ಪ್ರತಿ ಹಾಡು ಹಾಡುವ ಮುನ್ನ ಲತಾ ಮಂಗೇಶ್ಕರ್ ಅವರು ಈ ಮೂರು ಪದಾರ್ಥಗಳಲ್ಲಿ ಒಂದನ್ನು ತಿನ್ನುತ್ತಿದ್ದರು ಯಾಕೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಇಂದು ನಮ್ಮ ಭಾರತ ದೇಶದ ನೈಟಿಂಗೆಲ್ ಎಂದು ಖ್ಯಾತರಾಗಿರುವ ಲತಾ ದೀದಿ ತಮ್ಮ 92ನೇ ವಯಸ್ಸಿಗೆ ಮಹಾಮಾರಿಯ ಕಾರಣದಿಂದಾಗಿ ಹಾಗೂ ಬಹು ಅಂಗಾಂಗ ವೈಫಲ್ಯದಿಂದ ನಮ್ಮನ್ನೆಲ್ಲಾ ಅಗಲಿ ಸ್ವರ್ಗಸ್ಥ ರಾಗಿದ್ದಾರೆ. ನಮ್ಮ ಭಾರತ ದೇಶ ಎಂತೆಂತಹ ಹಾಡುಗಾರರನ್ನು ನೋಡಿರಬಹುದು ಆದರೆ ಲತಾಮಂಗೇಶ್ಕರ್ ಅವರಂತಹ ಅದ್ವಿತೀಯ ಹಾಡುಗಾರರನ್ನು ಕಂಡಿರಲು ಖಂಡಿತವಾಗಿ ಸಾಧ್ಯವಿಲ್ಲ. ಈಗಾಗಲೇ ಅವರು 36 ಭಾಷೆಗಳಲ್ಲಿ 50 ಸಾವಿರಕ್ಕೂ ಅಧಿಕ ಹಾಡುಗಳಿಗೆ ಧ್ವನಿಯಾಗಿ ಇರುವುದು ನಿಜಕ್ಕೂ ಎಲ್ಲರೂ ಹೆಮ್ಮೆಪಡುವಂತಹ ವಿಷಯ.
ಇಂದು ಲತಾ ಮಂಗೇಶ್ಕರ್ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ರಾಜಕೀಯ ಹಾಗೂ ಸಿನಿಮಾ ಕ್ಷೇತ್ರದ ಗಣ್ಯರು ಕಂಬನಿ ಮಿಡಿದಿದ್ದಾರೆ. ನಮ್ಮ ಭಾರತ ದೇಶದ ಅನರ್ಘ್ಯ ಪ್ರತಿಭೆಗಳಲ್ಲಿ ಲತಾಮಂಗೇಶ್ಕರ್ ಅವರು ಕೂಡ ಒಬ್ಬರಾಗಿದ್ದಾರೆ. ಲತಾ ಮಂಗೇಶ್ಕರ್ ಅವರು ಕೆಲವು ಸಮಯಗಳ ಹಿಂದೆ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ತಿಳಿಸಿರುವಂತೆ ಮೊದಲಿಗೆ ಹಾಡನ್ನು ಹಾಡಿದ್ದು 1941 ರಲ್ಲಿ. ರೇಡಿಯೋ ಗಾಗಿ ಸ್ಟುಡಿಯೋದಲ್ಲಿ ಎರಡು ಹಾಡನ್ನು ಹಾಡಿದ್ದರು. ಹೀಗಾಗಿ ಅವರು ಹಾಡುಗಾರಿಕೆ ಕ್ಷೇತ್ರದಲ್ಲಿ ಬರೋಬ್ಬರಿ 80 ವರ್ಷಗಳನ್ನು ಕಳೆದಿದ್ದಾರೆ.
ಅದೆಷ್ಟೋ ಸಿನಿಮಾಗಳು ಲತಾಮಂಗೇಶ್ಕರ್ ರವರ ಹಾಡುಗಳಿಂದಲೇ ಬಾಕ್ಸಾಫೀಸ್ ನಲ್ಲಿ ಸೂಪರ್ ಹಿಟ್ ಆಗಿರುವುದನ್ನು ಕೂಡ ನಾವು ನೋಡಿದ್ದೇವೆ. ಇಂದಿನ ಲೇಖನಿಯಲ್ಲಿ ನಾವು ನಿಮಗೆ ತಿಳಿಯದಿರುವಂತಹ ಒಂದು ವಿಚಾರದ ಕುರಿತಂತ ಹೇಳಲು ಹೊರಟಿದ್ದೇವೆ. ಹೌದು ಸ್ನೇಹಿತರೆ ಲತಾಮಂಗೇಶ್ಕರ್ ರವರು ಮೊದಲೆಲ್ಲ ಹಾಡುವ ಮೊದಲು ಐಸ್ ಕ್ರೀಮ್ ಅಥವಾ ಮೆಣಸಿನಕಾಯಿ ಇಲ್ಲವೇ ಉಪ್ಪಿನಕಾಯಿಯನ್ನು ತಿನ್ನುತ್ತಿದ್ದರಂತೆ. ಇದರಿಂದಾಗಿ ಅವರ ಹಾಡಿನ ನಿಯಂತ್ರಣ ಎನ್ನುವುದು ಅವರಿಗೆ ಚೆನ್ನಾಗಿ ಸಿಗುತ್ತಿತ್ತು ಎಂದು ಭಾವಿಸಲಾಗಿದೆ. ಅದರ ಹಿಂದಿನ ಕಾರಣವೇನೇ ಇರಲಿ ಆದರೆ ಲತಾ ಮಂಗೇಶ್ಕರ್ ಅವರ ಹಾಡು ಅಂದಿಗೂ ಇಂದಿಗೂ ಎಂದೆಂದಿಗೂ ಕೂಡ ಹಚ್ಚಹಸಿರಾಗಿ ಎಲ್ಲರ ಮನದಾಳದಲ್ಲಿ ಅನುದಿನವೂ ರಿಂಗಣಿಸುತ್ತದೆ.
Comments are closed.