Neer Dose Karnataka
Take a fresh look at your lifestyle.

ಮತ್ತೊಂದು ದಾಖಲೆ ಸೃಷ್ಟಿ ಮಾಡಿದ ಕತ್ರಿನಾ ಕೈಫ್, ಧರಿಸಿರುವ ಮಾಂಗಲ್ಯದ ಬೆಲೆ ಎಷ್ಟು ಗೊತ್ತೇ?? ತಲೆ ತಿರುಗುವುದು ಗ್ಯಾರೆಂಟಿ

ನಮಸ್ಕಾರ ಸ್ನೇಹಿತರೇ 2021 ರ ಅಂತ್ಯದಲ್ಲಿ ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರು ಪ್ರೀತಿಸಿ ಮನೆಯವರ ಸಮ್ಮುಖದಲ್ಲಿ ಅದ್ದೂರಿಯಾಗಿ ರಾಜಸ್ಥಾನದ ಕೋಟೆಯಲ್ಲಿ ಮದುವೆಯಾಗಿರುವುದು ನಿಮಗೆಲ್ಲಾ ಗೊತ್ತೇ ಇದೆ. ಇವರ ಮದುವೆ ಎಷ್ಟೊಂದು ಸುದ್ದಿಯಾಗಿತ್ತು ಎಂಬುದು ನಿಮಗೂ ಕೂಡ ತಿಳಿದಿದೆ ಯಾಕೆಂದರೆ ಅಷ್ಟೊಂದು ರಹಸ್ಯವಾಗಿ ಮದುವೆ ಆಯೋಜನೆಯಾಗಿತ್ತು. ಇದಾದ ನಂತರ ಕೇವಲ ನಾಲ್ಕೇ ದಿನದಲ್ಲಿ ಹನಿಮೂನ್ ಅನ್ನು ನವದಂಪತಿಗಳು ಮುಗಿಸಿಕೊಂಡು ಬಂದಿದ್ದರು. ಇದಕ್ಕೆ ಕಾರಣ ಕೂಡ ಅವರು ಚಿತ್ರೀಕರಣ ಗಳಲ್ಲಿ ಭಾಗಿಯಾಗಬೇಕಾಗಿತ್ತು.

ಇದನ್ನು ನೋಡಿದ ಬಾಲಿವುಡ್ ಮಂದಿ ಇವರಿಬ್ಬರ ಕಾರ್ಯತತ್ಪರತೆಗೆ ಸಲಾಂ ಹೇಳಿದ್ದರು. ಬಾಲಿವುಡ್ ಚಿತ್ರರಂಗದ ಬಹುತೇಕರು ವಿಕ್ಕಿ ಕೌಶಲ್ ಹಾಗೂ ಕತ್ರಿನಾ ಕೈಫ್ ರವರ ಮದುವೆಗೆ ಆಗಮಿಸಿದ್ದರು ಇನ್ನು ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಸಂದೇಶಗಳನ್ನು ಕಳಿಸಿದ್ದರು. ವಿಕ್ಕಿ ಕೌಶಲ್ ರವರು ಕತ್ರಿನಾ ಕೈಫ್ ಅವರಿಗಿಂತ ವಯಸ್ಸಿನಲ್ಲಿ ಐದು ವರ್ಷ ಚಿಕ್ಕವರಾಗಿದ್ದರೂ ಕೂಡ ಪ್ರೀತಿ ಎನ್ನುವುದಕ್ಕೆ ಯಾವುದೇ ವಯಸ್ಸಿನ ಅಂತರವಿಲ್ಲ ಎಂಬುದನ್ನು ಸಾಬೀತುಪಡಿಸಿದರು. ಈಗಾಗಲೇ ಇಬ್ಬರು ಕ್ರಿಸ್ಮಸ್ ಆಚರಿಸಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಬಿಡುಗಡೆಯಾಗಿ ಇಬ್ಬರನ್ನು ಎಲ್ಲರೂ ಕ್ಯೂಟ್ ಜೋಡಿಗಳು ಎಂಬುದಾಗಿ ಕೊಂಡಾಡಿದ್ದರು.

ಇತ್ತೀಚೆಗಷ್ಟೇ ಹೊಸವರ್ಷದ ವಿಶೇಷವಾಗಿ ಕತ್ರಿನಾ ಕೈಫ್ ರವರು ಫೋಟೋ ಒಂದನ್ನು ಪೋಸ್ಟ್ ಮಾಡಿದ್ದು ಈಗ ಸುದ್ದಿಗೆ ಕಾರಣವಾಗಿದೆ. ಹೌದು ಈ ಫೋಟೋದಲ್ಲಿ ಕತ್ರಿನಾ ಕೈಫ್ ರವರು ತಾಳಿಯನ್ನು ಹಾಕಿಕೊಂಡು ಮಿನುಗುತ್ತಿದ್ದರು. ಎಲ್ಲರಿಗೂ ಈಗ ಕತ್ರಿನಾ ಕೈಫ್ ಅವರು ಧರಿಸಿರುವ ತಾಳಿಯ ಬೆಲೆ ಎಷ್ಟು ಎಂಬುದಾಗಿ ಕುತೂಹಲ ಆರಂಭವಾಗಿದೆ. ಇದಕ್ಕೂ ಕೂಡ ಈಗಾಗಲೇ ಉತ್ತರ ಸಿಕ್ಕಿದೆ. ಹೌದು ಗೆಳೆಯರೇ ಕತ್ರಿನಾ ಕೈಫ್ ರವರು ಧರಿಸಿರುವ ತಾಳಿ ಕರಿಮಣಿ ಹಾಗೂ ವಜ್ರದ ಹರಳುಗಳಿಂದ ಕೂಡಿದ್ದು ಇದರ ಬೆಲೆ ಬರೋಬ್ಬರಿ ಏಳು ಲಕ್ಷ ರೂಪಾಯಿ. ಬಾಲಿವುಡ್ ಚಿತ್ರರಂಗದ ಮೇರು ಜೋಡಿಗಳಾಗಿ ಇವರಿಬ್ಬರು ಮುಂದಿನ ದಿನಗಳಲ್ಲಿ ಮೂಡಿಬರಲಿ ಎಂಬುದಾಗಿ ಎಲ್ಲರೂ ಹಾರೈಸುತ್ತಿದ್ದಾರೆ.

Comments are closed.