ಸಮಂತಾ ಇಂದ ದೂರ ಆದ ಕೆಲವೇ ದಿನಗಳಲ್ಲಿ ಸಮಂತಾ ರವರ ಹಾದಿಯಲ್ಲಿ ನಡೆಯಲು ಮುಂದಾದ ನಾಗ ಚೈತನ್ಯ, ಏನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆಲ್ಲರಿಗೂ ಗೊತ್ತಿರೋ ಹಾಗೆ ಟಾಲಿವುಡ್ ಚಿತ್ರರಂಗದ ಖ್ಯಾತ ಜೋಡಿಗಳು ಆಗಿರುವ ಸಮಂತ ಹಾಗೂ ನಾಗಚೈತನ್ಯ ಇಬ್ಬರೂ ಕೂಡ ವಿವಾಹ ವಿಚ್ಛೇದನವನ್ನು ಪಡೆದುಕೊಂಡು ಈಗಾಗಲೇ ಹಲವಾರು ತಿಂಗಳುಗಳು ಕಳೆದು ಹೋಗಿದೆ. ಇನ್ನು ಸಮಂತ ಅವರ ವಿಚಾರಕ್ಕೆ ಬರುವುದಾದರೆ ಈಗಾಗಲೇ ಹಲವಾರು ಚಿತ್ರ ಹಾಗು ವೆಬ್ ಸೀರೀಸ್ ಗಳಿಂದಾಗಿ ಇವರ ಜನಪ್ರಿಯತೆಯನ್ನು ಈಗಾಗಲೇ ಬಹುತೇಕ ಭಾರತೀಯ ಚಿತ್ರರಂಗದ ಎಲ್ಲಾ ಪ್ರಮುಖ ಭಾಷೆಗಳಿಗೂ ಕೂಡ ವಿಸ್ತರಣೆಯಾಗಿದೆ.
ಅದರಲ್ಲೂ ಫ್ಯಾಮಿಲಿ ಮ್ಯಾನ್ ವೆಬ್ ಸೀರೀಸ್ ನಿಂದಾಗಿ ಸಮಂತ ಅವರ ಜನಪ್ರಿಯತೆಯನ್ನು ವುದು ಈಗಾಗಲೇ ದ್ವಿಗುಣವಾಗಿ ಹೆಚ್ಚಾಗಿದೆ. ರಾಜಿ ಪಾತ್ರದ ಬೋಲ್ಡ್ ನೆಸ್ ಎಲ್ಲರಿಗೂ ಕೂಡ ಇಷ್ಟವಾಗಿದೆ. ಇದೇ ಕಾರಣದಿಂದಾಗಿಯೇ ಅಲ್ಲು ಅರ್ಜುನ್ ನಟನೆಯ ಪುಷ್ಪ ಚಿತ್ರದ ಐಟಂ ಸಾಂಗ್ ಕೂಡ ಇವರ ಪಾಲಿಗೆ ಬಂತು ಎಂದು ಹೇಳಬಹುದಾಗಿದೆ. ಪುಷ್ಪ ಚಿತ್ರದ ಐಟಂ ಸಾಂಗ್ ಅಂತೂ ಈಗಾಗಲೇ ಮಿಲಿಯನ್ ಗಟ್ಟಲೆ ವೀಕ್ಷಣೆ ಪಡೆದು ನಂತರ ಅವರ ಜನಪ್ರಿಯತೆ ಹಾಗೂ ಬೇಡಿಕೆ ಎನ್ನುವುದನ್ನು ಮಾರ್ಕೆಟ್ನಲ್ಲಿ ಇನ್ನಷ್ಟು ವಿಸ್ತರಿಸಿದೆ ಎಂದು ಹೇಳಬಹುದಾಗಿದೆ. ಈಗ ಅವರ ವಿಚ್ಛೇದಿತ ಪತಿ ಆಗಿರುವ ನಾಗಚೈತನ್ಯ ಕೂಡ ಇದೇ ಹಾದಿಯಲ್ಲಿ ನಡೆಯಲು ನಿರ್ಧರಿಸಿದ್ದಾರೆ.
ಹೌದು ಇತ್ತೀಚಿನ ದಿನಗಳಲ್ಲಿ ಸ್ಟಾರ್ ನಟರು ಕೂಡ ವೆಬ್ ಸೀರೀಸ್ ಗಳಲ್ಲಿ ನಟಿಸಲು ಆರಂಭಿಸಿದ್ದಾರೆ. ಸಿನಿಮಾಗಳ ಚಿತ್ರಮಂದಿರಗಳಲ್ಲಿ ಬಿಡುಗಡೆ ಆಗುವಂತಹ ಪರಿಕ್ರಮ ಇತ್ತೀಚಿನ ದಿನಗಳಲ್ಲಿ ಕಡಿಮೆಯಾಗಿದ್ದು ಓಟಿಟಿ ನಲ್ಲಿ ಪ್ರೇಕ್ಷಕರು ಸಿನಿಮಾಗಳನ್ನು ನೋಡುವುದಕ್ಕೆ ಆರಂಭಿಸಿದ್ದಾರೆ. ಹೀಗಾಗಿ ನಾಗಚೈತನ್ಯ ರವರು ಧೂಥ ಎನ್ನುವ ವೆಬ್ ಸೀರೀಸ್ ನಲ್ಲಿ ನಟಿಸುವುದಕ್ಕೆ ಓಕೆ ಎಂದಿದ್ದಾರೆ. ಮೂಲಗಳ ಪ್ರಕಾರ ಇದು ಹಾರರ್ ತ್ರಿಲ್ಲರ್ ಎಂಬುದಾಗಿ ಕೇಳಿಬರುತ್ತಿದೆ. ಹೆಂಡತಿಯಂತೆ ತಾನು ಕೂಡ ಈ ಮೂಲಕ ಜನಪ್ರಿಯತೆಯನ್ನು ಪಡೆದುಕೊಳ್ಳುವ ನಿರ್ಧಾರವನ್ನು ಮಾಡಿದ್ದಾರೆ ಎಂದು ಹೇಳಬಹುದಾಗಿದೆ.
Comments are closed.