90ರ ದಶಕದ ಎಲ್ಲರ ನೆಚ್ಚಿನ ನಟಿ ಸುಮನ್ ನಗರ್ಕರ್ ಈಗ ಏನು ಮಾಡುತ್ತಿದ್ದಾರೆ ಗೊತ್ತಾ?? ಈಗ ಹೇಗಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಅಂದಿನ ಕಾಲದಲ್ಲಿ ಹಲವಾರು ನಟಿಯರು ನಟಿಸಿ ಕನ್ನಡ ಪ್ರೇಕ್ಷಕರ ಮನವನ್ನು ಗೆದ್ದು ಇತ್ತೀಚಿನ ದಿನಗಳಲ್ಲಿ ಕಣ್ಮರೆಯಾಗಿದ್ದಾರೆ ಎಂದು ಹೇಳಬಹುದಾಗಿದೆ. ಆದರೂ ಇಂದಿಗೂ ಕೂಡ ನಿಜವಾದ ಕನ್ನಡ ಪ್ರೇಕ್ಷಕರ ಮನಸ್ಸಿನಲ್ಲಿ ಅವರ ಹಚ್ಚಹಸಿರಾಗಿ ಉಳಿದುಕೊಂಡಿದ್ದಾರೆ. ಅಂತಹ ನಟಿಯರಲ್ಲಿ ಒಬ್ಬರು ಕುರಿತಂತೆ ಇಂದು ನಾವು ಹೇಳಲು ಹೊರಟಿದ್ದೇವೆ. ನಾವು ಮಾತನಾಡಲು ಹೊರಟಿರುವುದು 90ರ ದಶಕದಲ್ಲಿ ತಮ್ಮ ನಟನೆಯ ಮೂಲಕ ಪ್ರೇಕ್ಷಕರನ್ನು ಮೂಕವಿಸ್ಮಿತರನ್ನಾಗಿ ಮಾಡಿಸಿದ ನಟಿ ಸುಮನ್ ನಗರ್ಕರ್ ಅವರ ಕುರಿತಂತೆ ಹೇಳಲು ಹೊರಟಿದ್ದೇವೆ.
ರಾಘಣ್ಣ ನಟನೆಯ ಕಲ್ಯಾಣಮಂಟಪ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಾರೆ. ಸಾಹಸಸಿಂಹ ವಿಷ್ಣುವರ್ಧನ್ ಹಾಗೂ ಸುನೀಲ್ ಕುಮಾರ್ ದೇಸಾಯಿ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ನಿಷ್ಕರ್ಷ ಸಿನಿಮಾದ ಮೂಲಕ ಪೂರ್ಣ ಪ್ರಮಾಣದ ನಾಯಕಿಯಾಗಿ ಜನಪ್ರಿಯತೆಯನ್ನು ಪಡೆದುಕೊಳ್ಳುತ್ತಾರೆ. ಈ ಚಿತ್ರದ ಯಶಸ್ಸಿನ ನಂತರ ಕನ್ನಡ ಚಿತ್ರರಂಗದಲ್ಲಿ ಸುಮನ್ ನಗರ್ಕರ್ ರವರಿಗೆ ಚಿತ್ರಗಳ ಆಫರ್ ಹೊಳೆ ಹರಿದು ಬಂದಿತ್ತು. ನಂತರ ಅನಂತನಾಗ್ ರವರೊಂದಿಗೆ ನಟಿಸಿದ್ದ ಬೆಳದಿಂಗಳ ಬಾಲೆ ಚಿತ್ರವೂ ಕೂಡ ಸುಮನ್ ನಗರ್ಕರ್ ಅವರ ಸಿನಿಮಾ ಜೀವನದಲ್ಲಿ ದೊಡ್ಡಮಟ್ಟದ ಹೆಸರನ್ನು ಮಾಡಿತ್ತು.
ನಮ್ಮೂರ ಮಂದಾರ ಹೂವೆ ಚಿತ್ರದ ಪಾತ್ರವು ಕೂಡ ಎಲ್ಲರ ಮನವನ್ನು ಗೆದ್ದಿತ್ತು. ಇವೆಲ್ಲವನ್ನು ಸಾಧಿಸಿದ ನಂತರ ಸುಮನ್ ನಗರ್ಕರ್ ರವರು ವೈವಾಹಿಕ ಜೀವನಕ್ಕೆ ಕಾಲಿಡುತ್ತಾರೆ. ಹೌದು ಸುಮನ್ ನಗರ್ಕರ್ ರವರು ಗುರುದೇವ ನಾಗರಾಜನ್ ಅವರನ್ನು ಮದುವೆಯಾಗಿ ಅಮೆರಿಕಾದಲ್ಲಿ ಸೆಟಲ್ ಆಗುತ್ತಾರೆ. ಮದುವೆಯಾದ ನಂತರ ಹದಿನೈದು ವರ್ಷಗಳ ಕಾಲ ಕನ್ನಡ ಚಿತ್ರರಂಗದಿಂದ ದೂರವಾಗಿದ್ದರು. ಅಲ್ಲೇ ಇದ್ದಾಗ ಪಕ್ಕದ ಮನೆಯ ಮಕ್ಕಳಿಗೆ ಸಂಗೀತ ಪಾಠವನ್ನು ಹೇಳಿಕೊಡುತ್ತಿದ್ದರು. ಆದರೆ ಬಹು ವರ್ಷಗಳ ನಂತರ ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶನದ ಅಗ್ನಿಸಾಕ್ಷಿ ಧಾರಾವಾಹಿ ಸಿದ್ದಾರ್ಥ ನಟನೆಯ ಇಷ್ಟಕಾಮ್ಯ ಚಿತ್ರದಲ್ಲಿ ನಟಿಸುತ್ತಾರೆ. ಈಗ ಮತ್ತೆ ಕನ್ನಡ ಚಿತ್ರಗಳಲ್ಲಿ ನಟಿಸಲು ಆರಂಭಿಸಿದ್ದು ಹಲವಾರು ಸಿನಿಮಾಗಳು ಇವರ ಕೈಯಲ್ಲಿದೆ.
Comments are closed.