ವಿಶ್ವದಲ್ಲಿಯೇ ಸೌಂದರ್ಯವತಿಯರನ್ನು ಹೊಂದಿರುವ ರಷ್ಯಾದ ಈ ಮಾಡೆಲ್ ಗಳನ್ನು ನೋಡಿದರೆ ಯುದ್ಧವೇ ಮರೆತು ಹೋಗುತ್ತದೆ. ಹೇಗಿದ್ದಾರೆ ಗೊತ್ತೇ??
ನಮಸ್ಕಾರ ಸ್ನೇಹಿತರೇ ಜಾಗತಿಕವಾಗಿ ಯಾವ ವಿಚಾರ ಅತ್ಯಂತ ಹೆಚ್ಚಾಗಿ ಸದ್ದು ಮಾಡುತ್ತಿದೆ ಎನ್ನುವುದರ ಕುರಿತಂತೆ ನಿಮಗೆಲ್ಲರಿಗೂ ಮಾಹಿತಿ ಇದೆ. ರಷ್ಯಾ ಹಾಗೂ ಉಕ್ರೇನ್ ದೇಶಗಳ ಆಂತರಿಕ ಬಿಕ್ಕಟ್ಟು ಈಗ ಎರಡು ದೇಶಗಳ ಪರಸ್ಪರ ಸಮರದ ವರೆಗೂ ಬಂದು ನಿಂತಿದೆ. ನಿಜಕ್ಕೂ ಕೂಡ ಇದು ಜಾಗತಿಕ ಶಾಂತಿಯ ವಿಚಾರವಾಗಿ ಕಳವಳಕಾರಿ ಆದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಂದರ್ಭದಲ್ಲಿ ಸಮರವನ್ನು ಮರೆಸುವಂತಹ ಸೌಂದರ್ಯವನ್ನು ಹೊಂದಿರುವ ರಷ್ಯಾದ ಸೂಪರ್ ಮಾಡೆಲ್ ಗಳ ಕುರಿತಂತೆ ತಿಳಿಯೋಣ ಬನ್ನಿ.
ಹೌದು ರಷ್ಯಾದ ಸುಂದರಿಯರು ಜಾಗತಿಕವಾಗಿ ಸಾಕಷ್ಟು ಫೇಮಸ್ ಆಗಿದ್ದಾರೆ. ಅದರಲ್ಲೂ ಇಲ್ಲಿನ ಮಾಡೆಲ್ ಗಳು ನೋಡುವುದಕ್ಕೆ ಬೇರೆ ದೇಶದ ಮೊದಲ ಗಳಿಗೆ ಹೋಲಿಸಿದರೆ ಸಾಕಷ್ಟು ಸೌಂದರ್ಯವತಿಯರಾಗಿರುತ್ತಾರೆ. ಇನ್ನು ಈ ರಷ್ಯಾದ ಟಾಪ್ ಮೋಸ್ಟ್ ಸೂಪರ್ ಮಾಡೆಲ್ ಗಳು ಯಾರೆಲ್ಲ ಎಂಬುದನ್ನು ಒಂದೊಂದಾಗಿ ತಿಳಿಯುತ್ತ ಬನ್ನಿ.
ಐರಿನಾ ಶೇಕ್; ನೀಳವಾದ ದೇಹ ಹಾಗೂ ಹಸಿರು ಕಣ್ಣುಗಳು ಇವರ ಪ್ಲಸ್ ಪಾಯಿಂಟ್ ಗಳಾಗಿವೆ. 2004 ರಲ್ಲಿ ತಮ್ಮ ಸ್ಥಳೀಯ ಪ್ರದೇಶದ ಸೌಂದರ್ಯ ಸ್ಪರ್ಧೆಯನ್ನು ಗೆಲ್ಲುವುದರ ಮೂಲಕ ತಮ್ಮ ಮಾಡೆಲ್ ವೃತ್ತಿಯ ಬುನಾದಿಯನ್ನು ಪ್ರಾರಂಭಿಸುತ್ತಾರೆ. ಆಗ ಅವರಿಗೆ ಕೇವಲ ಹದಿನೆಂಟು ವರ್ಷವಾಗಿತ್ತು. ಅಲ್ಲಿಂದ ಮಾಡಲಿಂಗ್ ವೃತ್ತಿಯನ್ನು ಪ್ರಾರಂಭಿಸಿರುವ ಐರಿನಾ ಇಲ್ಲಿಯವರೆಗೂ ಹಲವಾರು ಬ್ರಾಂಡ್ ಹಾಗೂ ಮಾಗಜಿನ್ ಮುಖಪುಟಗಳಲ್ಲಿ ತಮ್ಮ ಪ್ರಾಬಲ್ಯವನ್ನು ಸಾಧಿಸಿಕೊಂಡು ಬರುತ್ತಿದ್ದಾರೆ.
