ಕೆಜಿಎಫ್ ದಾಖಲೆಯನ್ನು ಖುಟ್ಟಿ ಪುಡಿ ಪುಡಿ ಮಾಡಲು ಅವಕಾಶ ಸಿಕ್ಕರೂ ಕೂಡ ಹಿಂದೆ ಸರಿದ ಸಲಾರ್, ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಕೆ.ಜಿ.ಎಫ್ ಸಿನಿಮಾ ಸೃಷ್ಠಿಸಿರುವ ಹವಾವನ್ನು ನೀವು ನೋಡಿದ್ದಿರಿ. ನಟ ಯಶ್ ಜೊತೆ ನಿರ್ದೇಶಕ ಪ್ರಶಾಂತ್ ನೀಲ್ ಗೂ ಸಹ ಸಿನಿಮಾ ಭರ್ಜರಿ ಹೆಸರು ತಂದು ಕೊಟ್ಟಿತು. ಕೆ.ಜಿ.ಎಫ್ – 2 ಏಪ್ರಿಲ್ 14 ರಂದು ರಿಲೀಸ್ ಆಗಲಿದೆ. ಇದರ ಪ್ರಶಾಂತ್ ನೀಲ್ ರವರ ತಂಡ ಹೊಸ ಸಿನಿಮಾ ಘೋಷಿಸಿದ್ದನ್ನು ಸಹ ನೀವು ಗಮನಿಸಿರುತ್ತಿರಿ. ಬಾಹುಬಲಿ ಖ್ಯಾತಿಯ ನಟ ಪ್ರಭಾಸ್ ಆ ಚಿತ್ರಕ್ಕೆ ಹೀರೋ. ಆ ಸಿನಿಮಾಗೆ ಸಲಾರ್ ಎಂದು ಹೆಸರಿಟ್ಟಿದ್ದರು.
ಕೆ.ಜಿ.ಎಫ್ ನಿರ್ಮಾಪಕರಾದ ಹೊಂಬಾಳೆ ಫಿಲಂಸ್ ಸಂಸ್ಥೆಯೇ ಆ ಸಿನಿಮಾವನ್ನು ನಿರ್ಮಿಸುತ್ತಿದ್ದು ಚಿತ್ರೀಕರಣ ಭರದಿಂದ ಸಾಗಿದ್ದು, ಬಹುತೇಖ ಮುಗಿಯುವಂತಿದೆ. ಇನ್ನು ಈ ನಡುವೆ ಸಲಾರ್ ಸಿನಿಮಾ ಬಗ್ಗೆ ಹೊಸ ಸುದ್ದಿಯೊಂದು ಬಂದಿದ್ದು, ಆ ಸುದ್ದಿ ಈಗ ಎಲ್ಲೆಡೆ ಹರಿದಾಡುತ್ತಿದೆ. ಸಲಾರ್ ಸಿನಿಮಾವನ್ನು ಕೆ.ಜಿ.ಎಫ್ – 2 ನಂತರ ಬಿಡುಗಡೆ ಮಾಡಬೇಕೋ ಅಥವಾ ಓಟಿಟಿಯಲ್ಲಿ ಬಿಡುಗಡೆ ಮಾಡಬೇಕೋ ಎಂಬ ಗೊಂದಲದಲ್ಲಿದೆಯಂತೆ ಚಿತ್ರತಂಡ.
ಆದರೇ ಪ್ರಭಾಸ್ ರಂತಹ ಸೂಪರ್ ಸ್ಟಾರ್ ನಟ, ನಟಿಸಿದ ಈ ಸಿನಿಮಾದ ಎಲ್ಲಾ ಭಾಷೆಯ ಒಟಿಟಿ ಹಕ್ಕು ಪಡೆಯಲು , ಒಟಿಟಿ ಸಂಸ್ಥೆಯೊಂದು ಚಿತ್ರತಂಡಕ್ಕೆ.ಭರ್ಜರಿ ಆಫರ್ ವೊಂದನ್ನು ನೀಡಿದೆಯಂತೆ. ಹೌದು ಒಟಿಟಿ ಸಂಸ್ಥೆಯೊಂದು ಸಲಾರ್ ನ ಎಲ್ಲಾ ಭಾಷೆಯ ಒಟಿಟಿ ಹಕ್ಕು ಪಡೆಯಲು ಬರೋಬ್ಬರಿ 200 ಕೋಟಿ ರೂ ನೀಡಲು ಮುಂದಾಗಿದೆಯಂತೆ. ಆದರೇ ಚಿತ್ರತಂಡ ಈ ಆಫರ್ ಗೆ ಇನ್ನು ಒಪ್ಪಿಗೆ ಸೂಚಿಸಿಲ್ಲವಂತೆ. ಇಷ್ಟೊಂದು ದೊಡ್ಡ ಮೊತ್ತದ ಒಟಿಟಿ ಆಫರ್ ಬೇರೆ ಯಾವ ಚಿತ್ರಕ್ಕೂ ಸಿಕ್ಕಿರುವುದು ಅನುಮಾನವಾಗಿದೆ. ಒಟಿಟಿಯಿಂದಲೇ ಇಷ್ಟು ದೊಡ್ಡ ಮೊತ್ತಗಳಿಸುವ ಸಲಾರ್, ಚಿತ್ರಮಂದಿರದಿಂದ ಇನ್ನು ಎಷ್ಟು ಗಳಿಸಬಹುದು ಎಂಬುದನ್ನ ಪಂಡಿತರು ಲೆಕ್ಕ ಹಾಕುತ್ತಿದ್ದಾರೆ. ಈ ಬಗ್ಗೆ ನಿಮ್ಮ ಮುಕ್ತ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ.
Comments are closed.