ಎರಡನೇ ಮಗು ನಂತರ ತೂಕ ಇಳಿಸಿಕೊಂಡ ಸಮೀರಾ ರೆಡ್ಡಿ, ಒಮ್ಮೆಲೇ ಎಷ್ಟು ಕೆಜಿ ಕಡಿಮೆಯಾಗಿದ್ದಾರೆ ಗೊತ್ತೇ?? ಹೇಗಿದ್ದಾರೆ ನೋಡಲು ಈಗ ಗೊತ್ತೇ??
ನಮಸ್ಕಾರ ಸ್ನೇಹಿತರೇ ನಿಮಗೆ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಚಿರು ಸರ್ಜಾ ಕಾಂಬಿನೇಷನ್ ನಲ್ಲಿ ಮೂಡಿಬಂದಿರುವ ವರದನಾಯಕ ಚಿತ್ರದ ಕುರಿತಂತೆ ನೆನಪಿರಬಹುದು. ಈ ಚಿತ್ರದಲ್ಲಿ ಕಿಚ್ಚ ಸುದೀಪ್ ಅವರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದ ಸಮೀರಾ ರೆಡ್ಡಿ ರವರ ಕುರಿತಂತೆ ಹೇಳಲು ಹೊರಟಿದ್ದೇವೆ. ಸಮೀರಾ ರೆಡ್ಡಿ ಅವರು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲ ಬಹುತೇಕ ದಕ್ಷಿಣ ಭಾರತ ಚಿತ್ರರಂಗದ ಎಲ್ಲಾ ಚಿತ್ರಗಳಲ್ಲಿ ಕೂಡ ಸ್ಟಾರ್ ನಟರೊಂದಿಗೆ ನಟಿಸಿರುವಂತಹ ಅನುಭವ ಹೊಂದಿರುವ ಅದ್ಭುತ ನಟಿ.
ಇನ್ನು ಇತ್ತೀಚಿನ ಸಮಯಗಳಲ್ಲಿ ಅವರು ಚಿತ್ರಗಳಲ್ಲಿ ಕಾಣಿಸಿಕೊಳ್ಳುವುದನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಿದ್ದಾರೆ ಎಂದು ಹೇಳಬಹುದಾಗಿದೆ. ಇಷ್ಟು ಮಾತ್ರವಲ್ಲದೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅವರ ಫೋಟೋವನ್ನು ನೋಡಿದವರಲ್ಲ ಅವರನ್ನು ಟೀಕೆ ಮಾಡುತ್ತಿದ್ದರು. ಅದೇನೆಂದರೆ ಸಮೀರಾ ರೆಡ್ಡಿ ಅವರು ಎರಡನೇ ಮಗುವನ್ನು ಹೆತ್ತ ನಂತರ ಅವರ ತೂಕದಲ್ಲಿ ಗಣನೀಯ ಹೆಚ್ಚಳವಾಗಿತ್ತು. ಈ ಕಾರಣದಿಂದಾಗಿ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ನೀನೊಬ್ಬ ನಟಿನಾ ಇಷ್ಟೊಂದು ದಪ್ಪ ಆಗಿದೆಯಲ್ಲ ಎಂಬುದಾಗಿ ರೇಗಿಸುತ್ತಿದ್ದರು.
ಈ ಟೀಕೆಗೆಲ್ಲ ಈಗ ಸಮೀರಾ ರೆಡ್ಡಿ ಅವರು ಒಂದೊಳ್ಳೆ ಉತ್ತರವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಲವ್ ಸಂದರ್ಭದಲ್ಲಿ ಮುಂಬೈಯಿಂದ ಗೋವಾಗೆ ಶಿಫ್ಟ್ ಆಗಿ ಅಲ್ಲಿ ತಮ್ಮ ಅತ್ತೆ ಮನೆಯಲ್ಲಿ ನೆಲೆಸಿದ್ದರು. ಡುಮ್ಮಿ ಎಂದು ಹೇಳುತ್ತಿದ್ದ ಅವರಿಗೆಲ್ಲ ತಮ್ಮ ಅದ್ಭುತ ಟ್ರಾನ್ಸ್ ಫಾರ್ಮೇಶನ್ ಮೂಲಕ ಸರಿಯಾದ ಉತ್ತರವನ್ನು ನೀಡಿದ್ದಾರೆ ಎಂದು ಹೇಳಬಹುದಾಗಿದೆ. ಎರಡನೇ ಮಗುವಿನ ಹೆರಿಗೆ ನಂತರ 92 ಕೆಜಿ ಇದ್ದ ಸಮೀರಾ ರೆಡ್ಡಿ ಅವರು ಫಿಟ್ನೆಸ್ ಕಾರ್ಯ ಚಟುವಟಿಕೆಗಳ ಮೂಲಕ ಹಾಗೂ ಅದ್ಭುತ ಡಯಟ್ ಮೂಲಕ ಈಗ 81 ಕೆಜಿಗೆ ಬಂದಿದ್ದಾರೆ. ಟ್ರಾನ್ಸ್ ಫಾರ್ಮೇಶನ್ ಅನ್ನು ನೀವು ಫೋಟೋಗಳ ಮೂಲಕ ನೋಡಬಹುದಾಗಿದೆ. ನಿಜಕ್ಕೂ ಕೂಡ ಈ ವಿಚಾರ ಎಲ್ಲರಿಗೂ ಸ್ಫೂರ್ತಿ ಮೂಡಿಸುವಂತದ್ದು.
Comments are closed.