ನಟಾಲಿಯಾ ವೊಡಿಯಾನೋವಾ; ಸೌಂದರ್ಯ ಎಂಥ ವರಮಾನವನ್ನು ಗೆಲ್ಲುತ್ತದೆ ಆದರೆ ಗುಣ ಎನ್ನುವುದು ಹೃದಯವನ್ನು ಮುಟ್ಟುತ್ತದೆ ಎಂದು ವಿಶ್ವಸುಂದರಿಯಾಗಿ ಇದ್ದಂತಹ ಮರ್ಲಿನ್ ಮನ್ರೋ ರವರು ಹೇಳಿದ್ದರು. ಈ ಮಾತು ನಟಾಲಿಯಾ ರವರಿಗೆ ಅನ್ವಯಿಸುತ್ತದೆ ಎಂದರೆ ತಪ್ಪಾಗಲಾರದು. ತನ್ನ ಇಬ್ಬರು ಸಹೋದರಿಯರೊಂದಿಗೆ ಬಡತನದಲ್ಲಿ ಬೆಳೆದು ಬಂದವರು. ತಮ್ಮ ತಾಯಿಗೆ ಸಹಾಯ ಮಾಡಬೇಕು ಎನ್ನುವ ದೃಷ್ಟಿಯಿಂದ ಶಾಲೆಯಿಂದ ಕೂಡ ಹೊರಬರುತ್ತಾರೆ. ಸ್ಥಳೀಯ ಮಾಡಲಿಂಗ್ ಏಜೆನ್ಸಿಗೆ ಸೇರಿದನಂತರ 17ನೇ ವಯಸ್ಸಿನಲ್ಲಿ ಫ್ರಾನ್ಸ್ನ ಪ್ಯಾರಿಸ್ನಲ್ಲಿ ರಾಂಪ್ ವಾಕ್ ಮಾಡುತ್ತಾರೆ. 2000 ಇಸವಿಯಲ್ಲಿ ಸೂಪರ್ ಮಾಡಲ್ ಆಗಿ ಮಾಡೆಲ್ ಜಗತ್ತಿಗೆ ಪರಿಚಿತರಾಗುತ್ತಾರೆ.
ಸಾಶಾ ಪಿವವೋರೋವಾ; ರಷ್ಯಾದ ರಾಜಧಾನಿಯಾಗಿರುವ ಮಾಸ್ಕೋದಲ್ಲಿ ಜನಿಸುತ್ತಾರೆ. ಇವರ ಬಾಯ್ಫ್ರೆಂಡ್ ಹಾಗೂ ಛಾಯಾಗ್ರಾಹಕರಾಗಿರುವ ಇಗೋರ್ ಇಶ್ನ್ಯಾಕೋವ್ ಮೂಲಕ ಇವರು ಮಾಡೆಲ್ ಜಗತ್ತಿಗೆ ಕಾಲಿಡುತ್ತಾರೆ. ಸಾಚಾರ್ ಅವರ ಹಲವಾರು ಸ್ಟೈಲಿಶ್ ಹಾಗೂ ಗ್ಲಾಮರಸ್ ಫೋಟೋಗಳನ್ನು ತೆಗೆದು ಅಮೆರಿಕಾದ ನ್ಯೂಯಾರ್ಕ್ ನ ಐ ಎಮ್ ಜಿ ಎನ್ನುವ ಮಾಡೆಲಿಂಗ್ ಏಜೆನ್ಸಿಗೆ ಕಳುಹಿಸುತ್ತಾನೆ. ಅಲ್ಲಿ ಆಯ್ಕೆಯಾದ ನಂತರ ಇವರ ಪ್ರೊಫೆಷನಲ್ ಮಾಡಲಿಂಗ್ ಪ್ರಾರಂಭವಾಗುತ್ತದೆ.
