಾರತದಲ್ಲಿಯೇ ಅತಿ ಹೆಚ್ಚು ಫಾಲೋವರ್ಸ್ ರನ್ನ ಹೊಂದಿರುವ ನಟಿ ಎಂಬ ಬಿರುದಿಗೆ ಪಾತ್ರವಾಗಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.