Neer Dose Karnataka
Take a fresh look at your lifestyle.

ಚಿಕ್ಕ ವಯಸ್ಸಿನಿಂದಲೂ ಕಿರುತೆರೆಯಲ್ಲಿ ಫೇಮಸ್ ಆಗಿರುವ ನಮೃತ ಗೌಡರವರ ನಿಜವಾದ ವಯಸ್ಸೆಷ್ಟು ಗೊತ್ತಾ?? ಇಷ್ಟು ದೊಡ್ಡವರು ಎಂದರೆ ನೀವು ನಂಬುವುದಿಲ್ಲ.

ನಮಸ್ಕಾರ ಸ್ನೇಹಿತರೇ ಎಲ್ಲರಿಗೂ ತಿಳಿದಿರುವ ಹಾಗೆ ಇತ್ತೀಚಿನ ಸಮಯಗಳಲ್ಲಿ ಕನ್ನಡ ಕಿರುತೆರೆ ಧಾರಾವಾಹಿಗಳು ಹಾಗೂ ಧಾರಾವಾಹಿಯಲ್ಲಿ ನಟಿಸುವ ನಟ ಹಾಗೂ ನಟಿಯರಿಗೆ ಕರ್ನಾಟಕ ರಾಜ್ಯದಾದ್ಯಂತ ಜನಪ್ರಿಯತೆ ಎನ್ನುವುದು ಸಾಕಷ್ಟು ಗಣನೀಯವಾಗಿ ಹೆಚ್ಚಾಗಿದೆ. ನಾವು ಇಂದು ಮಾತನಾಡಲು ಹೊರಟಿರುವುದು ನಟಿ ನಮ್ರತಾ ಗೌಡರವರ ಕುರಿತಂತೆ. ನಟಿ ನಮ್ರತ ಗೌಡರವರು ಕನ್ನಡ ಕಿರುತೆರೆ ಕ್ಷೇತ್ರದಲ್ಲಿ ಸಾಕಷ್ಟು ಜನಪ್ರಿಯರಾಗಿದ್ದಾರೆ. ಪುಟ್ಟಗೌರಿ ಮದುವೆ ಧಾರವಾಹಿಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕಿರುತೆರೆ ಕ್ಷೇತ್ರಕ್ಕೆ ನಮೃತಾ ಗೌಡರವರು
ಜನಪ್ರಿಯ ಮುಖವಾಗಿ ಕಾಣುತ್ತಾರೆ.

ಆದರೆ ಅವರು ಪಾದಾರ್ಪಣೆ ಮಾಡಿದ್ದು ಮಾತ್ರ ಕೃಷ್ಣ-ರುಕ್ಮಿಣಿ ಧಾರವಾಹಿಯ ಮೂಲಕ. ಬೆಂಗಳೂರಿನಲ್ಲಿ ಹುಟ್ಟಿ ಬೆಳೆದು ಆಚಾರ್ಯ ಎನ್ ಆರ್ ವಿ ಕಾಲೇಜಿನಲ್ಲಿ ತಮ್ಮ ಪದವಿ ವ್ಯಾಸಂಗವನ್ನು ಮುಗಿಸಿಕೊಂಡಿದ್ದಾರೆ. ಕೇವಲ ನಟನೆಯಲ್ಲಿ ಮಾತ್ರವಲ್ಲದೆ ನಾಟ್ಯದಲ್ಲಿ ಕೂಡ ನಮೃತಾ ಗೌಡರವರು ಪ್ರಾವೀಣ್ಯತೆಯನ್ನು ಹೊಂದಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಾಗಿಣಿ 2 ಧಾರವಾಹಿಯಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಕಿರುತೆರೆ ಪ್ರೇಕ್ಷಕರ ಮನಸ್ಸನ್ನು ಗೆಲ್ಲುವುದರಲ್ಲಿ ನಮೃತ ಗೌಡರವರು ಯಶಸ್ವಿಯಾಗಿದ್ದಾರೆ.

ನಮೃತ ಗೌಡರವರ ಚೆಲುವನ್ನು ನೋಡಿದವರು ಖಂಡಿತವಾಗಿ ಅವರು ವಯಸ್ಸು 20 ದಾಟಿಲ್ಲ ಎಂದು ಹೇಳುತ್ತಾರೆ. ಆದರೆ ಇಂದಿನ ಲೇಖನಿಯಲ್ಲಿ ನಾವು ನಮೃತ ಗೌಡರವರ ನಿಜವಾದ ವಯಸ್ಸಿನ ಕುರಿತಂತೆ ನಿಮಗೆ ವಿವರವಾಗಿ ಹೇಳಲು ಹೊರಟಿದ್ದೇವೆ. ಹೌದು ನಮೃತಾ ಗೌಡರವರ ನಟನೆ ಹಾಗೂ ಸೌಂದರ್ಯವನ್ನು ನೋಡಿದವರು ಅವರಿಗೆ 20 ವರ್ಷ ವಯಸ್ಸಿರಬಹುದು ಎಂಬುದಾಗಿ ಅಂದಾಜು ಹಾಕುತ್ತಾರೆ. ಆದರೆ ನಮೃತ ಗೌಡರವರು ನಿಜವಾದ ವಯಸ್ಸು 27 ವರ್ಷ. 1993 ರಲ್ಲಿ ನಮೃತ ಗೌಡರವರು ಜನಿಸಿದ್ದಾರೆ. ಈಗಾಗಲೇ ಕನ್ನಡ ಕಿರುತೆರೆಯ ಭರವಸೆಯ ನಟಿಯಾಗಿರುವ ನಮೃತ ಗೌಡರವರು ಮುಂದಿನ ದಿನಗಳಲ್ಲಿ ಚಿತ್ರರಂಗದಲ್ಲಿ ಕೂಡ ದೊಡ್ಡ ಮಟ್ಟದ ಯಶಸ್ಸನ್ನು ಸಾಧಿಸಬಹುದಾಗಿದೆ.

Comments are closed.