ಧನಂಜಯ್, ರಂಗಾಯಣ ರಘು ರವರಿಗೂ ಹೇಗೆ ಪರಿಚಯ ಗೊತ್ತೇ?? ಬಡವ ರಾಸ್ಕಲ್ ಸಿನೆಮಾಗೆ ಸಂಭಾವನೆ ಬಗ್ಗೆ ಕೇಳಿದಾಗ ರಂಗಾಯಣ ರವರು ಹೇಳಿದ್ದೇನು ಗೊತ್ತೇ??
ನಮಸ್ಕಾರ ಸ್ನೇಹಿತರೇ ನಮ್ಮ ಕನ್ನಡ ಚಿತ್ರರಂಗದಲ್ಲಿ ಕೆಲವೊಂದು ಕಾಂಬಿನೇಷನ್ ಗಳು ನಿಜಕ್ಕೂ ಕೂಡ ವರ್ಕೌಟ್ ಆಗಿ ಪ್ರೇಕ್ಷಕರ ಮಾನವನ್ನು ಕೂಡ ರಂಜಿಸುವಲ್ಲಿ ಯಶಸ್ವಿಯಾಗುತ್ತದೆ. ನಾವು ಇಂದು ಹೇಳಲು ಹೊರಟಿರುವ ಕಾಂಬಿನೇಷನ್ ಎಂದರೆ ಡಾಲಿ ಧನಂಜಯ್ ಹಾಗೂ ರಂಗಾಯಣ ರಘು. ಡಾಲಿ ಧನಂಜಯ್ ರವರು ಯಾವುದೇ ಹಿನ್ನೆಲೆ ಇಲ್ಲದೆ ಸ್ವಂತ ಪರಿಶ್ರಮದ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನನ್ನು ತಾನು ಕನ್ನಡ ಚಿತ್ರರಂಗದಲ್ಲಿ ಬೇಡಿಕೆಯ ನಟನಾಗಿ ಮಾರ್ಪಾಡು ಮಾಡಿಕೊಂಡಂತಹ ಸೆಲ್ಫ್ ಮೇಡ್ ಸ್ಟಾರ್ ಎಂದು ಹೇಳಿದರೆ ತಪ್ಪಾಗಲಾರದು.
ಇಂದು ಕೇವಲ ಕನ್ನಡ ಚಿತ್ರರಂಗದಲ್ಲಿ ಮಾತ್ರವಲ್ಲದೆ ಮೊನ್ನೆಮೊನ್ನೆಯಷ್ಟೇ ಬಿಡುಗಡೆಯಾಗಿರುವ ಸೂಪರ್ ಹಿಟ್ ತೆಲುಗು ಚಿತ್ರವಾಗಿರುವ ಪುಷ್ಪದಲ್ಲಿ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಇನ್ನು ರಂಗಾಯಣ ರಘು ರವರು ಕೂಡ ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ಪೋಷಕ ನಟನಾಗಿ ಮಿಂಚಿ ಮರೆಯುತ್ತಿರುವವರು. ಇನ್ನು ಇವರಿಬ್ಬರು ಇತ್ತೀಚೆಗಷ್ಟೆ ಬಿಡುಗಡೆಯಾಗಿರುವ ಬಡವ ರಾಸ್ಕಲ್ ಚಿತ್ರದಲ್ಲಿ ಎಲ್ಲರ ಮೆಚ್ಚುಗೆಯನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದೇ ಸಂದರ್ಭದಲ್ಲಿ ವೇದಿಕೆಯಲ್ಲಿ ಡಾಲಿ ಧನಂಜಯ್ ರವರು ರಂಗಾಯಣ ರಘು ರವರನ್ನು ಮೊದಲು ಎಲ್ಲಿ ಭೇಟಿಯಾಗಿದ್ದೆ ಎಂಬುದರ ಕುರಿತಂತೆ ಹಂಚಿಕೊಂಡಿದ್ದಾರೆ.
ಹೌದು ಜರ್ಮನ್ ಫ್ರೆಂಡ್ ಒಬ್ಬರ ಮೂಲಕ ಸಿನಿಮಾಗೂ ಕಾಲಿಡುವ ಮುನ್ನವೇ ಅಭಿಮಾನಿ ಎಂಬುದಾಗಿ ಹೇಳಿ ರಂಗಾಯಣರಘು ರವರನ್ನು ನಾನು ಭೇಟಿಯಾಗಿದ್ದೇನೆ ಎಂಬುದಾಗಿ ಬಡವ ರಾಸ್ಕಲ್ ಚಿತ್ರದ ಕಾರ್ಯಕ್ರಮದಲ್ಲಿ ವೇದಿಕೆಯ ಮೇಲೆ ಹೇಳಿಕೊಂಡಿದ್ದಾರೆ. ಇನ್ನು ಸಂಭಾವನೆ ವಿಚಾರವಾಗಿ ಮೊದಲಿಗೆ ಚಿತ್ರಕ್ಕಾಗಿ ಅಪ್ರೋಚ್ ಮಾಡುವ ಸಂದರ್ಭದಲ್ಲಿ ರಂಗಾಯಣರಘು ರವರಿಗೆ ಕೇಳಿದಾಗ. ರಂಗಾಯಣ ರಘು ರವರು ಡಾಲಿ ಧನಂಜಯ್ ರವರಿಗೆ ನೀನೊಬ್ಬ ಕಲಾವಿದ ಮೊದಲ ಬಾರಿಗೆ ಸಿನಿಮಾ ನಿರ್ಮಾಪಕನಾಗಿ ಕಾಲಿಡಲು ಹೊರಟಿದ್ದೀಯ, ಸಿನಿಮಾ ಚೆನ್ನಾಗಿ ಪೂರ್ಣವಾದ ನಂತರ ನಿನಗೆ ಸಂತೋಷ ವಾದದ್ದನ್ನು ( ಮೊತ್ತವನ್ನು ) ನನಗೆ ತಂದು ಕೊಡು ಎಂಬುದಾಗಿ ಹೇಳಿದ್ದರಂತೆ. ಈ ವಿಚಾರವನ್ನು ವೇದಿಕೆಯಲ್ಲಿ ಡಾಲಿ ಧನಂಜಯ್ ರವರು ಹಂಚಿಕೊಂಡಿರುವ ವಿಡಿಯೋ ಕೊಡ ಈಗ ವೈರಲ್ ಆಗುತ್ತಿದೆ. ನಿಜಕ್ಕೂ ಕೂಡ ಇಂತಹ ಅದ್ಭುತ ಕಲಾವಿದರನ್ನು ಹಾಗೂ ಒಳ್ಳೆಯ ಮನಸ್ಸಿನವರನ್ನು ಹೊಂದಿರುವ ಕನ್ನಡ ಚಿತ್ರರಂಗವೇ ಧನ್ಯ ಎಂದು ಹೇಳಬಹುದಾಗಿದೆ.
Comments are closed.