ಮೇಕಪ್ ಇಲ್ಲದ ಫೋಟೋ ಹಂಚಿಕೊಂಡ ‘ಕನ್ನಡತಿ’ ನಟಿ ರಂಜನಿ ರಾಘವನ್; ಅಭಿಮಾನಿಗಳಿಂದ ಮೆಚ್ಚುಗೆ. ಹೇಗಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ, ಸದ್ಯ ಕನ್ನಡ ಧಾರಾವಾಹಿ ಪ್ರೇಮಿಗಳ ಮನೆ ಮನಗಳಲ್ಲಿ ಕನ್ನಡತಿಯದ್ದೇ ಕಲರವ. ಕನ್ನಡತಿ ಧಾರಾವಾಹಿ ಪ್ರಸಾರವಾದಾಗಿನಿಂದ ಇಲ್ಲಿಯವರೆಗೂ ದಿನದಿಂದ ದಿನಕ್ಕೆ ಹೆಚ್ಚೆಚ್ಚು ವೀಕ್ಷಕರನ್ನು, ಅಭಿಮಾನಿಗಳನ್ನು ಗಳಿಸಿಕೊಂಡೇ ಬರುತ್ತಿದೆ. ಅದರಲ್ಲೂ ರಂಜನಿಯವರಂತೂ ಬಿಗ್ ಫ್ಯಾನ್ ಫಾಲೋವರ್ಸ್ ನ್ನು ಹೊಂದಿದ್ದಾರೆ.
ಹುಡುಗಿಯರು ಬರಿ ಗ್ಲಾಮರಸ್ ಆಗಿದ್ರೆ, ಫುಲ್ ಮೇಕಪ್ ನಲ್ಲಿ ತರಾವರಿ ಉಡುಪುಗಳನ್ನು ಹಾಕೊಂಡು ಪರದೆ ಮೇಲೆ ಕಾಣಿಸಿಕೊಂಡ್ರೆ ಮಾತ್ರ ಜನ ಇಷ್ಟ ಪಡುತ್ತಾರೆ ಅನೋದನ್ನ ಸುಳ್ಳು ಮಾಡಿರೋದು ಕನ್ನಡತಿಯ ಕನ್ನಡ ಟೀಚರ್ ಭುವಿ ಅಲಿಯಾಸ್ ಭುವನೇಶ್ವರಿ ಅಲಿಯಾಸ್ ಸೌಪರ್ಣಿಕಾ! ಹೌದು ರಂಜನಿ ರಾಘವನ್ ಭುವಿ ಪಾತ್ರದಲ್ಲಿ ಅತ್ಯಂತ ಸಿಂಪಲ್ ಆಗು ಕಾಣುತ್ತಾರೆ. ಎಷ್ಟೋ ಜನ ನಿವ್ಯಾಕೆ ಅಷ್ಟು ಸಿಂಪಲ್ ಸೀರೆಗಳನ್ನೇ ಉಡುತ್ತೀರಿ ಎಂದು ಕೇಳಿದ್ದಕ್ಕೆ ರಂಜನಿ ಈ ಪಾತ್ರಕ್ಕೆ ಅದೇ ಸೂಟ್ ಆಗತ್ತೆ ಅಂತ ಉತ್ತರಿಸಿದ್ದಾರೆ. ಆದರೆ ಎಷ್ಟೇ ಸಿಂಪಲ್ ಆಗಿದ್ರೂ ಈ ಪಾತ್ರವನ್ನು ಬೇರೆ ಯಾರೂ ನಿಭಾಯಿಸಲು ಸಾಧ್ಯವೇ ಇಲ್ಲವೇನೋ ಎನ್ನುವಷ್ಟರ ಮಟ್ಟಿಗೆ ಪಾತ್ರಕ್ಕೆ ಜೀವ ತುಂಬಿದ್ದು ಮಾತ್ರ ರಂಜನಿ ರಾಘವನ್!
ಇನ್ನು ರಂಜನಿ ಅವರ ಮೇಕಪ್ ವಿಷಯಕ್ಕೆ ಬಂದ್ರೆ, ಸಾಮಾನ್ಯವಾಗಿ ಯಾರೂ ಸೆಲಿಬ್ರೆಟಿ ಅನ್ನಿಸಿಕೊಂಡವರು ಮೇಕಪ್ ಇಲ್ಲದೇ ಸಾಮಾಜಿಕ ವಲಯಗಳಲ್ಲಿ ಕಾಣಿಸಿಕೊಳ್ಳುವುದೇ ಇಲ್ಲ. ಲಘು ಮೇಕಪ್ ಅನ್ನಾದರೂ ಮಾಡಿಕೊಂಡೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋಗಳನ್ನೋ, ಫೋಟೋಗಳನ್ನೋ ಪೋಸ್ಟ್ ಮಾಡುತ್ತಾರೆ. ಆದರ ನಟಿ ರಂಜನಿ ಹಾಗಲ್ಲ, ಇಷ್ಟು ಫೇಮಸ್ ಆಗಿದ್ರೂ ಕನ್ನಡತಿ ಪಾತ್ರದಲ್ಲಿಯಂತೆ ನಿಜಜೀವನದಲ್ಲಿಯೂ ಸಿಂಪಲ್ ಆಗಿಯೇ ಇದ್ಡಾರೆ. ಸಾಕಷ್ಟು ಬಾರಿ ಮೇಕಪ್ ಇಲ್ಲದ ಪೋಟೋಗಳನ್ನು, ವಿಡಿಯೋಗಳನ್ನು ಹಂಚಿಕೊಂಡು ಅಭಿಮಾನಿಗಳಿಗೆ ಇನ್ನಷ್ಟು ಫೆಮಿಲಿಯರ್ ಅನ್ನಿಸಿದ್ದಾರೆ. ಸರಳತೆಯೇ ಸೌಂದರ್ಯ ಅನ್ನುತ್ತಾರೆ ನಮ್ಮ ಕನ್ನಡ ಟೀಚರ್!
Comments are closed.