ಅನ್ನಾ ವೈಲಿಟ್ಸಿನಾ; ರಷ್ಯಾ ದೇಶದ ಪ್ರಖ್ಯಾತ ಮಾಡೆಲ್ ಗಳಲ್ಲಿ ಇವರು ಕೂಡ ಅಗ್ರಗಣ್ಯರಾಗಿ ಕಾಣಿಸುತ್ತಾರೆ. ಇವರು ವೈದ್ಯಕೀಯ ಹಿನ್ನಲೇ ಉಳ್ಳಂತಹ ಕುಟುಂಬದಿಂದ ಬಂದವರು. ಚಿಕ್ಕಂದಿನಿಂದಲೂ ಕೂಡ ಮಾಡೆಲಿಂಗ್ ಕುರಿತಂತೆ ಆಸಕ್ತಿಯನ್ನು ಹೊಂದಿದಂತಹ ಇವರು ಅನಿರೀಕ್ಷಿತವಾಗಿ 15ನೇ ವಯಸ್ಸಿನಿಂದಲೇ ಮಾಡಲಿಂಗ್ ಪ್ರಾರಂಭಿಸುತ್ತಾರೆ. ನೋಡಲು ಸೌಂದರ್ಯವತಿ ಮಾತ್ರವಲ್ಲದೆ ಗುಣದಲ್ಲಿ ಕೂಡ ಅಪರಂಜಿ ಈಕೆ.
ಸಾಶಾ ಲುಸ್; ರಷ್ಯಾದ ಅತ್ಯಂತ ಯಶಸ್ವಿ ಮಾಡೆಲ್ ಗಳಲ್ಲಿ ಸಾಶಾ ಲುಸ್ ಪ್ರಥಮ ಸ್ಥಾನದಲ್ಲಿ ಕಾಣಸಿಗುತ್ತಾರೆ. ಚಿಕ್ಕಂದಿನಿಂದಲೂ ಬ್ಯಾಲೆ ಡ್ಯಾನ್ಸರ್ ಆಗುವ ಕನಸನ್ನು ಕಟ್ಟಿಕೊಂಡಿದ್ದವರು ಆದರೆ ಪಾದದ ಸಮಸ್ಯೆಯಿಂದಾಗಿ ಅವರ ಕನಸು ಪೂರ್ಣಗೊಳ್ಳಲಿಲ್ಲ. ಇವರು 13ನೇ ವಯಸ್ಸಿನಲ್ಲಿ ಇರಬೇಕಾದರೆ ಅವರ ತಾಯಿ ಮಾಡಲಿಂಗ್ ಏಜೆನ್ಸಿಗೆ ಕರೆದುಕೊಂಡು ಹೋಗಿ ಕ್ಯಾಟ್ ವಾಕ್ ಮಾಡಲು ಹೇಳಿಕೊಡುತ್ತಾರೆ. ಅದಾದ ಹಲವಾರು ವರ್ಷಗಳ ನಂತರ ಮಾಸ್ಕೋದಲ್ಲಿ ನಡೆದಂತಹ ಫ್ಯಾಷನ್ ವೀಕ್ ನಲ್ಲಿ ತನ್ನ ಮೊದಲ ಕ್ಯಾಟ್ ವಾಕ್ ಮಾಡುವ ಮೂಲಕ ಎಲ್ಲರನ್ನೂ ತನ್ನ ಫ್ಯಾನ್ಸ್ ಅನ್ನಾಗಿ ಮಾಡಿಕೊಳ್ಳುತ್ತಾರೆ. ನೋಡಿದ್ರಲ್ಲ ಇವರೇ ಅಗ್ರೆಸಿವ್ ರಷ್ಯಾ ದೇಶದ ಸೂಪರ್ ಸೌಂದರ್ಯ ಉಳ್ಳಂತಹ ಮಾಡೆಲ್ ಗಳು.
Comments are closed.