ಬಿಗ್ ನ್ಯೂಸ್: ತನ್ನ ತಾಳಿಯ ಬಗ್ಗೆ ಮೊದಲ ಬಾರಿಗೆ ಮಾತನಾಡಿದ ಪ್ರಿಯಾಂಕ, ಹೇಳಿದ್ದೇನು ಗೊತ್ತೇ?? ನೀಡಿದ ಸಂದೇಶ ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ಈಗಾಗಲೇ ಬಾಲಿವುಡ್ ಚಿತ್ರರಂಗದ ಖ್ಯಾತ ನಟಿ ಆಗಿರುವ ಪ್ರಿಯಾಂಕಾ ಚೋಪ್ರಾ ರವರು ಅಮೆರಿಕದ ಪಾಪ್ ಗಾಯಕ ಹಾಗೂ ಹಾಲಿವುಡ್ ನಟ ನಿಕ್ ಜೋನಸ್ ರವರನ್ನು ಮದುವೆಯಾಗಿರುವುದು ಎಲ್ಲರಿಗೂ ಗೊತ್ತಿರುವ ಸಮಾಚಾರ. ನಿಕ್ ಜೋನಸ್ ಅವರಿಗಿಂತ ಪ್ರಿಯಾಂಕ ಚೋಪ್ರಾ ರವರು ವಯಸ್ಸಿನಲ್ಲಿ ಹತ್ತು ವರ್ಷ ದೊಡ್ಡವರಾಗಿದ್ದರು ಕೂಡ ಇವರಿಬ್ಬರ ನಡುವೆ ವಯಸ್ಸಿನ ಅಂತರ ಎಂದು ಕೂಡ ಕಾಣಿಸಿಕೊಂಡಿಲ್ಲ. ಇನ್ನು ಇವರಿಬ್ಬರು ಮದುವೆಯಾಗಿದ್ದು ಕೂಡ ಹಿಂದೂ ಹಾಗೂ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ.
ನಿನ್ನೆಯಷ್ಟೇ ಪ್ರಿಯಾಂಕಾ ಚೋಪ್ರಾ ರವರು ಸೆರೋಗೇಟ್ ಮೂಲಕ ಮಗುವನ್ನು ಹೊಂದಿರುವ ವಿಚಾರವನ್ನು ಸಂತೋಷದಿಂದ ತಮ್ಮ ಸಾಮಾಜಿಕ ಜಾಲತಾಣಗಳ ಖಾತೆ ಮೂಲಕ ಹಂಚಿಕೊಂಡಿರುವುದು ಎಲ್ಲರ ಸಂತೋಷಕ್ಕೆ ಇನ್ನಷ್ಟು ಕಾರಣವಾಗಿದೆ. ಆದರೆ ಇಂದು ನಾವು ಮಾತನಾಡಲು ಹೊರಟಿರುವುದು ಪ್ರಿಯಾಂಕಾ ಚೋಪ್ರಾ ರವರು ಕರಿಮಣಿಯ ಮಹತ್ವದ ಕುರಿತಂತೆ ಹೇಳಿರುವ ವಿಚಾರದ ಕುರಿತಂತೆ. ಮದುವೆಯಾಗಿ ಪಾಶ್ಚಾತ್ಯದೇಶಗಳಲ್ಲಿ ಇದ್ದರೂ ಕೂಡ ಪ್ರಿಯಾಂಕ ಚೋಪ್ರಾ ಅವರು ಭಾರತೀಯ ಸಂಸ್ಕೃತಿಯನ್ನು ಬಿಟ್ಟಿಲ್ಲ.
ಇನ್ನು ಮದುವೆಯ ಸಾಂಕೇತಿಕ ಸೂಚಕ ವಾಗಿರುವ ಕರಿಮಣಿಯ ಕುರಿತಂತೆ ಕೂಡ ಇಂದಿನ ಯುವ ಜನತೆಗೆ ಪ್ರಿಯಾಂಕ ಚೋಪ್ರಾ ಅವರು ಕೆಲವೊಂದು ವಿಚಾರಗಳನ್ನು ಹೇಳಿದ್ದಾರೆ. ಮದುವೆ ಸಂದರ್ಭದಲ್ಲಿ ಮಂಗಳಸೂತ್ರವನ್ನು ಧರಿಸಿದ ಕ್ಷಣ ನನಗೆ ಬಹಳಷ್ಟು ವಿಶೇಷವಾಗಿತ್ತು. ಕರಿಮಣಿ ಯಲ್ಲಿರುವ ಕಪ್ಪು ಎನ್ನುವುದು ದುಷ್ಟತನವನ್ನು ದೂರ ಮಾಡುತ್ತದೆ ಹಾಗೂ ತನ್ನನ್ನು ತಾನು ಕಾಪಾಡಲು ಸಹಾಯ ಮಾಡುತ್ತದೆ ಎಂಬುದಾಗಿ ಹೇಳಿದ್ದಾರೆ. ಮುಂದಿನ ಕಾಲದ ಹುಡುಗಿಯರು ವಿಭಿನ್ನ ವಾಗಲು ಪ್ರಯತ್ನಿಸುವುದನ್ನು ನಾವು ನೋಡಬಹುದು ಆದರೆ ನಮ್ಮ ಸಂಪ್ರದಾಯವನ್ನು ಹಾಗೂ ತಾಳಿಯ ಮಹತ್ವವನ್ನು ಎಂದು ಕೂಡ ಕಡೆಗಣಿಸಬಾರದು ಎಂಬುದಾಗಿ ಹೇಳಿದ್ದಾರೆ. ಈ ವಿಚಾರದ ಕುರಿತಂತೆ ನಿಮ್ಮ ಅನಿಸಿಕೆಗಳನ್ನು ತಪ್ಪದೇ ಹಂಚಿಕೊಳ್ಳಿ.
Comments are closed.