Neer Dose Karnataka
Take a fresh look at your lifestyle.

ಕೊನೆಗೂ ಫೈನಲ್ ಆದರು ನಟಿ. ರಾಘವೇಂದ್ರ ಸ್ಟೋರ್ಸ್ ಸಿನಿಮಾದಲ್ಲಿ ಜಗ್ಗೇಶ್ ರವರಿಗೆ ಜೊತೆಯಾದ ನಟಿ ಯಾರು ಗೊತ್ತೇ?? ಅಭಿಮಾನಿಗಳು ಫುಲ್ ಕುಶ್.

ನಮಸ್ಕಾರ ಸ್ನೇಹಿತರೇ ಕನ್ನಡದ ಖ್ಯಾತ ಕಲಾವಿದ , ನವರಸ ನಾಯಕ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಸದ್ಯಕ್ಕೆ ಅವರ ಬಹು ನೀರಿಕ್ಷಿತ ಚಿತ್ರವಾದ ತೋತಾಪುರಿ ಬಿಡುಗಡೆಗೆ ಸಿದ್ದವಾಗಿದೆ. ಇದರ ಬೆನ್ನಲ್ಲೇ ಮಠ ಹಾಗೂ ಎದ್ದೇಳು ಮಂಜುನಾಥ ಖ್ಯಾತಿಯ ನಿರ್ದೇಶಕ ಗುರುಪ್ರಸಾದ್ ರವರ ರಂಗನಾಯಕ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಈ ನಡುವೆ ಜಗ್ಗೇಶ್ ರವರ ಹೊಸ ಚಿತ್ರ ಸಹ ಅನೌನ್ಸ್ ಆಗಿತ್ತು. ಅದುವೇ.ರಾಘವೇಂದ್ರ ಸ್ಟೋರ್ಸ್.

ಇನ್ನು ರಾಘವೇಂದ್ರ ಸ್ಟೋರ್ಸ್ ಸಿನಿಮಾ ಬಗ್ಗೆ ಕುತೂಹಲ ಹೆಚ್ಚಾಗಲು ಕಾರಣ ಅದರ ನಿರ್ದೇಶಕ ಸಂತೋಶ್ ಆನಂದರಾಮ್ ಹಾಗೂ ಸಿನಿಮಾ ನಿರ್ಮಾಣ ಮಾಡುತ್ತಿರುವುದು ಹೊಂಬಾಳೆ ಫಿಲಂಸ್. ಸ್ಟಾರ್ ನಿರ್ದೇಶಕ ಹಾಗೂ ಸ್ಟಾರ್ ನಿರ್ಮಾಣ ಸಂಸ್ಥೆ ಜೊತೆಯಾಗಿ, ಜಗ್ಗೇಶ್ ರಿಗೆ ಸಿನಿಮಾ ಮಾಡುವುದು ಮೊದಲಿಗೆ ಆಶ್ಚರ್ಯವೆನಿಸಿದರೂ ನಂತರದ ದಿನಗಳಲ್ಲಿ ಇದು ನಾರ್ಮಲ್ ಆಯಿತು. ಈಗಾಗಲೇ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದ್ದು,ಈಗ ಸಿನಿಮಾಕ್ಕೆ ನಾಯಕ ನಟಿಯ ಪ್ರವೇಶವಾಗಿದೆ.

ಹೌದು ಈ ಸಿನಿಮಾದ ಹಿರೋಯಿನ್ ಆಗಿ ನಟಿ ಶ್ವೇತಾ ಶ್ರೀವಾತ್ಸವ್ ಬಣ್ಣ ಹಚ್ಚಲಿದ್ದಾರೆ. ನಟಿ ಶ್ವೇತಾ ಈ ಹಿಂದೆ ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಮೂಲಕ ಖ್ಯಾತಿಗಳಿಸಿದ್ದರು. ಕಿರಗೂರಿನ ಗಯ್ಯಾಳಿಗಳು ಸಿನಿಮಾ ನಂತರ ಅವರು ಬಣ್ಣ ಹಚ್ಚಿರಲಿಲ್ಲ. ಈಗ ಕಮ್ ಬ್ಯಾಕ್ ಅವರು ಜಗ್ಗೇಶ್ ಎದುರು ರಾಘವೇಂದ್ರ ಸ್ಟೋರ್ಸ್ ನಲ್ಲಿ ನಾಯಕಿಯಾಗಿದ್ದಾರೆ. ಸಿನಿಮಾದ ಚಿತ್ರೀಕರಣ ಶರವೇಗದಿಂದ ಸಾಗುತ್ತಿದ್ದು ಸಾಮಾಜಿಕ ಕೌಟುಂಬಿಕ ಕತೆಯನ್ನ ಹಾಸ್ಯದ ಲೇಪನದೊಂದಿಗೆ ತೋರಿಸುವ ಪ್ರಯತ್ನವನ್ನು ನಿರ್ದೇಶಕ ಸಂತೋಶ್ ಆನಂದರಾಮ್ ಮಾಡಿದ್ದಾರೆ. ಯುವರತ್ನ ನಂತರ ಸಂತೋಶ್ ಈ ಥರಹದ ಕಾನ್ಸೆಪ್ಟ್ ವೊಂದನ್ನ ಕೈಗೆತ್ತಿಕೊಂಡಿದ್ದಾರೆ. ಸೆಪ್ಟೆಂಬರ್ ತಿಂಗಳಲ್ಲಿ ಸಿನಿಮಾ ಪ್ರೇಕ್ಷಕರ ಎದುರು ಬರಲಿದೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.

Comments are closed.